ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ
ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ
ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ
ಜನುಮ ಜನುಮದಲಿ
ಸಂಸಾರ ಜಲಧಿಯೊಳಗೆ ಮುಳುಗಿ
ಘನ ಪುರುಷನ ಮಹಿಮೆ ಕಾಣದೆ
ಗಾಢಾಂಧ ಕಾರದಲಿ ದಿನಗಳ ಕಳೆದು
ದೇವರ ಭಜಿಸದೆ ಜನುಮಗಳಳಿದೂ
ಚರಿಸುವದಾಯಿತು 1
ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ
ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು
ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು 2
ಪನ್ನಗಶಯನನ್ನಾ ಪರಿಪರಿ ಭಕುತಿಲಿ
ಮನದಿಂದ ವರ್ಣಿಸಿ ಜಿವ್ಹದಲಿ
ಹರಿಪದವನ್ನೇ ಕಾಣದಲೆ ಇನ್ನು ಶ್ರೀ
ವ್ಯರ್ಥವು ಹೋಯಿತು 3