ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಪ ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1 ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವÀ ಮೆಟ್ಟು 2 ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು 3 ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು 4 ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
--------------
ವಿಜಯದಾಸ
ಬಿಟ್ಟೆಯಾ ಸ್ವಾಮಿ ಎನ್ನ ಬಿಟ್ಟೆಯಾ ಬಿಟ್ಟೆಯಾ ಎನ್ನ ಜೀಯ ವ್ಯರ್ಥ ಪ. ಕೊಟ್ಟೆಯಾ ದುರಿತದ ಕಯ್ಯ ಅಹ ಕಟ್ಟ ಕಡೆಗು ಕಾವ ನೀನೆಂದು ನಂಬಿಕೆ ಇಟ್ಟ ದಾಸನ ಇಂಥ ಬಟ್ಟೆಯೊಳಗೆ ದೂಡಿ ಅ.ಪ. ಅನ್ಯರಿಗಳುಕದ ಶೌರ್ಯ ಸ್ವಜನೋನ್ನತವಾದ ಗಾಂಭಿರ್ಯ ಜನ ಸನ್ನುತವಾಗಿಹುದಾರ್ಯ ನಿನ್ನ ಸನ್ನುತಿ ಗೃಹ ಚಾತುರ್ಯಗಳ ತನ್ನಂತೆ ಕರುಣಿಸಿ ತಾವಕನೆನಿಸಿರೆ ಕುನ್ನಿಯ ಮರಿಗಿಂತ ಕಡೆಮಾಡಿ ದಾರಿಯೊಳ್ 1 ತಲ್ಪದಿಂದೆದ್ದವಸರದಿ ಬೊಮ್ಮ- ಕಲ್ಪೇಶ ನೀನಿಟ್ಟ ಕ್ರಮದಿ ಸ್ವಲ್ಪ ಸ್ವಲ್ಪವಾದರು ಕವರ್i ನೆವದಿ ನಾನಾ ಕಲ್ಪ ಪೂಜೆಯಗೈದು ಮುದದಿ ಶೇಷ ಕಲ್ಪೇಶ ನಿನಗೆ ಸಮರ್ಪಿಸಿ ಬಾಳ್ದನ- ನಲ್ಪ ಜನರಿಗೆ ನಿತ್ಯಾಲ್ಪರಿವೊಲ್ಮಾಡಿ 2 ಬಂದ ಸಜ್ಜನರನು ನೋಡಿ ಮಾನ- ದಿಂದ ಕುಳ್ಳಿರಿಸಿ ಮಾತಾಡಿ ಮತ್ತೆ- ನ್ನಿಂದಾದ ಸತ್ಕಾರ ಮಾಡಿ ತಿಳಿ- ದಂದದಿ ನಿನ್ನನು ಪಾಡಿ ಇದೆ ಮುಂದೆ ತಾರಕವೆಂದಾ ನಂದಗೊಡಿರಲೆನ್ನ ಹಂದಿಯಂದದಿ ಮೂಲೆ ಹೊಂದಿಸಿ ಕೆಡ ಹಾಕಿ 3 ಸಂಧ್ಯಾದಿಗಳನೆಲ್ಲ ಬಿಟ್ಟು ಅನ್ನ ತಿಂದು ಬೀಳುವೆ ಲಜ್ಜೆಗೆಟ್ಟು ರೋಗ ಬಂಧಿತ ನರಗಳ ಕಟ್ಟು ಶೂಲ ದಂದದಿ ಬೀಳುವ ಪೆಟ್ಟು ಇನ್ನು ಮೋಚಿಸು ಹಾಗಾ- ದಂದ ಕಾಲಕೆ ಪದ ಹೊಂದಿಸಿಕೊಳದೆನ್ನ 4 ಮರೆಯಲಿಲ್ಲೆಂದಿಗೂ ನಿನ್ನವೆಂಬು- ದರಿಯೆಯ ಲೋಕಪಾವನ್ನ ಇನ್ನು ಕರುಣ ಬಾರದ್ಯಾಕೊ ರನ್ನ ಶೇಷ ನಿತ್ಯ ಪ್ರಸನ್ನ ಬಹು ಕರಗುತ ಕಣ್ಣೀರ ಸುರುವಿದ ಮಾತ ಮರೆವುದುಚಿತವಲ್ಲ ಪರಮ ದಯಾಂಬುಧಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿ ಸಂಕೀರ್ತನೆ3ಅಲ್ಪಮನುಜರಿಗಾಲ್ಪರಿಸಬ್ಯಾಡೊ ಹರಿಯೆ ಪಕಲ್ಪತರುಸಮ ನೀನಲ್ಪಜನತತಿಗೆ ಅ.ಪಕಲ್ಪತರು ನೀನೆಂದು ಸಂತಸದಿಅನುದಿನಸ್ವಲ್ಪವಾದರು ಮನದೊಳಗೆ ವಿಕಲ್ಪಮಾಡದವನಾ 1ಅನ್ಯದೇವರನಾಮ ಮನ್ನದೊಳು ನೆನೆಯದೆನಿನ್ನ ಚರಣವನು ನೆರೆನಂಬಿದವನಾ 2ಅನ್ಯರನು ಯಾಚಿಸದಿಪ್ಪ ನರನಾ 3ಮಧ್ವದ್ವೇಷಿಗಳೊಡನೆಬದ್ಧದ್ವೇಷವಮಾಡಿಮಧ್ವರಾಯರಪಾದ ಪೊಂದಿ ಇರುತಿಹನಾ 4ನಾಥ ನಿನ್ನದುಪಾದಪಾಥೋಜಯುಗವನುವ್ಯೂಥದೊಳಗೆ ಇಟ್ಟುಪೊರೆನೀ ದಾತಗುರುಜಗನ್ನಾಥವಿಠಲರಾಯ ಸತತಾ 5
--------------
ಗುರುಜಗನ್ನಾಥದಾಸರು