ಒಟ್ಟು 12 ಕಡೆಗಳಲ್ಲಿ , 2 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ನಾನು | ಸಾಧುರಾ ಮಹಿಮೆಯನು | ಮನವ ವುನ್ಮನಮಾಡೀ | ಘನಸುಖದೊಳುಕೂಡಿ | ಆನಂದದೊಳಗಿಹನು ಪ ಬಹುಮಾತವನಾಡಾ | ಮೌನವಹಿಡಿದುಕೂಡಾ | ಸಹಜದಿ ನುಡಿವಂದಾ | ನಾಡಿದ ರದರಿಂದಾ | ಸ್ವಹಿತದ ಸುಖನೋಡಾ 1 ಅರಿಯಾನಂತಿಹನಲ್ಲಾ | ಅರಿವನು ಉಳಿದಿಲ್ಲಾ | ಅರಹು ಮರಹು ಮೀರಿ | ಕುರ್ಹುವಿನ ಮನೆಸೇರಿ | ಅರಿಸುಖ ಸಮವೆಲ್ಲಾ 2 ಸಾಧುರ ನಿಜವೆಲ್ಲಾ | ಸಾಧು ಆದವ ಬಲ್ಲಾ ಸಾಧುರ ವೇಷದಿ | ಉದರವ ಹೊರೆಯುತಾ | ಬೋಧಿಸುವದಲ್ಲಾ 3 ಆಶೆಯಂಬುದು ಬಿಟ್ಟು ವೇಷವ ಕಳೆದಿಟ್ಟು | ಲೇಸಾಗಿ ಗುರುವರ | ಮಹಿಪತಿಸ್ವಾಮಿಯಾ | ಧ್ಯಾಸದಿ ಬೆರೆತಿಹನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯ ನಂಘ್ರಿಯಾ ಹಿಡಿ ಹಿಡಿ ಹಿಡಿ ಪರಮ ಸದ್ಭಾವನೆ ಜಡಿ ಜಡಿ ಜಡಿ ಪ ಎರವಿನಾ ಮನೆಯೊಳು ಸ್ಥಿರವೆಂದು ಮೈಯ್ಯವ | ಮರೆವರೇ ಹರಿನಾಮಾ ನುಡಿ ನುಡಿ ನುಡಿ 1 ಕರವ ಮುಗಿದು ಬಾಗಿ ತರಣೋಪಾಯವ ನಿನ್ನ | ಅರಿತು ಸ್ವಹಿತದಲಿ ನಡಿ ನಡಿ ನಡಿ2 ತಂದೆ ಮಹಿಪತಿ ಕಂದಗೆಚ್ಚರಿಸಿದಾ | ಪಡಿ ಪಡಿ ಪಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾರಿಯ ವಿಡಿರಣ್ಣ | ಸ್ವಹಿತದ ದಾರಿಯ ಹಿಡಿರಣ್ಣಾ ಪ ದಾರಿಯ ವಿಡಿನಿಜ ಸಾರಿಹ ಶೃತಿಗಳ | ಚಾರು ಭಕುತಿಯಾ ಅ.ಪ ಬಲ್ಲವರಿಗೆ ಬೆಸಗೊಳ್ಳುತ ಮನಸಿನ | ಖುಳ್ಳತನದ ಗುಣವೆಲ್ಲವು ಹೋಗಿ | ಬಲ್ಲವರನು ಕಂಡು ಮೆಲ್ಲಡಿಗಳ ವಿಡಿ | ದುಳ್ಳ ಸಿದ್ಧಾಂತದ ಸೊಲ್ಲವ ಕೇಳಿ | ಉಲ್ಹಾಸದಿಂದಲಿ ಮೆಲ್ಲನ ಭ್ಯಾಸವ | ಮೆಲ್ಲನೆ ಮಾಡುತ ಸುಲ್ಲಭ ತೆರದಾ 1 ಕಂಡ ಪಥಕ ಹರಿದಂಡಲೆಯದೆನೆರೆ | ತಂಡಿಸುತಿಹ ಪಾಷಾಂಡ ಹೋಗಿ | ಚಂಡ ಸುಜ್ಞಾನದ ಲುಂಡನು ಭವದೃಢ | ಗಂಡು ಸದ್ಭೋಧದಿ ಪಂಡಿತನಾಗಿ | ಹಿಂಡ ಭಾಗವತರ ಮಂಡಲದೊಳು ಕೂಡಿ | ಪುಂಡರೀಕಾಕ್ಷನ ಕೊಂಡಾಡುತ ನಿಜ 2 ಹಿಂದಿನ ಸುಕೃತಗಳಿಂದ ನೃದೇಹದಿ | ಬಂದೆನು ನಾನಿನ್ನು ಮುಂದಣ ಗತಿಯಾ | ಹೊಂದುವೆ ನಾವದುಯಂದು ವಿಚಾರವಾ | ತಂದು ಸದ್ಭಾವಲಿಂದೇ ನಿಷ್ಠೆಯಲಿ ತಂದೆ ಮಹಿಪತಿ ಪ್ರಭುಪದ ಭವ ಬಂಧನ ಹರಿವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಜನ್ಮ ವ್ಯರ್ಥವಲ್ಲವೇ | ಈ ಮೂಢರ | ನರಜನ್ಮ ವ್ಯರ್ಥವಲ್ಲವೇ ಪ ಗುರುಗಳ ಶರಣ್ಹೊಕ್ಕು ದಯ ಪಡಿಲಿಲ್ಲಾ | ತರಣೋಪಾಯದ ನಿಜ ತಿಳಿದವನಲ್ಲಾ 1 ಘಟ್ಟಿಸಿ ಒಬ್ಬರ ಮನಿಯ ಮುಣಗಿಸಿ | ಹೊಟ್ಟೆಯ ಬಿಟ್ಟನು ಅನ್ಯಾಯ ಘಳಿಸಿ 2 ಉತ್ತಮರಲ್ಲಿ ಅರಕ್ಷಣವಕ್ಕುಳ್ಳಿರನು | ಲೆತ್ತ ಪಗಡಿಯಾಡಿ ಹೊತ್ತು ಗಳೆವನು 3 ವಾಸುದೇವನ ಸೇವೆಗಾಲಸ್ಯ ಹಿಡಿದಾ | ಕಾಸಿನ ಆಶೆಗೆ ಎತ್ತಾಗಿ ದುಡಿವಾ 4 ಮಹಿಪತಿ ನಂದನ ಪ್ರಭುವಿನ ಮರತಾ | ಸ್ವಹಿತದ ಹಾದಿಗೆ ಅವನು ಹೊರತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ನೆಲೆ ತಿಳಿಯಲು ಅಳವಲ್ಲಾ ದುರಳತನ ನಡಿಗೆಂದು ಇವಸಲ್ಲಾ 1 ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ ಮನುಜರಂತೆ ಲೀಲೆ ದೋರುವ ರೀಗಮ್ಮಾ ಮುನಿಮನೋಹರ ದಾಯಕ ಪರಬೊಮ್ಮ ಘನ ಪುಣ್ಯದಿಂದ ಶಿಶು ವಾದನಮ್ಮ 2 ಹುಟ್ಟುತಲಿ ಸ್ವಹಿತದ ನುಡಿಯಾಡಿ ನೆಟ್ಟ ನೆವೆಯ ಮುನಿಗೆ ಹಾದಿಬೇಡಿ ಮುಟ್ಟಿ ಗೋಕುಲಕ ಬಂದದಯ ಮಾಡಿ ಇಷ್ಟರೊಳು ತಿಳಿಯ ಬಾರದಿನ್ನು ನೋಡಿ 3 ಚಿಕ್ಕತನದಲಿ ಮೊಲೆಗುಡ ಬಂದಾ ರಕ್ಕಸಿಯ ಅಸು ಹೀರಿದಾವ ಕೊಂದಾ ಕಕ್ಕಸದ ಕಾಳಿಂಗ ನೆಳೆದು ತಂದಾ ಮಕ್ಕೂಳಾಟಿಕೆ ಇದೇನು ನೋಡಿಛಂದಾ4 ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು ಹರಿಯಗುಣ ಹೇಳುವಿರಿ ಎಲ್ಲ ಬಂದು ಅರಿತು ನೋಡಲು ಒಬ್ಬ ಬಹುರೂಪ ವಿಡಿದು ಚರಿಪಗುರು ಮಹಿಪತಿಸ್ವಾಮಿಯಿಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆವಾರೇನೋ ನಿನ್ನ ನೀನು ಗುರುತಾ ನೆಲೆ ಮಾಡದೆ | ಸಿರಿಯರಸನಸಿರಿ ಚರಣವ ಸ್ಮರಿಸದೇ | ನರದೇಹ ಬರಡವ ಮಾಡುವರೆ ಜಾಣಾ ಪ ಹಲವು ಪುಣ್ಯದಿಂದಲ್ಲದೇ ಸುಲಭದಲ್ಲಿ ಜನ್ಮವು | ಇಳೆಯೊಳಗುದಯಿಸಿ ತಿಳಿಯದೆ ಸ್ವಹಿತದ | ಬಳಿಕೆಯ ನೆರೆಭವ ಬಲಿಯೊಳು ಸಿಲುಕಿ | ತೊಳಲುತ ನಿಶಿದಿನ ಬಳಲುವೆ ಜಾಣಾ 1 ಅವಗತಿಯೋ ಎನಗೆ ಮುಂದಾ | ಆವ ಜನಮ ವಿಹುದೋ | ವಿವೇಕದಿಂದ ವಿಚಾರಿಸಿ ಮನದೊಳು | ಭಾವಿಸಿ ಗುರುವಿನ ಪಾವನ ಪಾದಾ | ಭಾವಭಕುತಿಯಲಿ ಸಾವಧನನಾಗದೆ | ಹ್ಯಾವಹೆಮ್ಮೆಲೆ ದಿನಗಳೆದೇ ಜಾಣಾ 2 ಬದಿಯಲ್ಲಿದ್ದಾ ವಸ್ತುವನು | ಸದಗಾನಾದ್ಯೋ ಕಾಣದೆ | ಸಾಧುರ ಕೈಯಲಿ ಹಾದಿಯ ಕೇಳೆಲೋ | ಸಾದರದಲಿ ನಿಜ ಸಾಧನ ಬಲಿದು | ಭೇದಿಸು ಮಹಿಪತಿನಂದನ ಸಾರಿದಾ | ಗಾದಿಯನ್ನದೆ ಗತಿ ಸಾಧಿಸೋ ಜಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೇಯ ಸುಖ ಬೀರುತ ಸದೋದಿತ ಮೂಡಿ ಧ್ರುವ ಪೂರ್ವ ಪುಣ್ಯಾಚಲದಿ ಉದಯವಾದ ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ 1 ಹೃದಯ ಕಮಲವಾಯಿತು ಸುವಿಕಾಸ ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ 2 ಸಂಚಿತ ಪ್ರಾಲಬ್ಧ ಕ್ರಿಯಮಾಣ ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ 3 ಮಹಿಪತಿಗಾಯಿತು ಆನಂದೋದಯ ಸ್ವಹಿತದೋರಲು ಬಂದೆನಗೆ ತತ್ವೋಪಾಯ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ವಿಡಿಯೋ ಮನುಜಾ ಪ ಹರಿಕಥಾ ಶ್ರವಣದಿ ಮನ ಜಡಿಯೋ | ದುರಿತಾಂಕುರ ಕಡಿಯೋ 1 ಘನಗುರುರಾಯನ ಕರುಣವ ಪಡಿಯೋ | ಅನುಭವಾಮೃತ ಕುಡಿಯೋ 2 ಮಹಿಪತಿಸುತ ಪ್ರಭು ನಾಮವ ನುಡಿಯೋ | ಸ್ವಹಿತದಲೀ ನಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ವಾಮಿ ಸೀತಾರಾಮ ಪತಿತ ಪಾವನ ನಾಮ ಧ್ರುವ ಅಮಿತವಾದ ಗುಣ ನಿರ್ಮಳಾಚರಣಿ ಕಮಲಭವಾರ್ಚಿತ ಕಾರ್ಮುಕಪಾಣಿ ನೇಮದಿಂದಾಡುವ ಅಮೃತವಾಣಿ 1 ಸಮಸ್ತ ಹೃದಯಾಂತ್ರ ವಿಮಲಸುಚರಿತ್ರ ಸುಮನ ಸುಗಾತ್ರ ಅಮರಜ ನೇತ್ರ ಸೋಮಶೇಖರಪ್ರಿಯ ಪುಣ್ಯಪವಿತ್ರ 2 ಸಾಹ್ಯಸಹಕಾರ ಬಾಹ್ಯಾಂತ್ರ ಸ್ಥಿರ ಸ್ವಹಿತದಾಗರ ಮಹಿಪತಿ ಮನೋಹರ ಮಹಾಮಹಿಯನ್ನುಳ್ಳನಹುದೋ ಉದಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ಪರಮಾನಂದಾ ಗೋವಿಂದಾ ಪ ಪಾಲನ ಅಸುರ ವಿದಾರಣ | ವರಯದು ಕುಲನಿಧಿ ಚಂದ್ರಾ 1 ಅಜಮಿಳ ತಾರಣ ಅಹಲ್ಯೋದ್ಧಾರಣ | ಅಜಭವನನುತ ಶ್ರೀ ಮುಕುಂದಾ 2 ಮಹಿಪತಿ ನಂದನ ಅಹಿತ ಸಂಹಾರಣ | ಸ್ವಹಿತದಾಯಕ ಗೋಪೀ ಕಂದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು