ಮಾಧವ ರಕ್ಷಿಸು ಮಧುಸೂದನ ವೃಥಾ
ಕ್ರೋಧವ್ಯಾಕೊ ಸುರ ಸೌಖ್ಯ ಸಾಧನ ಪ.
ದೇಹದಲ್ಲಿ ಬಲ ಕುಂದುತಲಳುವೆ ಮುಂದ-
ಕ್ಕಾಹ ರೀತಿ ತಿಳಿಯದೆ ಬಳಲುವೆ
ಮೋಹ ಪಾಶದಲಿ ಸಿಕ್ಕಿ ನರಳುವೆ ಚಿತ್ಸಂ-
ದೋಹ ಎಂದು ತವಪಾದ ನೆಳಲೀವೆ 1
ಯಾತಕಿಂತು ಸಾವಕಾಶ ಮಾಡುವಿ ದೀನ
ನಾಥ ಬಹು ಪರಿಕಿಸಿ ನೋಡುವಿ
ಪಾತಕಾಂಶವಿರಲು ನೀಡಾಡುವಿ ಎನ್ನ
ಮಾತನ್ಯಾಕೆ ಮರೆತು ಮುಂದೋಡುವಿ 2
ನಿತ್ಯವಾದ ನಿನ್ನ ಸೇವೆ ನಡೆಸಲು ತಕ್ಕ
ಶಕ್ತಿಯಿಲ್ಲ ಸ್ವರವನ್ನೆತ್ತರಿಸಲು
ಒತ್ತಿ ಬಹ ವಿಧ ವಿಧ ಕೊರೆತವು ಗಂಡ
ಕ್ಲೇಶ ಭರಿತವು 3
ಸಿರಿನಲ್ಲ ಹೀಗೆ
ಭೃತ್ಯನನ್ನು ಬಿಡುವುದು ಥರವಲ್ಲ
ದತ್ತ ಸ್ವಾತಂತ್ರ್ಯವರಿಯದ ಕ್ರಮವೆಲ್ಲ ತೀರಿ
ಕತ್ತಲೆ ಮುಸುಕಿದಂತಿರುವುದಲ್ಲ 4
ಮಾಯಕ ಮೋಹದಿ ಸಿಕ್ಕಿ ನೊಂದೆನು ತಿಮ್ಮ
ರಾಯ ಶೇಷ ಗಿರೀಶ ಕೇಳ್ಮುಂದೇನು
ಬಾಯ ಬಿಟ್ಟು ಬಿರಿನುಡಿಯಂದೆನು ಲಕ್ಷ್ಮೀ
ಪ್ರೀಯನೆಣಿಸದಿರದ ನೊಂದೆನು 5