ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಪ ಶ್ರೀಕಾಂತ ನೀಡೆನಗೆ ಸಾಕು ಬೇಕೆನ್ನಿಸದೆ ಅ.ಪ. ನಾ ಬಲ್ಲೆನೆ ಎನ್ನ ಹಿತಾಹಿತಗಳ ಬಗೆಯ ನೀ ಬಲ್ಲ ಸರ್ವಜ್ಞ ನಮ್ಮ ಕ್ಷೇಮ ನೀ ಬಂಧು ಅನಿಮಿತ್ತ ಅನಂತ ಕಾಲಕ್ಕೂ ಆ ಬ್ರಹ್ಮಸ್ತಂಭಾಂತ ಸಂಸಾರಿ ಸರ್ವೇಶ 1 ಕಂಸಮರ್ದನ ಎನ್ನ ಸಂಶಯಗಳಿಯಯ್ಯ ಹಂಸ ಸದ್ಗುಣ ಪೂರ್ಣ ಪುರುಷ ಶ್ರೀಶ ಪರಿ ಹರಿಸಿ ನಿನ್ನ ಜ್ಞಾನವ ನೀಡೊ ಸ್ವಾಂಶಿಗಳ ಗುಣರೂಪ ಕ್ರಿಯದಿಂದ ದೇವ 2 ನಿತ್ಯ ಮಿತ್ರನೆ ನಮಗೆ ಅನುಗಾಲ ಸಲಹುವಿ ತಾಯಿಯಂತೆ ಬಿನಗು ದೈವಗಳಳಿವ ಜಯೇಶವಿಠಲ ನಿತ್ಯ ಮೂರ್ತಿ 3 ನೀನಿತ್ತ ಭೋಗಗಳು ನಿನಗೊಪ್ಪಿಸುವೆನೆನಲು ಏನು ಕಾರಣ ಬರದು ಆನಿವರದನೆ ಕೇಳೋ ಪ್ರಾಣಪತಿ ಜಯೇಶವಿಠಲನೆ ಕರುಣಾಬ್ಧಿ 4
--------------
ಜಯೇಶವಿಠಲ