ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡಬಾರದೇ ಸಂಗಾ | ಸಂತರ | ಮಾಡಬಾರದೇ ಸಂಗ | ಕೂಡಿ ಶ್ರವಣವ ಮಾಡಲು ಮನದೊಳು | ಮಾಡಿಬಹುನು ಶ್ರೀರಂಗಾ ಪ ದೇಶ ತಿರುಗುವದ್ಯಾಕ | ಕಾಸಿ ಆರಿದ ಹಾಲವು ಇದರಿಡೇ | ಆ ಶಿವಧ್ಯಾನವು ಬೇಕ 1 ನಾನಾ ಸಾಧನದಿಂದಾ | ಬಾಹು | ದೇನೆಲೋ ಮತಿಮಂದಾ | ಮನಿಯೊಳಗಿನ ಗಿಡ ಸಂಜೀವನಾಗಿರೆ | ಕಾನನ ತಿರುಗುವದೇ ಅಂಧಾ 2 ಲೋಹ ಪರುಷವ ಬಿಟ್ಟು | ಕಾಷ್ಟದ ಲಾಹುದೇ ಚಿನ್ನದ ಗಂಟು | ಮಹಿಪತಿ ನಂದನು ಸಾರಿದ ಸ್ವಹಿತಕ | ಮಹಾನುಭಾವದಾ ನಿಜಗುಟ್ಟು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಜ್ಜನರ ಸಂಗ ಸ್ವಹಿತಕೆ ಸುಖಸನ್ಮತ ಅಮೃತ ಧ್ರುವ ಗಂಗಿಯೊಳು ಮುಳಗಿ ತಾ ಮಿಂದರ್ಹೋಗದು ಪಾಪ ಹಾಂಗೆಂದಿಗಲ್ಲ ಸಜ್ಜನರ ಪ್ರತಾಪ ಕಂಗಳಲಿ ಕಂಡರ್ಹೋಗುವುದು ತಾಪಾಪ ಸಂಗ ಸುಖದಲಿ ಸರ್ವಪುಣ್ಯ ಮೋಪ 1 ಚಂದ್ರ ಶೀತಳದೊಳು ನಿಂದರ್ಹೋಗುದು ತಾಪ ಎಂದೆಂದಿಗ್ಹಾಂಗಲ್ಲ ಸಜ್ಜನ ಸಮೀಪ ಒಂದೆ ಮನದಲಿ ನೆನೆದರ್ಹಿಂಗಿ ಹೋಗುದು ತಾಪ ವಂದಿಸೀದವಾ ಮೂರು ಲೋಕ ತಾಪಾ 2 ಕಲ್ಪತರುವಿಗೆ ಕಲ್ಪಿಸಿದರ್ಹೋಗುದು ದೈನ್ಯ ಒಲಮಿಂದ್ಹಾಗಲ್ಲ ಸದ್ಗುರು ಸುಪುಣ್ಯ ಕಲ್ಪಿಸದೆ ಕುಡುವದಿದು ನೋಡಿ ಘನ ತಾರ್ಕಣ್ಯ ಸಲಹುತೀಹ್ಯ ಮಹಿಪತಿಗಿದೆವೆ ಧನ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗವು ಲೇಸು ಸ್ವಹಿತಕೆ ಧ್ರುವ ನೆರಿಲವರನುದಿನ ಬಾಳುದು ಲೇಸು ಸರಸ ಸುಮಾತನೆ ಕೇಳುದು ಲೇಸು 1 ನೋಡಿದವರಾಚರಣೆಯ ಲೇಸು ಮಾಡಿದವರನು ಸರಣಿಯ ಲೇಸು 2 ಮಹಿಪತಿಗಿದೆ ಸುಖದೋರಿತು ಲೇಸು ವಿಹಿತಕ ವಿಹಿತಾಯಿತು ಬಲುಲೇಸು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀ ಎನಗಿರೆ ಧೀನಬಂಧು ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು ಧ್ರುವ ನೀನಿರಲು ನಿಧಾನದ ಸುರಾಶಿ ಹೆಣ್ಣು ಹೊನ್ನಿಗಿಡುವುದ್ಯಾಕಾಶಿ ಅನುಭವಿಸುತಿರೆ ನೀ ಕೊಟ್ಟ ಭಾಸಿ ಅನುಮಾನಿಸಲ್ಯಾಕೆ ಭ್ರಮಿಸಿ 1 ಎನ್ನ ಸ್ವಹಿತಕಿರಲು ನೀನೆ ಸಾಹ್ಯ ಇನ್ನೊಬ್ಬರಿಗೆದೆರುವದ್ಯಾಕೆ ಬಾಯಿ ಚೆನ್ನಾಗಿದೆ ನೀನೆ ಎನಗಾಯುರ್ದಾಯ ಇನ್ನೊಂದಕ ಯೋಚಿಸಲ್ಯಾಕುಪಾಯ 2 ನೀನಾಗಿರೆ ಕಾಮಧೇನು ಕಲ್ಪವೃಕ್ಷ ನನಗಿನ್ನೊಂದ್ಹಿಡಿಯಲ್ಯಾಕಪೇಕ್ಷ ಭಾನುಕೋಟಿತೇಜವೆನಗೆ ಅಪೇಕ್ಷ ಅನುದಿನ ಮಹಿಪತಿಗೆ ಸುಭಿಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು