ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ನೆರೆನಂಬಿದವರನ್ನ ಪರಿವೆಮಾಡದೆ ಇನ್ನು ಪೊರೆಯದಿರುವರೆ ಪರಮಪುರುಷನೆ ನರಹರೆ ನಿಮ್ಮ ಚರಣ ಕಮಲವ ಹಾಗೆ ಸ್ಮರಿಸುತಿರುವಂಥ ಪರಮಪುಣ್ಯ ಭಕ್ತಜನ ರನು ಪಾಲಿಸದೆ ಇನ್ನು ಇರುವದುಚಿತವೆ ಪ ಅಮಿತ ಪರಾಕ್ರಮ ಕುಂಡಲಶಯನ ಅಕ್ರೂರ ವಂದ್ಯಾ ಪುಂಡರೀಕಾಕ್ಷನೆ ಪುಣ್ಯ ಪ್ರಭಾವನೆ ಕುಂಡಲಾಧಿಪ ದೇವ ಮಹಾನುಭಾವ ದಂಡಿದಾನವ ಖಂಡಗರ್ವ ಅಖಂಡಮುನಿಮನ ಮಂಡಲ ನಿಲಯ ಕೋದಂಡಧರನೆ ಅಂಡಜ ಗಿರಿವಾಸ ಹರಿಗೋವಿಂದನೆ 1 ಭೂಮಿಜರಮಣ ಸಂಪೂರ್ಣಾನಂದನೆ ಸಾಮಗಾನಲೋಲ ಸರ್ವೇಶನೆ ಕಾಮತಾರ್ಥಗಳೀವ ಕರುಣಾಸಾಗರ ದೇವಾ ಸ್ವಾಮಿ ಜಗನ್ನಾಥ ಸರ್ವೋತ್ತಮನೆ ಕಾಮ ಜನಕ ಸುದಾಮ ರಕ್ಷಕ ಪ್ರೇಮ ಸೀತಾರಾಮ ಜಗತ್ಪತಿ ಶೌರಿ ಶ್ರೀಹರಿ ಕೋಮಲಾಂಗ ಕೃಷ್ಣ ಮೂರುತಿ 2 ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾಗಿ ಸಕಲಭಾರಕರ್ತ ಶ್ರೇಷ್ಠನೆ ನಿಕರದಿ ಸಲಹುವ ನಿಜನಿತ್ಯಾನಂದಾನೆ ಪ್ರಕೃತಾದಿ ಪಾಲಿಸುವ ಪರಮಾತ್ಮನೆ ಸಕಲ ವೈಭವ ಚಿದ್ವಿಲಾಸನೇ ನಿಖರಾರೈ ನಿನ್ನಲಿ ನಮೋ ಭಕುತವತ್ಸಲ ಮುಕುತಿದಾಯಕ ರುಕ್ಮಣಿಯವರ 'ಹೆನ್ನವಿಠ್ಠಲಾ’ 3
--------------
ಹೆನ್ನೆರಂಗದಾಸರು
ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ ಪ ಕಳಿಯುವಂಥ ಅ.ಪ ಮಾನವರೂಪಾ ಮಹಾಜ್ಞಾನದ ಪಾಪಾ ಕಾನನ ದಾವಾಗ್ನಿಎನಿಸಿ ದೀನಜನರ ಪೊರೆಯವಂಥ 1 ಮಂಗಳ ಚರಿತಾ ಪಾಂಡುರಂಗನ ದೂತ ತಿಂಗಳ ಸಮ ಕಾಂತಿವಂತ ಡಿಂಗರಿಗರ ಪೊರೆಯುವಂಥ 2 ನರಜಗಮಾವಾ ಲಕುಮಿಗೆ ವರನೆನಿಸುವಾ ವರಶಿರಿ ಗೋವಿಂದ ವಿಠಲನ್ಹರುಷದಿಂದ ಸ್ಮರಿಸುತಿರುವ 3
--------------
ಅಸ್ಕಿಹಾಳ ಗೋವಿಂದ
ಸರಿ ಯಾರೊ ನಿನಗೆ ಪರಮ ಕರುಣಾನಿಧೆ ಪ ಸರಿ ಯಾರೊ ನಿನಗೆ ಗರುಡವಾಹನ ನಿನ್ನ ಸ್ಮರಿಸುತಿರುವರನು ಕರುಣದಿ ಪೊರೆಯುವೆ ಅ.ಪ. ಕರಿರಾಜ ಕೂಗಲು ಭರದಿಂದ ಪೋದೆಯೊ ಸರಸಿಜ ಭವನುತ ಸುರಗಣ ಸೇವಿತ 1 ಕಂದನ ಮಾತನು ಛಂದದಿಂ ಕೇಳುತ ಬಂದು ಸಂತೈಸಿದ ಇಂದಿರ ರಮಣನೆ 2 ದುಷ್ಟರ ಸದೆಯುತ ಶಿಷ್ಟರ ರಕ್ಷಿಸುವ ದಿಟ್ಟ ರಂಗೇಶವಿಠಲರಾಯನೆ 3
--------------
ರಂಗೇಶವಿಠಲದಾಸರು