ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಗುರುರಾಯರ ನಂಬಿದೇ - ಶ್ರೀ ರಾಘವೇಂದ್ರ ಪ ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ ದಾಶರಥಿಯ ಭಕ್ತ ದೇಶಿಕವರ್ಯರ 1 ಸಂತಾನಸೌಭಾಗ್ಯ ಚಿಂತಿತಾರ್ಥವನೀವ ಪಾದ ಸ್ವಾಂತದಿ ಭಜಿಸುವ 2 ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ 3
--------------
ಲಕ್ಷ್ಮೀನಾರಯಣರಾಯರು
ಎಂಥ ಕರುಣಿಯೋ | ಐಕೂರು ಗುರುಗಳೆಂಥ ಸುಗುಣಿಯೋ ಎಂಥ ಪರಮ ಕರುಣಿಯೋ ಇವ ರೆಂಥ ಸುಗುಣ ಶಾಲಿಯೋ ಸು ಸ್ವಾಂತದಿ ಏಕಾಂತದಿ ಶ್ರೀಕಾಂತನ ಪದಕ್ರಾಂತ ಶಾಂತರಂತಃಕರುಣಿಯೋ ಅ.ಪ ವಸುಧಿ ತಳದಲಿ ಶ್ರೀಶನಾಜ್ಞೆಯಿಂದ ಶಶಿಯಮತದಲಿ ಬಂದು | ಸುನಿತ ಮನದಲಿ ವಸುಮತಿ ಸುಶಾಸ್ತ್ರಧರ್ಮ | ನಿಶಿಹಗಲಾಚರಿಸಿ ಶಿಷ್ಯ ಭವ | ಘಸಣೆ ಕರೆದು ಕುಶಲಗರೆದ 1 ನಿತ್ಯ ಉತ್ಕøಷ್ಟ ಭಕುತಿಲಿ ಮುಟ್ಟಿ ಪಾಡಿ ನೋಡಿ ಕುಭವ ದಟ್ಟುಳಿಯನಿಟ್ಟವರು 2 ಜ್ಞಾನ ಶೀಲರು ದಾಸಕವನ | ಗಾನಲೋಲರು ನೆರೆನಂಬಿದಂಥ ದೀನಪಾಲರು ಶ್ರೀನಿಧಿವರ ಶಾಮಸುಂದರ | ಧ್ಯಾನಾಮೃತಪಾನಗೈದು ಕ್ಷೋಣಿ ಮಂಡಲದಿ | ಮದಿಸಿದಾನೆಯೆಂತೆ ಚರಿಸಿದವರು 3
--------------
ಶಾಮಸುಂದರ ವಿಠಲ
ಎಲ್ಲರ ಮಾತು ನಿಜ | ಇದು ಅಲ್ಲ ಎಂಬುದು ಸಜ ಪ ಬಲ್ಲವರು ಮನದಲಿ ಯೋಚಿಪುದು ಸು- ಸೂರಿ ಜನಗಳಿಗೆ ಅ.ಪ ಅಂತರ್ಯಾಮಿಯ ವೀಕ್ಷಾ | ಇದು ಅ ದ್ವೈತ ಮತದ ದೀಕ್ಷಾ ಸ್ವಾಂತದಿ ನೋಡೆ ಪ್ರಪಂಚಕಾಯ ಭಗ ವಂತನೆಂಬುದು ವಿಶಿಷ್ಟಾದ್ವೈತವು 1 ಅಣುರೇಣು ತೃಣಕಾಷ್ಠದಲಿ | ನೋಡೆ ಅ- ವನೇ ವ್ಯಾಪಿಸಿಹನಲ್ಲಿ ರೇಣು ಬೇರೆ ಅವನೇ ಬೇರೆ ಅನಿಲಾಂತರ್ಗತನಾಗಿ ಸಮಸ್ತದಿ 2 ಮೂರು ವಿಧದ ಜೀವಗಳು ಕರ್ಮ ಮೂರಾಗಿ ತೋರುವ ಗುರುರಾಮ ವಿಠಲನು 3
--------------
ಗುರುರಾಮವಿಠಲ
ಬಿಜಯಂಗೈವುದು ತ್ರಿಜಗನ್ಮಾತೆಯೆ ದ್ವಿಜರಾಜಾನನೆಯೇ ಅಜರಾಜಾತ್ಮಜಸುತನರಸಿಯೇ ಶ್ರೀ ಜಾನಕಿಯೇ ಪ. ಪವನಜ ಗರುಡರ ಬಗೆಯಿಂ ನಿನ್ನಂ ಸೇವಿಸಲಾನರಿಯೆ ಕವಿಕುಲ ಚೂಡಾಮಣಿಯೋಲ್ ನಿನ್ನನು ಭಾವಿಸಲೆನಗಳವೇ 1 ನೆಲದೊಳು ನಿನ್ನೀ ನೆಲೆಯಂ ತಿಳಿಯಲ್ ಬಲುಮೆಯದಾರೊಳು ಪೇಳ್ ಚಲದಿಂ ಪೇಳ್ವರು ಕೆಲವರು ನಿನ್ನಂ ಚಂಚಲೆಯನುವೋಲ್ 2 ಎಂತಾದರು ಸುಸ್ವಾಂತದಿ ನಿನ್ನೀ ಸಂತಾನದೊಳನಿಶಂ ಶಾಂತ್ಯೌದಾರ್ಯ ಗುಣಾನ್ವಿತೆ ನೀ ಮೆರೆ ಸಂತತಮುಂ ನಲವಿಂ3 ಎಣಿಸಲ್ಕರಿಯದ ಋಣತಾಪದೊಳಕಟಾ ಹೆಣಗಾಡುತಲಿರುವೀ ಅಣುಗರ ನೋಡಿ ಕ್ಷಣದೊಳೂ ನಿನ್ನ ಘನತೆ ತೋರಿಸು ದೇವಿ 4 ತಳುವುದಿದೇತಕೆ ನಳಿನÀದಳಂಬಕೆ ಗಳಿಲನೆ ಬಾರೆಂಬೆ ಜಲಜಲೋಚನ ಶೇಷಗಿರೀಶನ ಲಲನಾಮಣಿ ಜಗದಂಬೆ 5
--------------
ನಂಜನಗೂಡು ತಿರುಮಲಾಂಬಾ
ಭವ ಪಾರಗಾಣಿಸಲು ಭಾರತಿ ರಮಣ ಸಮೀರನಲ್ಲದೆ ಬೇರೆ ಪ ವೀರ ಹನುಮ ರಘು ವೀರ ಭಕುತ ಬ್ರಹ್ಮ ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ ಶೇಷ ಗರುಡ ಶಿವ ಮುಖಸುರರೊಬ್ಬರೂ ದೋಷದೂರಲ್ಲವೊ ಪವಮಾನ ಈಶದಜ್ಞಾನ ಸಂಶಯ ಭ್ರಮೆ ಪೊಂದದೆ ಶ್ರೀಶನ ಪರಮ ಸಂತೋಷಕೆ ಪಾತ್ರನು 1 ವೀರರಧಿಕರೆಲ್ಲರು ನಿನ್ನೆದುರಲಿ ಸಾರಮೇಯದಂತಾದರೊ ಭೀಮ ನಾರಾಯಣನಿಗೊಬ್ಬನಿಗಲ್ಲದೆ ಶಿರಬಾಗದೆ ಮರೆದೆಯೊ ಧೀರ ಕಂಠೀರವ 2 ಶಾಂತನು ನೀ ಬಲುದಾಂತನು ನೀನೆ ಸ್ವಾಂತದಿ ಹರಿಯು ಪ್ರಸನ್ನನು ಸತತವು ಅಂತಿಮಭಾಷ್ಯಾದಿಗಳ ರಚಿಸಿ ವೇ ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3
--------------
ವಿದ್ಯಾಪ್ರಸನ್ನತೀರ್ಥರು
ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ | ಸ್ವಾಗತ ಸ್ವಾರ್ಥ ವಿದೂರರಾದ ಜಗನ್ನಾಯಕ ನಾಮ ರಾಯರಿಗೆ || ತರಳತನದಿ ಇವರು ಸರಳ ಮನಸ್ಸಿನಲ್ಲಿ ಸರಸ್ವತಿದೇವಿಯನೊಲಿಸಿದರು | ಪರಮಪೂಜ್ಯ ಮಹತ್ವರ ತತ್ವ ತಿರುಳು ತಿಳಿದು ಆಚರಿಸಿದರು 1 ಪ್ರಾಂತದ ಬಡವರ ಚಿಂತೆಕಡಿಯಲು ಸ್ವಾಂತದಿ ಪಂಥವ ಗೈದವರೋ || ಕ್ರಾಂತಿಯ ಹೂಡುತ ಶಾಂತಿ ಸಂಗರದಿ ನಿಂತು ಹೋರಾಡಿದ ಯೋಧರು 2 ದುರುಳರಾಳಿಕೆಯಲಿ ಜರಿದು ಧಿಃಕರಿಸಿ ಸೆರೆಮನೆ ಕಷ್ಟವ ಸಹಿಸಿದರು | ದೊರೆಯ ಸ್ವತಂತ್ರವು ಬಹುಮತದಲಿ ಸ್ವೀಕರಿಸಿದರು ಮಂತ್ರಿಪದವಿಯನು 3 ಉಚ್ಚನೀಚವೆಂಬ ಕುತ್ಸಿತ ಭಾವವ | ಕೊಚ್ಚಿ ಬೀಸಾಡಿದ ಜಾಣರು | ಅಚ್ಚಗನ್ನಡದ ವೀರ ಜನನಿಗೆ ಅಚ್ಭದ ಪ್ರೀಯ ಸುಕುಮಾರರು 4 ಈ ಮಹಾಚತುರನ ಪಡೆದ ಚಂಡ್ರಿಕಿ ಗ್ರಾಮದೇವಿ ಬಹುಪುಣ್ಯವತಿ | ಪ್ರೇಮ ದಿಂದಿವರ ನೇಮವ ನಡೆಸುವ ಶಾಮಸುಂದರನು ದಿನಂಪ್ರತಿ5
--------------
ಶಾಮಸುಂದರ ವಿಠಲ
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು