ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಧ್ರುವ ಸ್ವಯಂಭು ಸ್ವತಂತ್ರ ಸ್ವಪ್ರಕಾಶ ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ ದ್ವೈತಾದ್ವೈತಕೆ ಸಹಿತ ಸ್ವವಿಲಾಸ ಶ್ರೇಯ ಸುಖದಾಯಕನಹುದೋ ನೀ ಪರೇಶ 1 ಸ್ವಭಾವ ಸ್ವಸಿದ್ಧ ಸರ್ವಾಧಾರ ಸ್ವಭಾಸ ಸ್ವತೇಜ ಸಹಜ ನಿರ್ಧಾರ ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ ಸ್ವಭಕ್ತಜನರಿಗೆ ನೀನೆ ಸಹಕಾರ 2 ಸ್ವಾನಂದ ಸದೋದಿತ ಸ್ವಯಂ ಭಾನು ಸ್ವಾನಭವಲಾದಯ್ಯ ತಾನೆ ತಾನು ಅನುದಿನ ಭೋರ್ಗರೆವ ನೀ ಕಾಮಧೇನು ದೀನಮಹಿಪತಿ ಸ್ವಾಮಿ ನೀನೆ ನೀನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯದೇವ ಜಯದೇವ ಜಯಮಹಾಂಗಿರೀಶಾ ಸ್ವಯಂಜ್ಯೋತಿ ಬೆಳಗುವೆ ಸಚ್ಚಿತ್ಸುಖತೋಷಾ ಪ ಸರ್ವರಲಿ ನೋಡಿದರೂ ನೀನಲ್ಲದೆ ಇಲ್ಲಾ ಉರ್ವಿಯಾಕಾಶ ದಶದಿಕ್ಕುಗಳೆಲ್ಲಾ ಸರ್ವೇಶ್ವರವೆಂಬದು ಸರ್ವಾಂಗದೆÉಲ್ಲಾ ಪಾರ್ವತೀಶ್ವರನೆಂಬುದು ಬಲ್ಲವನೆ ಬಲ್ಲಾ ಜಯದೇವ 1 ಸಕಲ ಸುಖದುಃಖವೆಂಬುದು ನಿನ್ನ ಲೀಲೆ ಅಖಿಲ ಅಂಡಗಳೆಂಬ ಭೋಜನಶಾಲೆ ಭಕುತಿ ಭಾಗ್ಯೆಂಬ ಜ್ಞಾನದ ದೀಪಜ್ವಾಲೆ ಪ್ರಕಟಿಸುವಂತೆ ಎತ್ತುವೆ ನಿನ್ನ ಮೇಲೆ ಜಯದೇವ 2 ಪರಿಶುದ್ಧಾತ್ಮಕದೇವಾ ನಿರುತ ನಿರ್ದೋಶಾ ಸಕಲಜನರ ಹೃದಯಕಮಲ ನಿವಾಸಾ ದುರಿತದಾರಿದ್ರ್ಯ ಭವದುಃಖವಿನಾಶಾ ಗುರು ವಿಮಲಾನಂದ ಶ್ರೀ ಮಹಾಂಗಿರೀಶಾ 3
--------------
ಭಟಕಳ ಅಪ್ಪಯ್ಯ