ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊರಿಯದಲಿರುವರೇನು ಶ್ರೀಹರಿ ನೀನು ಪ ನಿರುತ ನಿನ್ನನಾನು ಸ್ಮರಿಸುತಲಿರುವೆನು ಕೌಸ್ತುಭ ಭೂಷಾ ಹರುಷದಿ ಮಂಜುಭಾಷಾ 1 ಭವಾರ್ಣವ ಪಾರಗಾಣಿಸೋ ದೇವಾ ಸಾರಸದಲನೇತ್ರ ನೀರದ ನಿಭಗಾತ್ರ 2 ದಿನಕರ ಕೋಟಿ ತೇಜ ಘನ ಗರುಡಧ್ವಜ ವನಧಿ ಕನ್ಯಾಧವ 3 ವರಗಿರಿಧರ ಕರುಣಾಕರ ಶುಭವದನ ಶರಣರ ಕಾಯುವಂತಹ ಬಿರುದು ನಿನ್ನದೊ ಅನಂತ 4 ಪರಮ ಪಾವನನಾದ ತರುಳ ಪ್ರಹ್ಲಾದಗೊಲಿದ ನರಹರಿ `ಹೆನ್ನೆಯ ಪುರನಿಲಯ ಪ್ರಮೇಯ 5
--------------
ಹೆನ್ನೆರಂಗದಾಸರು
ಶರಣಾಗತ ರಕ್ಷಕ ಕರುಣಾಂಬುಧೆ ಪರಿಪಾಲಿಸುವ ಮೊರೆ ಪಂಕಜಾಕ್ಷ ಪೊರೆವುದು ಲೇಸು ನಿರಾಕರಿಸದೆ ಹರಿ ನಿನ್ನ ಚರಣಕಮಲವನು ಸ್ಮರಿಸುತಲಿರುವೆನು ಪ ನಂದನಂದನ ಮುನಿವೃಂದ ವಂದಿತ ರಾಕೇಂದುವದನ ಗೋ ವಿಂದ ಕೃಷ್ಣಾ ಮಂದರಧರ ಮುಚುಕುಂದವರದ ಸಂ- ಕುಂದರದನ ಶ್ರೀ ಮುಕುಂದ ಶೌರಿ ಬಂಧನ ಮೋಚನ ಆಪದ್ಭಾಂಧವ ಶೌರೇ 1 ವೇಣುಗೋಪಾಲ ಪುರಾಣಪುರುಷ ಸುಮ- ಬಾಣಜನಕ ಸಾಮಗಾನ ಲೋಲ ಮಾಧವ ಚತು- ವಿನುತ ವiಹಾನುಭಾವ ಶ್ರೀನಿ- ವಾಸಾಚ್ಯುತಾಶ್ರೀತ ಕಲ್ಪತರು ಚಕ್ರಪಾಣಿ ಪದ್ಮೋದರ ಘೋರರೂಪ ಭಂಜನ ದೇವಾದಿದೇವ ವಿಷ್ವಕ್ಸೇನ ಜನಾರ್ದನ ಶ್ರೀ ವತ್ಸಲಾಂಛನ 2 ಹರಿಸರ್ವೋತ್ತಮ ಮರುತಾಂತರ್ಗತ ಪರಮಾತ್ಮ ಗರುಡವಾಹನ ಶುಭಕರಚರಿತ ಮುರಸೂದನಾನಂತ ಮುಕ್ತಿದಾಯಕ ಜಗದ್ಭರಿತ ಕೇಶವ ಕೌಸ್ತುಭಾಲಂಕೃತ ವರದ ಅಹೋಬಲ ಗಿರಿವಾಸ ವಸುಧೇಶ ಭಾಸುರ ಕೀರ್ತಿಸಾಂದ್ರ 3
--------------
ಹೆನ್ನೆರಂಗದಾಸರು