ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿಸಹಜವಿದು ಸಜ್ಜನರ ಮನಕೆ ಸಮ್ಮತವು ಪ ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳುಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳುಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟುಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ1 ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ2 ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು 3 ಪರನಾರಿಯರೊಡನಾಟ ಗರಲವನಟ್ಟುಂಬಾಟಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಕ್ಕಇರಿತಕೆ ಬೆದರುವ ಮದಕರಿ ಬಾಯ್ಕಿರಿವ ಕೋಡಗ ಮರಿಕರೆ ಬರಲರಿಯದ ಗಂಡ ಅವ ನಾಚಿಕೆ ಭಂಡ4 ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥಸವತಿಯರೊಳಗಣ ಕೂಟ ಎಳನಾಗರ ಕಾಟಅಮರರಿಗೊದಗದ ಯಾಗ ಆಡಿನ ಮೇಲಣ ರೋಗನಮ್ಮ ಆದಿಕೇಶವನ ಭಕ್ತ ಅವ ಜೀವನ್ಮುಕ್ತ 5
--------------
ಕನಕದಾಸ
ಆತ್ಮನ ಕೊಂಬುವರಾರು ಅವರಿಗೆ ಸರಿಯಾರುಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿಪ ಘಟದ ದೀವಿಗೆಯಂತೆ ಪಟದ ಚಿತ್ರದಂತೆಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ 1 ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ 2 ಮರೆಯ ವೇಷದಂತೆ ಭರಣಿಯ ರಸದಂತೆಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ3 ಕೂಳದ ತಾವರೆಯಂತೆ ಘನ ಮರೆಯ ರವಿಯಂತೆಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ 4 ಪರಿ ಆತ್ಮನ ನಿಜವತಾ ಪರದೈವವೆಂದರಿವಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ 5
--------------
ಚಿದಾನಂದ ಅವಧೂತರು
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಪ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? 1 ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? 2 ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? 3 ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?4 ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? 5 ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? 6
--------------
ಕನಕದಾಸ
ಬ್ರಾಹ್ಮಣನುಣಲಿಕೆ ರಾಗಿ ಹಿಟ್ಟು ತನ್ನ ಬಂಧು ಜನಕ್ಕೆ ಒಬ್ಬಟ್ಟು ಪ ಪಾಮರ ಜನರಲಿ ವಾಡಿಕೆಯಿದು | ಶ್ರೀ ರಾಮನೊಲಿವನೆ ಎಂದಿಗಾದರು ಅ.ಪ ಮಾತು ಮಾತಿಗೆ ಸಾಲಮಾಡಿ | ಬಹ ಳಾತುರದಲಿ ಓಡಾಡಿ ಜಾತುಕನಂದದಿ ಜನಗಳ ಮೆಚ್ಚಿಸಿ ಪಾತಕವಾದರು ಲಾಭವಧಿಕ 1 ದೊಡ್ಡದಾಗಿ ಮನೆಕಟ್ಟಿದರೆ -ಸಾಲ ಹೆಡ್ಡಗಾದರು ಹುಟ್ಟುವುದು ದುಡ್ಡುದೇವರಿಗಿಂತ ದೊಡ್ಡದೇವರು ಯಾವುದು? ಬಡ್ಡಿ ಹಚ್ಚು ಬರುವನೆ ಮಹರಾಯನು2 ಹೊಟ್ಟೆಗೆ ತಿಂಬುವದ್ಯಾರು ಬಲ್ಲರು? ವುಟ್ಟ ಬಟ್ಟೆಯಲ್ಲರು ನೋಡುವರು ಸಿಟ್ಟು ಬಂದರೆ ಬೆಂಕಿಯಂತವ ನಾನು ಹೊಟ್ಟೆ ಚಿಕ್ಕದು ಕಣ್ಣು ದೊಡ್ಡದು 3 ಪರಲೋಕವು ಉಂಟೆಂದು ಪೇಳು ವರರಿಯದವರು ತಾವು ಮುಂದು ನರಕವುಸ್ವರ್ಗವು ಯಾರು ನೋಡಿರುವರು ಪುರಾಣ ಶಾಸ್ತ್ರಗಳು ಯಾತಕೆ ಬಿಡಿ4 ಅತಿಥಿಗಳಿಗೆ ನೀರುಮಜ್ಜಿಗೆ | ಮೊಸರು ಸತಿಸುತರಿಗೂ ಮತ್ತು ತನಗೆ ಯಿತರರಿಗೆಲ್ಲಾ ಎಣ್ಣೆಕರೆದ ಭಕ್ಷ್ಯ ಘೃತಭಕ್ಷ ತನಗೆ ಮಾತ್ರ 5 ಎಣ್ಣೆಯು ಬಲುರುಚಿ ನಮಗೆ | ತುಪ್ಪ ವಿನ್ನೇತಕೆ ಹೆಚ್ಚು ಬೆಲೆಗೆ ಕಣ್ಣಲಿ ಕಂಡದು ಮಾತ್ರ ಸತ್ಯ | ನಾ ವನ್ಯರ ನುಡಿ ನಂಬುವುದಿಲ್ಲವು 6 ವೊರಿಗೆಲ್ಲ ನಾ ಮೇಟಿ | ಯನ್ನ ನಾರು ಪೋಲುವರು ಸಾಟಿ ನೂರೆಲೆ ಬೀಳ್ವುದು ನಮ್ಮ ಮನೇಲೀ ಘೋರ ಕ್ಷಾಮದಲಿ ನಾನೆ ಪೊರೆವೆ 7 ಪರರಂತೆ ನಾನಿರಬೇಕು | ಶ್ರೀ ಹರಿ ಇಷ್ಟು ಕೊಟ್ಟರೆ ಸಾಕು ಗುರುಹಿರಿಯರು ನುಡಿಯೇತಕವರು ಮುದು- ಕರು ಏನು ಬಲ್ಲರು ಲೌಕೀಕವ 8 ಗುರುರಾಮವಿಠಲೆಲ್ಲಿ ಭ್ರಾಂತು -ಈ ಕರೆಕರೆ ನಮಗೇಕೆ ಬಂತು ಸೇರಿತು ಬಡವರಾವು 9
--------------
ಗುರುರಾಮವಿಠಲ
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ