ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು