ಒಟ್ಟು 7 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಕೇಳು ಕೇಳು ಮನವೇ ನಿನ್ನ ಸ್ವಹಿತವನು ಪ ಕೇಳು ಕೇಳು ಕೇಳು ಮನವೇ ನಿನ್ನ ಸ್ವಹಿತವನು | ಬಾಳು ಬಾಳು ಬಾಳು ಗಳದು ಭವದ ಬೆಜ್ಜರವನು 1 ನೀಗು ನೀಗು ನೀಗು ನೀ ದುಸ್ಸಂಗಾ ಜಗದೊಳಗೆ | ಬೇಗ ಬೇಗ ಬೇಗ ಹೊಕ್ಕು ಶರಣಾಗು ಗುರುವಿಗೆ 2 ಬಾಗು ಬಾಗು ಬಾಗು ಗರ್ವ ತ್ಯಜಿಸಿ ಜಗದೊಳಗೆ | ಸಾಗು ಸಾಗು ಸಾಗು ಸಿಕ್ಕಿದೆ ಆರು ಅರಿಗಳಿಗೆ 3 ದಾರಿ ದಾರಿ ದಾರಿ ವಿಡಿದು ನಡೆಂದ ಹಿರಿಯರಾ | ಸೇರಿ ಸೇರಿ ಸೇರಿ ಸಂತ ನೆರಿಯ ನಿರಂತರಾ 4 ನಂಬಿ ನಂಬಿ ನಂಬಿ ನಂದನಸ್ವಾಮಿ ಮಹಿಪತಿಯಾ| ಇಂಬು ಇಂಬು ಪಡೆದರಹುದು ನಿಜಗತಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿ ನೋಡಿ ನಿಮ್ಮೊಳು ಪ ನೋಡಿ ನೋಡಿ ನಿಮ್ಮೊಳು ನಿಜವಾ ನೋಡಿರ್ಯೋ | ಬ್ಯಾಡಿ ಬ್ಯಾಡಿ ಮೈಯ್ಯ ಮರಿಯ ಬ್ಯಾಡಿರ್ಯೊ | ಮಾಡಿ ಮಾಡಿ ಸ್ವಹಿತವನು ಮಾಡಿರ್ಯೋ | ಪಾಡಿ ಪಾಡಿ ಅಚ್ಚುತನ ನಾಮ ಪಾಡಿರ್ಯೋ 1 ಕೇಳಿ ಕೇಳಿ ಸದ್ಭೋಧವನೆ ಕೇಳಿರ್ಯೋ | ಬಾಳಿ ಬಾಳಿ ಸತ್ಸಂಗದಲಿ ಬಾಳಿರ್ಯೋ | ಕೇಳಿ ಕೇಳಿ ಮದಮತ್ಸರವಾ ಕೇಳಿರ್ಯೋ | ತಾಳಿ ತಾಳಿ ವಿವೇಕ ಗುಣವಾ ತಾಳಿರ್ಯೋ | 2 ಕೂಡಿ ಕೂಡಿ ತಂದೆ ಮಹಿಪತಿ ಕೂಡಿರ್ಯೋ | ನೀಡಿ ನೀಡಿ ತನುಮನಧನ ನೀಡಿರ್ಯೋ | ಬೇಡಿ ಬೇಡಿ ಗತಿ ಮುಕ್ತಿಗಳ ಬೇಡಿರ್ಯೋ | ಮಾಡಿ ಮಾಡಿ ಸಾರ್ಥಕ ಜನ್ಮ ಮಾಡಿರ್ಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡು ಬಿಡು ಆತ್ಮ ಸ್ತುತಿಯನು ಪರನಿಂದೆಯನು ಪ ತನ್ನ ಗುಣವ ತಾನೇ ಹೊಗಳುತಲಿ | ಅನ್ಯರ ದೂಷಿಸಲೇನು 1 ತಾ ಕೋಡಗ ಮರಿ ಬನ ಹಳಿವಂತೆ | ವ್ಯಾಕುಳ ಹಿಡಿದರೆ ತಾನು 2 ಮಹಿಪತಿ ಸುತ ಪ್ರಭು ಬೋಧವ ಕೇಳುತ | ಸ್ವಹಿತವ ಪಡಿಯೋ ನೀನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕ ಸ್ಮರಸದೀ ಮನಸಿಗೇ ಪ ಯಾಕ ಸ್ಮರಸದೀ ಮನಸಿಗೆ | ಲೋಕದೊಳು ತನ್ನ ಸುಖಗೆ | ಮಾಕಾಂತ ನಡಿಗಳ ಮರೆಹೊಕ್ಕು | ವಿ ವೇಕ ಸೌಖ್ಯ ಪಡಿಯದೀಗ 1 ಉತ್ತಮ ಸಂಗವ ನೆರೆಮಾಡಿ ತನ್ನ | ಚಿತ್ತದ ಚಂಚಲ ನೀಡ್ಯಾಡೀ | ನಿತ್ಯದಿ ಗುರು ಹಿರಿಯರ ಶೇವೆಯಲಿ| ಹೊತ್ತು ಸಾರ್ಥಕ ಕಳಿಯದು ನೋಡು 2 ಸಣ್ಣ ದೊಡ್ಡವರಿಂದ ಭಲರೇಯಾ ಯಂದು | ಮನ್ನಿಸಿಕೊಳ್ಳದೇ ಅವರ ಕೈಯ್ಯಾ | ಕುನ್ನಿಯ ಛೀ ಸುಡು ಸುಡು ಯಂದು | ನಿನ್ನ ಜನ್ಮಕೆನಿಸುವದು ಬಲು ಕುಂದು 3 ವಿಹಿತವೇ ಅಹಿತವೆಂದು ಬಗೆವದು ತನ್ನ | ಸ್ವಹಿತವೇ ಅಹಿತೆಂದಾಚರಿಸುವುದು | ಇಹಪರ ಲೋಕಕ ಸಲ್ಲದು ಆಗಿ | ಕುಹಕ ಬುದ್ಧಿಯಿಂದಲೇ ಬಾಳುದು 4 ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ | ಕೇನೋ ಮುಂದಣಗತಿ ಶಿವಬಲ್ಲಾ | ಅನುಮಾನ ವಿಲ್ಲಿದರೊಳು ಕಂಡು ಕೇಳಿ | ಘನಗುರು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಡು ಸುಡು ಯಾತರ ಬುದ್ಧಿ ಹರಡುವ ಸಲ್ಲಾ ಪ ಸಾಧುರ ಮಹುಮೆಯ ಕಂಡವರಂತೆ | ವಾದಿಸಿ ತಿರುಗುವದಲ್ಲಾ 1 ಕಾಗೆಯು ಕರ್ರಗೆ ರೂಪದಲ್ಲಿದ್ದರೆ | ಕೋಗಿಲೆವಾಗುವದಲ್ಲಾ 2 ಬಕ ಹಂಸನ ಪರಿಯಾದರ ಕ್ಷೀರೋ | ದಕ ಬೇರಾಗುವದಿಲ್ಲಾ 3 ನೌಲ ಕಂಡು ಹಕ್ಕಿಯು ಕುಣಿವಂತೆ | ಹೋಲಿಕಿ ಗುಣ ಬಿಡುಯಲ್ಲಾ 4 ಮಹಿಪತಿ ನಂದನು ಸಾರಿದ ನೆಚ್ಚರ | ಸ್ವಹಿತವ ಪಡೆಯಚ್ಚರಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೇವೆ ಸುಖವೋ ಶ್ರೀ ಹರಿಸೇವೆ ಸುಖವೊ ಸೇವೆ ಗಿಂದಧಿಕ ಸುಖ ಸಾಯೋಜ್ಯಮುಕುತಿಪದದೊಳಿಲ್ಲ ಧ್ರುವ ಇಂದುಕುಲದೀಪಕನ ಎಂದೆಂದು ಬಿಡದೆ ಭಾವಲಿಟ್ಟು ಮೂರ್ತಿ ಸ್ಮರಿಸುವ 1 ದಾಸನಾಗಿ ವಾಸುದೇವನ ಪಾದಕಮಲಾರಾಧಿಸುವ 2 ವಿಹಿತಕಿಂತ ವಿಹಿತದೋರಿ ಕುಡುವ ಸ್ವಹಿತವೆಂದು ಕೀರ್ತಿಯನೆ ಕೊಂಡಾಡುತಿಹ್ಯ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು