ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಂಥ ಕರುಣಿಗಳಿನ್ನುಂಟೆ ಭುವಿಯಲ್ಲಿ _ ಧನ್ವಂತರೇ ಪ ಚೆನ್ನ ಪ್ರಸನ್ನ ನೀನಾಗುತ ಇವಗಿನ್ನುಘನ್ನ ರೋಗವ ಕಳೆದುನ್ನುತ ಸುಖವೀಯೋ ಅ.ಪ. ಉಪಟಳ - ಕತ್ತರಿಸು ಶೀಘ್ರದೀಹಸ್ತ ಕಲಶಾಮೃತ - ಸ್ರವಿಸಿ ವೇಗದಿ ಅಪಮೃತ್ಯುವ ಹರಿಸಯ್ಯ - ಭಕ್ತಳ ಭರ್ತುವಿನ1 ಆರ್ತರುದ್ಧಾರಿಯೆ - ಭಕ್ತರ ಪರಿಪಾಲಕರ್ತ ಸಂಹರ್ತ - ಮೂರ್ಜಗಕೆಲ್ಲ ನೀನೇನಿತ್ಯಾನಿತ್ಯದ - ಜಗಕೆಲ್ಲ ಸ್ವಾಮಿಯೆಭೃತ್ಯಳ ಮಾಂಗಲ್ಯ - ಘಟ್ಟಿಯೆಂದೆನಿಸೋ 2 ಪ್ರಾಣ ಗುರು ಜಯ - ವಿಠಲ ದಾಸಿಯಪ್ರಾಣನಾಥನ ಪ್ರಾಣ - ಉಳಿಸುವುದೆನುತಪ್ರಾಣ - ಪ್ರಾಣನೆ ಎನ್ನ - ಬಿನ್ನಪವ ಜಗತ್ರಾಣ ಗುರು ಗೋವಿಂದ ವಿಠಲ - ಸಲ್ಲಿಸೋ 3
--------------
ಗುರುಗೋವಿಂದವಿಠಲರು
ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ಪ ಕರುಣಿಸಲಾರೆಯಾ ಕರುಣಾಕರನೆಂಬೊಬಿರುದನುಳಿಸಿಕೊಳ್ಳಲಾರೆಯಾ ನೀನರಿಯಾ ಅ.ಪ. ಬುವಿಯೊಳು ನಿನ್ನ ದಯವಿರದಿರೆ ಕಣಲವಸಹ ಸರಿಯದಯ್ಯಾಭವದೊಳು ದೇವ ನಿನ್ನ ಕೃಪೆಯಾಗಲುಜವದೊಳೀಗಿನ ಸುಖ ಸ್ರವಿಸಿ ಪೋಗುವದಯ್ಯಾ 1 ಈಗೆಲ್ಲ ನಿನ್ನದಯೆದಿಂದೀ ಬಾಳ್ವೆಸಾಗಿದೆ ಬಲ್ಲೆನಯ್ಯಾಹೋಗಿಸಿ ಸಂಸಾರ ಬೇಗುದಿಯನು ನೀನುಬೇಗ ನಿನ್ನ ಧ್ಯಾನಭೋಗವ ನೀಡಯ್ಯಾ 2 ತುಷ್ಟಿಹೊಂದಲು ನೀ ಜೀಯಾ ಕಷ್ಟದ ಪರಿಯಾನಷ್ಟಮಾಡಲು ಅರಿಯಾಸೃಷ್ಟಿಯ ಜೀವಿಗದೃಷ್ಟ ಎಷ್ಟೆಷ್ಟೆಂಬಸ್ಪಷ್ಟ ಸಂಕಲ್ಪವ ಬದಲಿಸಲರಿಯಾ 3 ಎಲ್ಲವು ನಿನ್ನಧಿವಲ್ಲವೇ ಹರಿಯೇಸಲ್ಲದ ಅನುಮಾನಖುಲ್ಲ ದೈವವ ತಿರುವ ಬಲ್ಲೆಯಲ್ಲವೇ ನೀನುಬಲ್ಲೇಕೆ ಮನವನು ಕಲ್ಲು ಮಾಡಿದೆಯಾ 4 ಶರಣೆಂಬ ಜನ ಕೈಯ್ಯಾ ಎಂದೂ ಬಿಡದೆಪೊರೆಯುವೆ ಎಂಬರಯ್ಯಾಧರೆಯೊಳು ಗದುಗಿನ ವೀರನಾರಾಯಣಮರೆಯದೆ ಸಲಹಯ್ಯಾ ಕೇಳ್ವೆನ್ನ ಮೊರೆಯಾ 5
--------------
ವೀರನಾರಾಯಣ
ಮುರಳಿಯಧರ ಶ್ರೀ ಕೃಷ್ಣನ ನೋಡಲು ಏನೋ ಸಂತೋಷ ಏನೋ ವಿನೋದ ಪ ಹರಿವಳು ಯಮುನೆಯು ಮೆಲ್ಲನೆ ನೋಡಲು ಗೋವಿಂದನನು ಪರಮಾನಂದದಿ ಅ.ಪ ಕೊಳಲೂದಲು ಶ್ರೀಕೃಷ್ಣನು ನಾದದ ಸುಳಿ ಬಾಡುವುದೆಂಬುವ ಭೀತಿಯಲಿ ಜಲ ಮೂಲನು ಬೆಳದಿಂಗಳ ಕರಗಳ ತಳಿರುಗಳಿಂದಲಿ ತಳ ಸೇರಿಸುವ 1 ಶರಧಿ ತರಂಗಗಳೆದ್ದವು ರಂಗನ್ನ ವದನ ಶಕಾಂಕನ್ನ ನೋಡಿ ಅಂಗನೆಯರು ತಮ್ಮಂಗಗಳಲಿ ಭಂಗವ ಪಡೆದರನಂಗನ ಶರದಿ 2 ಭುವನವ ತುಂಬಿತು ಗಗನವು ತುಂಬಿತು ದಿವಿಜರ ಲೋಕಗಳೆಲ್ಲವು ತುಂಬಿತು ಕವಿಗಳು ಬೆರಗಾದರು ವರ್ಣಿಸಲೀ ಸವಿ ಮುರುಳಿಯು ನಾದದ ಪ್ರವಹನನು 3 ತುರುಗಳ ಪಯಧರ ಸ್ರವಿಸಿತು ಕ್ಷೀರವ ಕರೆದರು ಮೋದದ ಕಂಬನಿಯೆಲ್ಲರು ಮರೆತರು ನರಲೋಕದ ಮಂದಿಗಳು ಅರಿತು ಮೋಕ್ಷದ ಸುಖವೆಂತೆಂಬುದ 4 ಈಶನು ಕೈಲಾಸದಲಿ ಕುಣಿದನು ಶೇಷನು ಸಾಸಿರ ಫಣಿಗಳನಾಡಿದ ದೋಷರಹಿತ ವಾಣೀಶನ ವದನ ವಿ ಕಾಸವು ಬೆಳಗಿತು ನಾಕು ದಿಕ್ಕುಗಳ 5 ಆ ಸಮಯವ ಇತಿಹಾಸಗಳಲಿ ಕವಿ ವ್ಯಾಸರಿಗಲ್ಲದೆ ವರ್ಣಿಸಲಳವೆ ಭಾಸುರ ಸುಂದರ ವದನ ಪ್ರಸನ್ನನು ರಾಸಕ್ರೀಡೆಯ ರಸವನು ಹರಿಸುತ 6
--------------
ವಿದ್ಯಾಪ್ರಸನ್ನತೀರ್ಥರು
ವಾದಿಗಳೆದೆಶೂಲಾ | ಗುರುವೆ | ವಾದಿರಾಜ ಶೀಲಾ ಪ ಬೋಧಿಸಿ ದಶಮತಿ | ಬೋಧರ ಶಾಸ್ತ್ರವಐದಿಸು ಸದ್ಗತಿ | ಯಾದವೇಶನ ಪ್ರೀತಿ ಅ.ಪ. ಸೋದೆ ಪುರದಲಿರುವಾ | ವೃಂದಾವನಮೋದದಿ ದರ್ಶಿಸುವಾ ||ಸಾಧುಗಳಘನೀಗಿ | ವೇದವಿನುತ ಹರಿಪಾದವ ತೋರಿಸಿ | ಮೋದವ ಕೊಡಿಸುವ 1 ಧವಳಾಭಿದ ಗಂಗಾ | ಅಲ್ಯುದುಭವಿಸಿರ್ಪುದು ತುಂಗಾ ||ಸವನ ಮೂರಲಿ ಸ್ನಾನ ಕವಿದಿಹ ಅಜ್ಞಾನಸ್ರವಿಸಿ ಶ್ರೀಹರಿ ಜ್ಞಾನ | ಪ್ರವಹವ ಸೃಜಿಸುಪುದು 2 ಪಂಚ ವೃಂದಾವನದೀ | ಇಹ ಹರಿಪಂಚ ಸುರೂಪದಲೀ ||ಅಂಚೆಗಮನ ಹರಿ | ಮಂಚಯೋಗ್ಯ ಮುಖಪಂಚವಿಂಶತಿ ಸುರ | ವಾಂಛಿತ ಪಡೆವರು 3 ವಾಗೀಶ ಕರಜಾತಾ | ಸೇವಿತನಾರಾಯಣ ಭೂತ ||ಭೋಗಿ ಪುರೀಶನ | ರೋಗವ ಹರಿಸಿದೆಆಗಮಜ್ಞ ಗುರು | ನಾಗಶಯನ ಪ್ರಿಯ 4 ಬದರಿಯೊಳಿದ್ದವನಾ | ತರಿಸಿದಿವಿಧಿನುತ ತ್ರಿವಿಕ್ರಮನಾ ||ಮುದದಿ ನಿಲ್ಲಿಸುತ | ವಿಧವಿಧ ವೈಭವವಿಧಿಸೆ ನಿನ್ನಯ ಜನ | ಒದಗಿ ಚರಿಸುವರು 5 ಮೋದ ||ಸುಜನ ಸುರದ್ರುಮ | ಭಜಿಸೆ ಹರಿಸಿ ಭ್ರಮಅಜ ಜನಕನ ತೋರ್ವೆ || ಋಜು ಲಾತವ್ಯರೆ 4 ಪ್ರಾಕೃತ ಪದಪದ್ಯಾ | ರಚಿಸುತಅ - ಪ್ರಾಕೃತ ನಿರವದ್ಯಾ ||ಅ - ವ್ಯಾಕೃತ ಗುರು ಗೋವಿಂದ ವಿಠ್ಠಲಸ್ವೀಕೃತ ನಿಜ ಭಕ್ತ | ಪ್ರಾಕೃತ ಕಳೆವಂಥ 5
--------------
ಗುರುಗೋವಿಂದವಿಠಲರು