ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾನಂತ ವಿಠಲ ನೀನಿವನ ಸಲಹೊ ಪ ಜ್ಞಾನಿಜನ ಸುಪ್ರೀಯ ನೀನೆಂದು ಭಿನ್ನವಿಪೆ ಅ.ಪ. ಪ್ರಾಚೀನ ದುಷ್ಕರ್ಮ ನಿಚಯದಿಂದಲಿ ಬಳಲಿಸ್ವೋಚಿತ ಸುಕರ್ಮಕ್ಕೆ ಅವಕಾಶ ವಿರದೇ |ವಾಚಿಸುತಲೀ ನಿನ್ನ ನಾಮಾಮೃತವ ಸವ್ಯಸಾಚಿ ಸಖನೇ ನಿನ್ನ ಮೊರೆಯ ಹೊಕ್ಕವನಾ 1 ಕರ್ಮ ಆಧೀನ ನಿನದಲ್ಲೆ |ನೀದಯದಿ ಸಂಚಿತವ ಮೋದದಲಿ ಕಳೆದು |ವೇದಗಮ್ಯನೆ ಹರಿಯೆ ಭೇದಮತ ಸುಜ್ಞಾನ ಭೋದಗೈವುದು ಎಂದು ಪ್ರಾರ್ಥಿಸುವೆ ನಿನ್ನಾ 2 ಮಂತ್ರನಿಲಯರ ನಿರುತ ಸ್ವಾಂತದಲಿ ಭಜಿಸುತ್ತಸಂತ್ರಸ್ತಸಜ್ಜನರ ಪೊರೆಯೆ ಮೊರೆಯಿಡುತ |ಭ್ರಾಂತ ಮಾಯಾತ್ಮ ತೊರೆದು ಅಂತರಂಗದಿ ಮಧ್ವಅಂತರಾತ್ಮನ ಭಜಿಪ ಸಂತದಾಸನ್ನಾ 3 ಅಂಬರ ಸುವಾಣಿಯಿಂದಂಬೆ ರಮಣನು ರುದ್ರಬಿಂಬ ನರಹರಿ ನೀನೆ ಇಂಬಿನಂಕಿತವನಂಬಿ ಬಂದಿಹಗಿತ್ತು ಸಂಭ್ರಮದಿ ಕರುಣಿಸಿಹೆಬಿಂಬ ಕ್ರಿಯ ಸುಜ್ಞಾನ ತುಂಬು ಇವನಲ್ಲೀ 4 ದೋಷದೂರನೆ ಹರಿಯೆ ದಾಸನ ಸದ್‍ಹೃದಯ ದಾಶಯದಿ ತವರೂಪ ಲೇಸು ತೋರೆಂಬಾ |ಮೀಸಲು ಪ್ರಾರ್ಥನೆಯ ಸಲಿಸೆಂದು ಭಿನ್ನವಿಪೆವಾಸುಕೀ ಶಯನ ಗುರು ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ ಸುಜನ ಮಂದಾರ | ಮಾಘ ವಿರೋಧಿ ಸುಮ ತಪಯೋಗಿ ಪ ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ | ಜಾತ ಜಿತ ಮನೋಜಾತ || ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ ನಳಿನ ಷಟ್ಚರಣ ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1 ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ ಪೂರ್ಣಸುಪ್ರೇಮ ಪಡೆದಸನ್ಮಹಿಮ || ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2 ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ | ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ || ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ ಚಕೋರ 3
--------------
ಶಾಮಸುಂದರ ವಿಠಲ
ಸಿಂಧು ಶೋಷಿಪೇಕ್ಷಣ ಕಲ್ಯಾಣಗಾತ್ರ ಪ ಪವಮಾನ ಪ್ರಿಯ ಪುತ್ರ ಕಾರುಣ್ಯನೇತ್ರ ಅ.ಪ. ನಿರವದ್ಯ ಭೂದೇವ ನಿರುತ ಸುಖಭರಿತ ಭಾವ ಶರಣ ಜನರನು ಕಾವ ಶಪಥ ಭಾವ ಪರ ಸೇವಾ ನಿರುತ ಮಂಗಳ ಭಾವ ಸಂಜೀವ 1 ತನುಮನವ ಹರಿಗಿತ್ತ ಗುಣನಿಧಿ ಮಹಗುಪ್ತ ಅಣುಘನದಿ ಹರಿದೀಪ್ತ ತನುನೋಳ್ಪ ಶಕ್ತ ಘನ ಕೃಷ್ಣವರ್ಯಾಪ್ತ ಮನೋವಾಕ್ಕಾಯಸ್ತ ಗುಣಾಪೂರ್ಣಾ ಹರಿಕೃತ್ಯವನು ಎಣಿಪ ತೃಪ್ತ 2 ಬಲುಭಕ್ತಿ ಭಾರನತ ಬಲಿತ ವಿಜ್ಞಾನರತ ಲಲಿತ ಮಂಗಳಚರಿತ ನಲಿವನು ಪ್ರೀತ ಕ- ಮಲಾ ಅಪಹರ್ತ ಕಲ್ಯಾಣ ಸಂಭರಿತ ಪುಲ್ಲಾಕ್ಷ ಮಮನಾಥ ಕೃಷ್ಣಾಂಘ್ರಿದೂತ 3 ಪರಮ ಸೌಭಗ ಪೂಜ ಪರಭಕ್ತಿ ನಿವ್ರ್ಯಾಜ ಚರಿಸಿ ಶ್ರೀ ಗುರುರಾಜ ವರಕಲ್ಪಭೂಜ ಸರುವ ತತ್ವಗಳೋಜ ವಶಗೊಂಡ ಮಹರಾಜ ಸರುವ ಸಿದ್ಧಿಗೆ ದೊರಿ ಎನಿಪ ವಿರಜ 4 ಸಂತಾಪಹರ ಶಾಂತ ಸೌಭಾಗ್ಯಕರವಂತ ಸ್ವಾಂತದಲಿ ನಿಶ್ಚಿಂತ ಸರಸಿ ಶ್ರೀಮಂತ ಧ್ವಾಂತ ಹರ ಶ್ರೀ ಜಯೇಶವಿಠಲನ ಏಕಾಂತ ಪಂಥ ಬಿಡದಿರುವಂಥ ಪೂರ್ಣ ಜಯವಂತ 5
--------------
ಜಯೇಶವಿಠಲ