ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನಪ್ರದ ಶ್ರೀಕರ ಕಾರುಣ್ಯ ಸ್ತೋತ್ರ ಧನಕೀರ್ತಿಗಳ ಹುಡುಕಿ ತಿರುಗಾಡಲಾರೆ ಧನಕೀರ್ತಿಗಳ ಕೊಡುವಿ ನೀನಾಗಿ ನೀನೆ ಪ ಶ್ರೀಕರನೇ ನೀನಾಗಿ ನೀನೇ ಸುಧಾಮನಿಗೆ ಬೇಕಾದ ಸೌಭಾಗ್ಯ ಧನ ಧಾನ್ಯವಿತ್ತಿ ಸಾಕಿ ಸಲಹುವ ಸ್ವಾಮಿ ನೀನಿರಲಿಕೆ ನಾನು ಏಕೆ ತಿರುಗಾಡುವುದು ಕುಳಿತಲೆ ಕೊಡುವಿ 1 ಪತಿ ಹೃಸ್ಥ ಶ್ರೀ ರಮಾಪತಿ ಸರ್ವ ಪ್ರೇರಕಾಂತರ್ಯಾಮಿ ಆರ್ತಿಹರ ನೀನು ವರಜ್ಞಾನ ಯೋಗಿವರ್ಯನು ರೈಕ್ವ ಕುಳಿತಲೆ ಪೌತ್ರಾಯಣ ದ್ವಾರ ಭಾರಿ ಧನವಿತ್ತೆ 2 ದೇವ ವೃಂದದಿ ಪ್ರವರ ಗುರು ವಾಯು ಪ್ರೇರಿಸಲು ದೇವ ಶರ್ಮನು ಬಂದು ಏನೂ ಬೇಡದಲೆ ನಿವ್ರ್ಯಾಜ ಭಕ್ತಿ ಆನಂದದಲಿ ಸ್ತುತಿಸಿದನು ದ್ರವಿಣಾದಿ ಧನವಿತ್ತಿ ನೀನಾಗಿ ನೀನೇ 3 ಸರ್ವದೊಳು ನೀನಿರುವಿ ಸರ್ವವಶಿ ನಿಸ್ಸಂಗ ಸರ್ವಧಾರಕ ಶ್ರೀಶ ಸರ್ವಗುಣ ಪೂರ್ಣ ಭೂಮಿಯಲಿ ಮಾರ್ಜಾಲ ತನ್ನ ಮರಿಯ ತಾನೇ ಎತ್ತಿ ಕಾಯುವಂತೆ ನೀ ಎನ್ನ ಸರ್ವದಾ ಕಾಯುತಿ ಕೃಪೆಯಿಂದ 4 ಶಂಖ ನಿಧಿ ಪದ್ಮನಿಧಿ ರವಿ ಸೋಮಕೈಗಳಲಿ ಶಂಖಾರಿಧರ ದ್ರವ್ಯ ಕೊಡುವ ಹಸ್ತಗಳು ಸ್ವಾಂಕಸ್ಥ ಲಕ್ಷ್ಮೀ ಸಮೇತ ಗರುಡಾ ರೂಢ ಶ್ರೀಕರನೇ ಅಜಪಿತ ನಮೋ ಪ್ರಸನ್ನ ಶ್ರೀನಿವಾಸ 5
--------------
ಪ್ರಸನ್ನ ಶ್ರೀನಿವಾಸದಾಸರು
ಸೈ ಸೈ ಶರಣಾಗತ ವತ್ಸಲ ನೀ ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ. ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ- ರನ್ನು ಕಾಪಾಡಿ ಸುಧೆಯನುಣಿಸಿದಿ ನೀ 1 ಹಂಜಿಯಂದದಿ ತಲೆ ನರತಿಹ ಬ್ಯಾಡತಿ ನಿರಂಜನ ಮೂರುತಿ2 ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ 3 ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ 4 ಪಾತಕಿ ಪತಿಯಾದ- ಜಾಮಿಳನನು ತನ್ನ ನಿಲಯಕೆ ಕರೆಸಿದಿ 5 ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು ಕುಡುತೆ ಪಾಲುಂಡುವ 6 ಕಂಡವರನು ಕೊಂದಿಹ ಕ್ರೂರನ ಮುನಿ ಮಂಡಲದಲಿ ಪ್ರಚಂಡನೆಂದೆನಿಸಿದಿ 7 ಕುಂತಿಯ ಕುವರನ ಕುದುರೆಯ ನಡೆಸುತ ಅಂತರಂಗ ಸಖ್ಯವ ಬೆಳೆಸಿದಿ ನೀ 8 ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ- ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ 9 ತಂದೆಯ ಕೊಲ್ಲಬೇಕೆಂದು ಸನ್ನಹಗೈದ ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ 10 ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ 11 ಪನ್ನಗ ಗಿರಿವರ 12
--------------
ತುಪಾಕಿ ವೆಂಕಟರಮಣಾಚಾರ್ಯ
ಹೀನ ಬುದ್ಧಿಯ ಹಿಂದೆ ದೂಡುವ ಪ ಕಲಿಮಲಾಪಹನೆಂದು ಪಾಡುವ ಕಲುಷರಾಶಿಯ ಕಳೆದುಕೊಳ್ಳುವ ಹಲವು ಭವದಲಿ ಬಳಲದಂದದಿ ನಳಿನನಾಭನ ನಂಬಿಕೊಳ್ಳುವ 1 ದೇಹ ಗೇಹ ವ್ಯಾಮೋಹ ಭಾರದಿ ಚೋದಗೊಂಡರೆ ಚಕ್ರಿವೊಲಿವನೆ ನಾಹಮೀಶ್ವರೊ ಎಂದು ತಿಳಿದು ದಾ- ಸೋಹಮೆಂಬ ಸನ್ನಾಹಗೊಳ್ಳುವ 2 ಪಂಕಜಾಪತೇ ಪತಿತ ಪಾವನ ವೆಂಕಟೇಶದಾಸೌಘ ಜೀವನ ಕಿಂಕರಾರ್ತಿಹ ಕರುಣದಿಂದಲಾ- ತಂಕವಿಲ್ಲದೆ ಸ್ವಾಂಕ ಕೊಡುವನು 3
--------------
ತುಪಾಕಿ ವೆಂಕಟರಮಣಾಚಾರ್ಯ