ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸ ದಾಸರು ಪೇಳುತಿಹರಲ್ಲಾ ಕೇಶವಾ ಎಂದು ತಾಸು ತಾಸಿಗೆ ಪೇಳುತಿಹರಲ್ಲಾ ಪ ರಾಮನೆಂಬರು ನಿಮಿಷ ನಿಮಿಷಕೆ ನೇಮದಿಂದಲಿ ಹರಿಯ ಭಜಿಪರು ರಾಮನಾಮವ ಹಲವು ವಿಧದಲಿ ಪ್ರೇಮದಿಂದಲಿ ಸ್ಮರಿಸುತಿಹರು 1 ಮಾತು ಮಾತಿಗೆ ಕೃಷ್ಣಯೆಂಬರು ನೀತಿ ನೀತಿಗೆ ವಿಠಲಯೆಂಬರು ಸೇತು ಬಂಧನ ಸ್ವಾಮಿ ನಾಮವ ನಿತ್ಯ ನುಡಿಯಲಿ ನೆನೆಯುತಿಹರು 2 ಕಾಲ ಕಾಲಕೆ ಶೇಷಶಾಯಿಯ ನೀಲರೂಪನ ನಾಮ ಸವಿಯುತ ಮೂರ್ತಿ ಕೀರ್ತನೆ ವೇಳೆ ವೇಳೆಗೆ ಮಾಡುತ 3 ನಿತ್ಯ ಮಾರ್ಗದಿ ನಾವೆ ರೂಪವ ಧರಿಸಿ ಭವದೊಳು ರಾವಣಾಂತ ಕನಡಿಯ ಸೇರುವ 4
--------------
ಕರ್ಕಿ ಕೇಶವದಾಸ
ನೀರ ತರಂಗಿಣಿ ತೀರ ನಾರಸಿಂಹ ಪ ಸಾರಿದೆನೊ ತವಪಾದ ಪಂಕಜ ತೋರು ಮನದಲಿ ತವಕದಿ ಅ ನಾರದನುತ ಚಿಚ್ಛರೀರವ ಶ್ರೀ ಭೂದು ರ್ಗಾರಮಣ ದುರಿತಾರಿ ಬ್ರಹ್ಮ ಸ ಮೀರ ಮುಖ ವಿಬುಧಾರ್ಚಿತ ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ ದ್ಭಾರ ನಿನ್ನದು ಮೂರು ಲೋಕದ ಸೂರಿಗಮ್ಯ ಸುಖಾತ್ಮಕ 1 ವೇದವೇದ್ಯ ಸಂಸಾರೋದಧಿ ತಾರಕ ಛೇದ ಭೇದ ವಿಷಾದವೇ ಮೊದ ಶ್ರೀದ ಶ್ರೀಶ ಅನಂತ ಆಪ್ತಕಾಮ ಬಾದರಾಯಣ ಭಕ್ತವರ ಪ್ರ ಹ್ಲಾದಪೋಷಕ ಪಾಹಿ ಮಾಂ 2 ಹೋತಹೃದ್ಯ ಜಗನ್ನಾಥವಿಠಲ ನಿನ್ನ ಮಾತು ಮಾತಿಗೆ ಸ್ಮರಿಸುತಿಹ ಸ ಚ್ಚೇತನರನು ನೀ ಸರ್ವದಾ ವೀತಶೋಕ ಭವಭೀತಿ ಬಿಡಿಸಿ ತವ ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
--------------
ಜಗನ್ನಾಥದಾಸರು
ವಿಧಿ ನಿಷೇಧವು ನಿನ್ನ ಸ್ಮರಣೆ ವಿಸ್ಮರಣೆಯ- ಲ್ಲದಲರಿಯರೇನೊಂದು ಹರಿಭಕ್ತರು ಪ ಮಿಂದದ್ದೆ ಗಂಗಾದಿ ತೀರ್ಥಗಳು ಸಾಧುಗಳು ಬಂದದ್ದೆ ಪುಣ್ಯ ಕಾಲವುಗಳು ಅವರು ನಿಂದದ್ದೆ ಗಯ ವಾರಣಾಸಿ ಕುರುಕ್ಷೇತ್ರಗಳು ಬಂದು ಪೋಗಲು ಅದುವೆ ರಾಜಬೀದಿ 1 ಕಂಡು ಕಂಡದ್ದೆಲ್ಲ ಕಮಲನಾಭನ ಮೂರ್ತಿ ಮಂಡಿಸಿದ ಶಯನ ದಂಡಪ್ರಣಾಮ ತಂಡತಂಡದ ಕ್ರಿಯೆಗಳೆಲ್ಲ ಹರಿ ಪೂಜೆಗಳು ಮಂಡೆ ಬಾಗಿಸಿ ಸಮಿಪ ಶರಣ ಜನಕೆ 2 ನಡೆವ ನಡೆಯೆಲ್ಲ ಲಕ್ಷ ಪ್ರದಕ್ಷಿಣೆ ಮತ್ತೆ ನುಡಿವ ನುಡಿಯೆಲ್ಲ ಗಾಯಿತ್ರಿ ಮಂತ್ರ ಒಡೆಯ ಶ್ರೀಕಾಂತನ್ನ ಅಡಿಗಡಿಗೆ ಸ್ಮರಿಸುತಿಹ ದೃಢ ಪ್ರಜ್ಞರೇಂಗೈಯ್ಯಲದುವೆ ಮರ್ಯಾದೆ 3
--------------
ಲಕ್ಷ್ಮೀನಾರಯಣರಾಯರು
ವಿಶೇಷ ಸಂದರ್ಭದ ಹಾಡು ಶ್ರೀ ವರದೇಂದ್ರಾಖ್ಯಾನ ಉತ್ಸವ ವರ್ಣನೆ 39 ಇರುಳುಹಗಲು ತವಸ್ಮರಿಸುತಲಿಹ ಭಕು - ತರಿಗಿಹ ಪರಸುಖಸುರಿಸುವ ಶ್ರೀ ಗುರು ಪ ಲಿಂಗಸುಗುರುನಿವಾಸ ಭಕ್ತ ಜಂಗುಳಿ ದುರಿತವಿನಾಶ ಮಂಗಳ ಚರಿತ ಮೌನೀಶ ವಿಹಂಗವಾಹನ ನಿಜದಾಸ 1 ಸಿರಿ ವಸುಧಿಜಾಪತಿ ಪದದೂತ ವಸುಧಿಯೊಳಗೆ ವಿಖ್ಯಾತ ಸುಮನಸರ ಸುವಂಶಜನೀತ 2 ಸುದರುಶನ ಮಾಲಾ ಕಲುಷ ನಿರ್ಮೂಲಾ 3 ವಾಯುಮತಾಬ್ಧಿವಿಹಾರಾ ಕಾಷಾಯ ಕಮಂಡಲಧಾರಾ ಮಾಯಿ ಜಲಜ ಚಂದಿರ ಗುರುರಾಯರ ಮಹಿಮೆಯಪಾರಾ 4 ಪಂಡಿತಮಂಡಲಭೇಶ ಪಾಖಂಡಿಮತೋರುಗವೀಶ ಕುಲಿಶ ತನ್ನ ತೊಂಡನೆಂದವರಘನಾಶ 5 ತಿಮಿರ ತರಣಿಯೊ ಕನಳನೀ ಮುನಿಯೋ 6 ಸುರನದಿಪತಿಯೊ ಧೈರ್ಯದಿ ಭೂಭತ್ಪತಿಯೊ ಚಾತುರ್ಯದಿ ವರಬ್ರಹ್ಮಸ್ಪøತಿಯೊ 7 ದಾನದಿರವಿಜನೆನಿಪನು ಸುವಿಧಾನದಿ ಕ್ಷಿತಿಯ ಪೋಲುವನು ಮೌನದಿ ಶುಕಮುನಿವರನು ಅಸಮಾನಯೋಗಿ ಎನಿಸುವನು 8 ಹರಿಸ್ಮರಣಿಯಲಿರುತಿರುವ ನರಹರಿನಿಂದಿಪ ಮತತರಿವ ಹರಿಪನೆಂಬರೆ ಪೊರೆವ ಶ್ರೀ ಹರಿಯಿವರಗಲದಲಿರುವ9 ಪ್ರಾಣೇಶ ದಾಸರೆನಿಪರು ಶ್ರೀ ಶ್ರೀನಿವಾಸನ ವಲಿಸಿಹರು ಜ್ಞಾನಿಗಳಿಗೆಅತಿ ಪ್ರೀಯರು ಅಸಮಾನದಾಸರೆನಿಸುವರು 10 ವರಕÀವಿ ಶ್ರೀ ಜಗನ್ನಾಥಾರ್ಯರ ಕರುಣ ಪಡೆದನವರತ ಧರಣಿಯೊಳಗೆ ವಿಖ್ಯಾತ ನರಹರಿ ಯಸ್ಮರಿಸುತಿಹ ನಿರುತ 11 ಹಿಂದಿನಸುಕೃತದಿ ಫಲದಿ ವರದೆಂದ್ರಾರ್ಯರು ವಂದಿನದಿ ಚಂದದಿ ದಾಸಗೃಹದಿ ನಡೆತಂದರು ಬಹುಸಂಭ್ರಮದಿ12 ಬಿನ್ನೈಸಿದ ಭಕುತಿಂದ ಮುನಿಮಾನ್ಯದರುಶನದಿಂದ ಧನ್ಯಧನ್ಯನಾನೆಂದ ಪಾವನ್ನವಾಯ್ತು ಕುಲವೆಂದ 13 ದಾಸಾರ್ಯರ ಭಕುತಿಯನು ನಿರ್ದೋಷವಾದ ಙÁ್ಞನವನು ತೋಷಬಡುತ ಮುನಿವರನು 14 ಶ್ರೇಷ್ಠನಾದಯತಿವರನು ಉತ್ಕøಷ್ಟವಾದಸ್ಥಳವನ್ನು ನಮಗೆನುತಿಹನು15 ದೇಶಕರಿಂಗಿತವರಿದು ವರದಾಸಾರ್ಯರು ಕೈಮುಗಿದು ಈ ಶರೀರತಮ್ಮದೆಂದು ಮಧ್ವೇಶಾರ್ಪಣವೆಂತೆಂದು 16 ತಪ್ಪದೆ ಸರ್ವದೇಶದಲಿ ತಾಕಪ್ಪವ ಕೊಳುತಲ್ಲಲ್ಲಿ 17 ಸಿರಿ ನಿಲಯನಂಘ್ರಿ ಸ್ಮರಿಸುತಲಿ ಕಳೇವರ ತ್ಯಜಿಸಿದರಲ್ಲಿ ಆಬಳಿಕ ಲಿಂಗಸುಗೂರಲ್ಲಿ 18 ತುಲಸಿ ವೃಕ್ಷರೂಪದಲ್ಲಿ ಇಲ್ಲಿನೆಲೆಸಿಹವೆಂದು ಸ್ವಪ್ನದಲಿ ಗಂಜಿಯ ಮರಡಿಯಲಿ ಇದ್ದಶಿಲೆ ತರಿಸೆಂದು ಪೇಳುತಲಿ 19 ಬಣವಿಯ ತ್ವರ ತೆಗೆಸುತಲಿ ತರುಮನುಜನಸರಿನೋಡುತಲಿ ಮುನಿ ವಚನವನಂಬುತಲಿ ಶಿಲೆಯನು ತಂದಿರಿಸಿದರಿಲ್ಲಿ 20 ಪುರುದಲಾಗಯಿರುತಿಹನು ತ್ವರದಿಂದಲಿ ಕಳುಹಿದನು ನರಹರಿ ಸಾಲಿಗ್ರಾಮವನು 21 ವರಪುಣ್ಯ ಕ್ಷೇತ್ರದಲಿಂದ ಮುನಿವರ ತಾನಿಲ್ಲಿಗೆ ಬಂz ಶರಣರ ಪಾಲಿಪೆನೆಂದ ಸುಖಗರೆಯುತ ಅಲ್ಲಿಯೆ ನಿಂದ 22 ಸುಂದರಪಾದುಕೆಗಳನು ಪುಣೆಯಿಂದಿಲ್ಲಿಗೆ ತರಿಸಿದನು ವಂದಿಸುವವರ ಘಗಳನ್ನು ತ್ವರದಿಂದ ತರಿದು ಪೊರೆಯುವನು 23 ದಾಸಕುಲಾಗ್ರಣಿಯನಿಪ ಪ್ರಾಣೇಶ ಕರಾರ್ಚಿತ ಮುನಿಪ ದೇಶಿಕ ವರರೆಂದೆನಿಪ ರಘುಜೇಶ ಪದಾಂಬುಜ ಮಧುಪ 24 ವೃಂದಾವನದಿ ನಿಂದಿರುವ ರಾಘವೇಂದ್ರರ ಧ್ಯಾನದಲಿರುವ ಅಂದಣೇರಿ ತಾಮೆರೆವ ಭಕ್ತವೃಂದವ ಕಾದುಕೊಂಡಿರುವ 25 ಪ್ರತಿಗುರುವಾಸರದಲ್ಲಿ ಜನತತಿ ಸಂಭ್ರಮದಿಂದಿಲ್ಲಿ ಮಿತಿಯಿಲ್ಲದೆ ಭಕುತಿಯಲಿ ನಲಿಯುತ ವಾಲ್ಗೈಸುವರಿಲ್ಲಿ 26 ಪ್ರತಿ ಪ್ರತಿ ವತ್ಸರದಲ್ಲಿ ಗ್ರೀಷ್ಮಋತು ಆಷಾಢಮಾಸದಲ್ಲಿ ತಿಥಿ ಷಷ್ಟಿಯ ದಿವಸದಲಿ ದ್ವಿಜತತಿ ಸುಭೋಜನ ವಿಲ್ಲಿ 27 ಮರುದಿವಸದ ಸಂಭ್ರಮವು ಶ್ರಿಂಗರಿಸಿದ ರಥದುತ್ಸವವು ಪರಿಪರಿ ಜಸಂದಣಿಯು ಇದು ವರಣಿಪುದಕೆ ದುಸ್ತರವು 28 ಯತಿವರ ಪರಮಾನಂದದಿಂದ ರಥವೇರಿ ಬರುವದು ಚಂದ ಅತಿಹರುಷದಿ ಜನವೃಂದಗುರು ಸ್ತುತಿಮಾಳ್ಪದು ಮುದದಿಂದ 29 ಝಾಂಗಟಿ ದಮ್ಮುಡಿಯು ಕಾಲುಗೆಜ್ಜೆಕಟ್ಟಿದಡಿಯುದಿವ್ಯ ಮೇಲು ಸರದ ಪದನುಡಿಯು 30 ಭೇರಿ ಭಜಂತ್ರಿ ತುತ್ತೂರಿಗಂಭೀರದಿ ಹೊಡೆವನಗಾರಿ ಅಂಬರ ಮೀರಿ 31 ಪರಿ ಪರಿಧೂಪಗಳು ಫಲÀಗಳನೈವೇದ್ಯಗಳು ಮಂಗಳ ಕರ್ಪೂರ ದೀಪಗಳು 32 ಥಳಿಪ ಪತಾಕಿ ಬೆತ್ತಗಳು ಮಿಗಿಲು 33 ಸಂತಜನರ ಜಯಘೋಷ ಅತ್ಯಂತ ಮನಕೆ ಸಂತೋಷ ಕುಣಿಯುತಿಹ ಶೀಶ 34 ಕಂತುಪಿತನದಯದಿಂದ ಇಲ್ಲಿ ನಿಂತಿಹ ಸುರರಾನಂದ ಎಂತೊರಣಿಪೆ ಮತಿಮಂದ ದುರಂತ ನಿಮ್ಮಯ ಗುಣವೃಂದ 35 ಸುವಿನಯದಿಂದ ನಮಿಸುವರು ಭಯವನು, ಈಡಾಡುವರು ತಮ್ಮಬಯಕೆ ಪೂರೈಸಿಕೊಳ್ಳುವರು 36 ಜ್ವರಛಳಿ ವ್ಯಾಧಿ ಪೀಡಿತರು ಮತ್ತುರಗವೃಶ್ಚಿಕದಂಶಿಕರು ಕುಂಟರು ಬಧಿರÀರು 37 ಪರಿಪರಿಗ್ರಹಪೀಡಿತರು ಬಹುಪರಿ ಶುಭಕಾಮಿಪ ಜನರು ಪೊರೈಸಿಕೊಂಬುವರು 38 ಸಾಷ್ಟಾಂಗದಿ ವಂದಿಪರು ಅಭಿಷ್ಟೇಯ ಪಡೆದುಕೊಳ್ಳುವರು ಕಷ್ಟಗಳನು ನೀಗುವರು ಸಂತುಷ್ಟರಾಗಿ ತೆರಳುವರು 39 ಇದುಪುಣ್ಯಕ್ಷೇತ್ರ ವೆನಿಸಿತು ಶ್ರೀಪದುಮೇಶಗಾವಾಸಾಯ್ತು ಮುದದಿಂದನಲಿಯುವರಾಂತು 40 ಈಸುಪದ ಪೇಳ್ವನೆಧನ್ಯ ಜಗದೀಶನ ತುತಿಸಿದ ಪುಣ್ಯ ದೇಶಿಕಪತಿ ಮುನಿಮಾನ್ಯ ವರದೇಶ ವಿಠಲಾಗ್ರಗಣ್ಯ 41
--------------
ವರದೇಶವಿಠಲ
215ಅಗಲಿ ಸೈರಿಸಲಾರದೀ ಮನ |ಅಗಲದಿಪ್ಪುದೆ ಜೀವನ ||ಪೊಗರೊಗೆವ ನಗೆಮೊಗದ ಸೊಬಗಿನ |ಸುಗುಣಸಿರಿ ಗೋಪಾಲನ ಪಮುನ್ನ ಸಂಸ್ಕøತಿಪಾಶದೊಳು ಬಿದ್ದನ್ಯಥಾರಕ್ಷಕರ ಕಾಣದೆ |ಬನ್ನಬಡುತಿಹ ಜನರನೀಕ್ಷಿಸಿ ಪೂರ್ಣ ಕರುಣಕಟಾಕ್ಷದಿ ||ತನ್ನ ನಾಮದ ಸುಧೆಯನುಣ್ಣಿಸಿ ತನ್ನ ಭಜನೆಯಸುಖವ ತೋರಿಸಿ |ತನ್ನ ದಾಸರ ಮಾಡಿ ಕೊಂಡಿಹ ಚೆನ್ನಸಿರಿಗೋಪಾಲನ 1ಶೀಲಗುಣ ಕಥನಗಳನರಸದೆ ಕೀಳು ಚಾರಿತ್ರ್ಯಗಳ ಬಗೆಯದೆ |ಲೋಲಚಿತ್ತದಿ ಮಾಡುತಿಹ ಅಘಜಾಲ ಕೋಟಿಗಳೆಣಿಸದೆ ||ಕಾಲದಿಂ ಬಹುನಂಬಿದವರನು ಲೀಲೆಯಿಂದಭಿಮಾನಿಸುತ-ಪರಿ-|ಪಾಲಿಸುತ್ತಿಹ ಮಂಗಳಾತ್ಮಕ ಶೀಲ ಕಂಠಮೂರ್ತಿಯ 2ಭಕ್ತಿ ಕರ್ಮಜಾÕನ ಯೋಗ ವಿರಕ್ತಿಯೆಂಬುದನೇನು ಕಾಣದೆ |ಮತ್ತೆ ಕೇವಲ ಮೂಢ ಭಾವದ ಚಿತ್ತದಲಿನೆರೆನಂಬಿದ ||ಆರ್ತರನು ಅಬಲರ ಅನಾಥರಜ ಮೃತುೈಮುಖದಿಂದವರತಾನೊಲಿ-|ದೆತ್ತಿ ಸಲಹುತಲಿಪ್ಪ ಸೊಬಗಿನ ಕೀರ್ತಿವಂತ ಮಹಾತ್ಮನ 3ಕರುಣದಿಂದೆಳಗಂದಿ ಕರುವಿನ ಮೊರೆಯ ಲಾಲಿಸಿ ಬಿಡದೆ ತೃಪ್ತಿಯ |ಕರೆದು ಮಾಡುವ ಪರಿಯೆ ತನ್ನಯ ಸ್ಮರಿಸುತಿಹ ಕಡುದೀನರ ||ಹೊರಗೆ ಶಿಕ್ಷಿಸಿ ಒಳಗೆ ರಕ್ಷಿಸಿ ಪಿರಿದು ತನ್ನಯ ನಿಜನವರಿಗೆ |ತೆರುವ ಕರುಣಾಳುಗಳ ದೇವನ ಶರಣಜನ ಮಂದಾರನ 4ನೇಮದಲಿ ನಂಬಿದರ್ಗೆ ಸೂಚಿಸಿ ಕಾಮವಾಸನೆಗಳನು ಖಂಡಿಸಿ |ಪಾಮರರ ಪಂಡಿತರ ಮಾಡಿ ಮಹಾಮಹಿಮೆಗಳ ತಿಳಿಸುತ ||ರಾಮರಮಣಿಯ ಸಹಿತ ಸಾಲಿಗ್ರಾಮದಲಿನೆರೆನೆಲಸಿ ಭಕುತರ |ಪ್ರೇಮದಿಂದಲಿ ಪೊರೆಯುತಿಹ ಸುಖಧಾಮ ಪುರಂದರವಿಠಲನ 5
--------------
ಪುರಂದರದಾಸರು
ಉಗಾಭೋಗಕರುಣವಾರಿಧಿ ನೀ ಕರುಣವಾರಿಧಿಯಾದ ಕಾರಣಕರಿಕುಲಾಗ್ರಣಿಯನ್ನ ಕಾಯ್ದೆಉರಿಉರಗಬಾಧೆಯ ತಪ್ಪಿಸಿ ತರಳನಾರೈದೆಕರುಣವಾರಿಧಿಯಾದ ಕಾರಣಸುರರ ಸಂಕಟ ಹರಿದುಕನಕಪುರದರಸುತನ ಕೊಟ್ಟೆ ಪೌಲಸ್ತ್ಯ ಅನುಜಗೊಲಿದುಕರುಣವಾರಿಧಿಯಾದ ಕಾರಣಸ್ಮರಿಸುತಿಹಗಂಬರದಿ ನಿಲಿಸಿದೆಭರದಿ ಮುನಿ ಬಂದೆದೆಯನೊದೆದರೆ ಮರಳಿ ಮನ್ನಿಸಿದೆಕರುಣವಾರಿಧಿ ನೀನು ನಿನ್ನಯಕರುಣ ಪಾತ್ರರುಸಿರಿವಿಧಾತ್ರರುಪರಿಚರರ ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ 1
--------------
ಪ್ರಸನ್ನವೆಂಕಟದಾಸರು
ಗೋಕುಲದ ಗೋಪಿಯರದೆಷ್ಟು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ ಪಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗುಜಾವದಿ ಮೊಸರ ಕಡೆವಾಗಲು 1ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ಇಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು 2ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |ಪರಿಪರಿ ಗೀತಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠಲನ |ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3
--------------
ಪುರಂದರದಾಸರು
ಶ್ರೀಶ ಶ್ರೀಹಯವದನ ಮೂರ್ತಿಗೊಂದಿಸುವೆಸಾಸಿರ ನಾಮದ ಒಡೆಯನೀನೆಂದು ಪನಿನ್ನ ನೋಡುವ ಇಚ್ಛೆಯಿಂದ ನಿನ್ನದಾಸರುಇನ್ನು ಗಾವುದ ದೂರದಿಂದ ಬರುತಿಹರುನಿನ್ನ ಭಕ್ತರ ಕೂಡಿ ನಿನ್ನ ಸೇವೆಯ ಮಾಡಿನಿನ್ನ ದರುಶನದಿಂದ ಧನ್ಯರಾಗುವರು 1ಹರಿದಾಸರೆಲ್ಲರೂ ಪರಮಸಂಭ್ರಮದಿಂದಹರಿದಿನದಜಾಗರಹರಿಸ್ಮರಣೆಯಿಂದಪರಮವೈಭವದಿ ತನ್ನ ಸ್ಮರಿಸುತಿಹ ಸುಜನರನುಕರುಣದಿಂದಲಿಕಾವಸಿರಿರಮಣನೆಂತೆಂದು2ಆಪತ್ತು ತಾಪತ್ರಯಂಗಳೆಲ್ಲವುನೀಗಿಶ್ರೀಪತಿಯೆ ರಕ್ಷಿಸು ರಕ್ಷಿಸೆಂದೆನುತಗೋಪತೀ ಕೃಷ್ಣನ್ನಪಾಡಿ ಪೊಗಳುವರನ್ನುಕಾಪಾಡುವನು ಸಕಲಪಾಪಗಳ ಹರಿಸಿ 3ಸೋದೆಯಲಿ ನೆಲೆಸಿರುವ ವಾದಿರಾಜರಿಗೊಲಿದುಆದರದಿ ಅವರಿತ್ತ ಸೇವೆ ಕೈಗೊಂಡುಶೋಭ ಕೃತುನಾಮ ಸಂವತ್ಸರದಿ ಸುಜನರಿಗೆಶೋಭನಂಗಳನಿತ್ತು ನೀದಯದಿ ಪೊರೆವೆ 4ಕಡು ಹರುಷದಿಂದಿತ್ತ ಕಡಲೆ ಹೂರಣ ಸವಿದುದೃಢ ಭಕ್ತರನು ಪೊರೆದೆ ಕಡುಹರುಷದಿಮೃಡನಸಖನಿನ್ನಂಘ್ರಿ ಬಿಡದೆ ಧ್ಯಾನಿಪ ಭಾಗ್ಯತಡೆಯದಲೆ ಪಾಲಿಸೈ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ