ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಸುಭಕ್ತಾಧೀನ ಮೂರುತಿಯೆ ಪ. ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟಹಿರಣ್ಯಕಾಸುರನು ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ 1 ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ ಕಟಿ ಕಡಿವುತುಬ್ಬಸ ತೋರಿ ನಿಂದ ಕಠಿಣ ಮೂರುತಿಯೆ 2 ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ ಗರ್ಭವ ನಖದಿಂದ ಇಬ್ಭಾಗವನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ 3 ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಶಾಂತನಾಗಿ ಸಂತೋಷಪಡಿಸಿದ ಅ- ನಾಥ ರಕ್ಷಕನೆ ಕಾತರವಳಿದೆ 4 ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ನಳಿನ ಸಂಭವಗೆ ಬಲು ಹರುಷವನಿತ್ತೆ ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5
--------------
ಹೆಳವನಕಟ್ಟೆ ಗಿರಿಯಮ್ಮ
ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||ಎರಡು ಒಂದು ಕೋಟಿರೂಪ|ಧರಿಸಿ ರಕ್ಕಸರೊಳು ಕಾದಿ ||ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು 1ತಾಸಿಗೆಂಟು ಒಂದು ನೂರು |ಶ್ವಾಸಜಪವ ಮಾಡಿ ಜಂತು ||ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು2ಜಂಗಮರಿಗೆಪಾಣಿಚರಣ|ಕಂಗಳುಕಿವಿಯಾಡಿಸುತಲಿ ||ಪಿಂಗಳನಿಭಭಾರತೀಶ|ಹಿಂಗದನವರತ ಪೊರೆಯಲು 3ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು |ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4ಭುಜಕೆ ಗೋಪೀಚಂದನವನು |ವಿಜಯಚಕ್ರಗಳನು ಧರಿಸಿ ||ಕುಜನರಿಪುಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು 5
--------------
ಪ್ರಾಣೇಶದಾಸರು
ಆವ ಕುಲವಾದರೇನು ಪ.ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪಅಸುಡೊಂಕು ಕಬ್ದು ಇರಲು - ಅದರೊಳಗಿದ್ದರಸ ತಾನು ಡೊಂಕೇನಲೊ - ಮರುಳೆವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳಹಸನಾಗಿ ಕೇಳು ಕಾಣೋ - ಮನುಜಾ 1ನಾನಾವರ್ಣದ ಆಕಳ - ಕ್ಷೀರದಲಿನಾನಾವರ್ಣಗಳಹುದೆ - ಮನುಜಾಹೀನ ಭಾವನೆಗಳನಿಂದಿಟ್ಟು ನೀ ಪೋಗಿಜ್ಞಾನಿಗಳ ಕೇಳು ಕಾಣೋ - ಮನುಜಾ 2ಶರಧಿಯೊಳ ತೆರೆನೊರೆಗಳಾ - ಪರಿಯಂತೆಶರೀರವಲ್ಲದೆ ಬೇರಿಹುದೇ ?ವರಪುರಂದರವಿಠಲನ ಸ್ಮರಿಸುತಿರಲು ನಿನಗೆಸಿರಿಯನು ಮುಕುತಿಯಹುದು - ಮನುಜಾ 3
--------------
ಪುರಂದರದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು