ಸಾಧನಕೆ ಸಾಧನಾಖ್ಯಾನ ವೃಂದಾವನಾ ಪ
ಸೋದೆ ಪುರವಾಸಿ ಶ್ರೀ ವಾದಿರಾಜರ ಕರುಣಾ ಅ.ಪ.
ಕುರುಡು ಶುನಕವು ತಾನು ನೆರೆದ ಸಂತೆಗೆ ಬಂದುಸರಕು ವಿನಿಮಯ ಮಾಡಿ ಮರಳಿ ಬರುತಿರುವಾ |ಪರಿಯ ಮಾಡದಲೆನ್ನ ಇರುವ ಸ್ವಪ್ನದಿ ತಿಳುಹಿಕರುಣಿಸಿಹೆ ಮಹ ಮಹಿಮ ಗುರು ಸಾರ್ವಭೌಮಾ 1
ಕಾರ್ಯ ವೃಂದಾವನಚಾರ್ಯರೊಡೆವೆರಸುತ್ತಧೈರ್ಯದಿಂದಲಿ ಗೈಸಿ ಭಾರ್ಯಸಹಕೃತದಿ |ಪ್ರೇರ್ಯ ಪ್ರೇರಕ ಹೃದಯ ಧಾರ್ಯಮಾರ್ಗವನರುಪಿಸ್ಥೈರ್ಯವನು ಎನಗಿತ್ತ ಆಯ್ ಲಾತವ್ಯಾ2
ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರನೀವೆ ಎಮ್ಮೊಳು ನಿಂತು ಸರ್ವ ಕಾರ್ಯಗಳಾ |ಓವಿ ಗೈವುತ ದೇವ ದೇವ ಹಯ ಮೊಗ ಗುರುಗೋವಿಂದ ವಿಠಲಂಗಿತ್ತು ತಾವಕನ ಸಲಹುವುದು 3