ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನ್ಮನಕೆ ಭಾವಿ ಭಾರತಿವರನೆ ಪ ಬಾರೋ ಬಾರೋ ಪರಭಾರೆ ನಿಭವ ಭೀಮನ ಮನದಿಂದ ಅ.ಪ. ಭೂತೇಶಾದೀನುತ ಭಾವಿ ಭೀಮಾ ಭಯಕುಲ ಸುರಸೋಮಾ ಭೂಭಾರಾಧರ ಶೇಷನ ಪ್ರೇಮಾ ಸುರಕುಲ ಸುರಕಾಮಾ ಭೀಮ ಭವ್ಯವೀ ನಾಮ ಪೂಜಿತ ಭಾಮಿನಿಗೆಶುಭಕಾಮಿತಾರ್ಥಗಳಿತ್ತು ಸಲಹಿದೆಯಾಮಯಾಮಕೆ ಸ್ಮರಿಸುವೆನೊ ಸುರಕಾಮಧೇನು ಸಕಲ ತರುವೇ 1 ತಡಮಾಡುವುದ್ಯಾತಕೊ ಹಂಸಾ ಬಡಿ ಅಸುರರ ಧ್ವಂಸಾಗಡಿನಾನಲ್ಲವೇ ನಿನ್ನ ಖಾಸಾ ಗರುಡಾದ್ಯರ ತೋಷಾ ಪೊಡವಿಯೊಳಗೆ ನಿನ್ನ ಪುಡುಕಿದ ನರನಿಗೆ ಬಿಡಿ ಮಾಡುವರೇ ದಡಸೇರಿಸು ಕಡುಕರುಣಿಯೆ ಬೇಗ 2 ನಾನಾಲಂಕಾರದ ಚಮರಂಗಾ ಅದರೊಳಗೆ ಶುದ್ಧಾಂಗಾ ಬಂದು ಕುಣಿಯುವ ಪಾಂಡುರಂಗಾ ಪಾದ್ಗಾಶ್ರಿತ ಭೃಂಗಾ ಲಿಂಗದಿಂದ ಎನ್ನ ಅಂಗಸಹಿತವಾಗಿ ಅಂಗದೊಳಗೆ ಇಟ್ಟು ರಂಗನ ಪೂಜಿಪಮಂಗಳಾಂಗ ಶುಭತುಂಗ ಮಹಿಮ ತಂದೆವರದಗೋಪಾಲವಿಠ್ಠಲ ಪ್ರಿಯ ಬೇಗ 3
--------------
ತಂದೆವರದಗೋಪಾಲವಿಠಲರು
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ