ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಬ್ಜಭವಪಿತ | ಮದ್ಗುರ್ವಂತರ್ಯಾಮಿ | ಸಲಹಯ್ಯ ಕುಬ್ಜ ಮೂರುತಿ | ಯಾದ ಗುರು | ಗೋವಿಂದ ವಿಠಲಯ್ಯ ||ಪ| ಈಶ ತಂದೆ ವೆಂಕ | ಟೇಶ ವಿಠಲನ | ದಾಸ ಸಹವಾಸ |ದೋಷ ರಾಶಿಯ | ನಾಶ ಗೈಸಿತು | ಶ್ರೀಶ ಕೇಶವನೇ 1 ಮರಣ ಸಮಯದಿ | ಚರಣ ಪುಷ್ಕರ | ಭಜಿಸಿದ ಜಮಿಳನ |ಕರುಣದಿಂದಲಿ | ಮರೆದ ವೋಲ್ | ಎನ್ನ ಮನಕೆ ಬಾ ನಾರಾಯಣ 2 ಭೇದ ಮತವೆಂ | ಬಬ್ಧಿಯಲಿ | ಉದಿಸಿವೆನು ಕಾಣಯ್ಯ |ಮಧ್ವಪತಿ | ಮದ್ಭಾರ ನಿನ್ನದು | ಸಲಹೊ ಮಾಧವನೆ 3 ಗೋವಿದಾಂಪತಿ | ಗೋಪ ಪಾಲಕ | ಶ್ರೀಶ ಗೋವಿಂದಮಾವ ಕಂಸನ | ಕೊಂದಸಿರಿ | ಗೋವಿಂದ ಸಲಹಯ್ಯ 4 ಸಿರಿ | ಕೃಷ್ಣ ಬೇಡುವೆ | ಕಷ್ಟ ಬಿಡಿಸಯ್ಯ |ವೃಷ್ಟಿಕುಲ ಸಂ | ಪನ್ನ ಪಾವನ | ವಿಷ್ಣು ಮೂರುತಿಯೆ 5 ವೇದಗಮ್ಯ | ದಯಾಪಯೋನಿಧಿ | ಸಾಧು ವಂದಿತನೆ |ಮೋದದಿಂ | ತವಪಾದ ಪೂಜಿಪೆ | ಪಾಲಿಸೈ ಮಧುಸೂಧನ 6 ಕಾಯ ಮಮತೆಲಿ | ಕಟ್ಟೆ ಧರ್ಮಾತ್ಮ |ಭವದ ಭವಣೆಯ | ಬಿಡಿಸುವುದು | ಬಲಿವರದ ತ್ರಿವಿಕ್ರಮ 7 ವಿಮಲ ಸತ್ಕಲ್ಯಾಣ | ಗುಣ ನಿಸ್ಸೀಮ | ಸುಜ್ಞಾನಾಅಮರಾರಿಯ ಧ್ವರ | ಕೆಡಿಸಿ ಉಳಿಸಿದೆ | ಶೀಲ ವಾಮನ 8 ಹೃದಯ ಶೋಭಿತ | ಮೋದಮಯ | ಮಧ್ವಾಂತರಾತ್ಮಕನೇ |ಆದಿಮೂರುತಿ | ಸಾಧು ವಂದಿತ ಕಾಯೋ ಶ್ರೀಧರನೇ 9 ಭಂಜನ ಬಿಸಜ ಭವ ಪಿತ | ಈಶ ಸರ್ವೇಶಾ |ಒಸೆದು ಬೇಡುವೆ | ಕಸರು ಕರ್ಮವ | ಹರಿಸೋ ಹೃಷಿಕೇಶ 10 ಬದ್ಧ ಜೀವನ | ಅಬದ್ಧ ಮಾಡಲು | ತಿದ್ದಿ ಸೃಜಿಸಿದೆಯೋ |ಸದ್ಗುರುವೆ ಮತ್ | ಪೊದ್ದಿಕೆಯ ಕಳೆ | ಪದ್ಮನಾಭನೆ 11 ಸಿರಿ ಮನೋಹರ |ಧಾಮತ್ರಯ ಸು | ತ್ರಾಮ ವಂದಿತ | ಪಾಲಿಸೈ ದಾಮೋದರ 12 ಪಂಕ ಕಳೆಯಯ್ಯ |ವೆಂಕಟಾ ಬಿರು | ದಾಂಕ ಜಯ ಜಯ | ಸಂಕರುಷಣ 13 ವಿಶ್ವ ವ್ಯಾಪಕನೇಶ್ರೀಶ ಸದ್ಮನೆ | ವಾಸುದೇವನೆ | ಪೋಷಿಸೈ ಪರಮಾತ್ಮನೇ 14 ನಿರವದ್ಯ ಆಪನ್ನ ಪಾಲನೆ | ಪೊರೆಯೊ ಪ್ರದ್ಯುಮ್ನ 15 ಅನಿರುದ್ಧ 16 ಕರಿವರನು ತವ | ಚರಣ ಸರಸಿಜ | ನಂಬಿ ಮೊರೆಯಿಡಲು |ಕರದ ಚಕ್ರದಿ | ತರಿದು ನಕ್ರನ | ಬಿಸುಟ ದೊರೆ ಪುರುಷೋತ್ತಮ 17 ದರ ಚಕ್ರಧರ | ಅಧೋಕ್ಷಜ18 ತರಳ ಕರೆಯಲು | ಭರದಿ ಕಂಬದಿ | ಬಂದ ತ್ರಿಪದಾಹ್ವದುರುಳ ಹಿರಣ್ಯನ | ತರಿದು ಭಕ್ತನ | ಸಲಹಿದ್ಯೋ ನರಸಿಂಹನೆ 19 ಕಚ್ಛಪ ಅಚ್ಯುತ | ಸಲಹೊ ಚ್ಯುತಿ ದೂರ | 20 ಸಾನುಕೂಲವು | ಸಕಲ ಸಾಧನ | ನಿನ್ನ ಭಜಿಸುವಗೇ ಜ್ಞಾನಗಮ್ಯ | ಅನಾದಿ ರೋಗವ | ನೀಗೋ ನೀ ಜನಾರ್ಧನ 21 ಸ್ಮರ ಕೋಟಿ ಸುಂದರ | ಪಾಹಿ ಉಪೇಂದ್ರ 22 ಮರದಿ ಎಂಜಲ | ಸವಿದು ಶಬರಿಯ | ಕಾಯ್ದೆ ಮುರವೈರಿ ತ್ವರದಿ ತ್ವತ್ಪದ | ವನಜ ಕಾಂಬುವ | ಹದನರುಹು ಶ್ರೀಹರಿ 23 ಜಿಷ್ಣು ಸಖ | ಶಿಷ್ಟೇಷ್ಟಪರಿ | ಹರಿಸಯ್ಯ ಮುತೃಷ್ಣಾ |ಕೃಷ್ಣೆ ಗಕ್ಷಯ | ವಸನ ದಾತನೆ | ಕಾಯೊ ಶ್ರೀ ಕೃಷ್ಣ 24 ನಿರುತ ನಿನ್ನಯ | ಚರಣ ಪುಷ್ಕರ | ಮಧುಪನೆನಿಸಯ್ಯಸ್ಮರಿಪರಘ | ಪರಿಹರಿಪ ಗುರು | ಗೋವಿಂದ ವಿಠಲಯ್ಯಾ | 25
--------------
ಗುರುಗೋವಿಂದವಿಠಲರು
ಉರಗಗಿರಿವಾಸ ವಿಠಲ | ಪೊರೆಯ ಬೇಕಿವಳಾ ಪ ಪರಮಕರುಣಾಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ. ನಿರತ ನಿನ ಸ್ಮರಿಪರಘ | ಪರಿಹರಿಪೆ ನೆಂಬನುಡಿಪರಮ ಸಾರ್ಥಕ ಗೊಳಿಸೊ | ತರಳೇ ಇವಳಲ್ಲಿಕರುಣ ಸಾಗರ ನಿನ್ನ | ಬೇರೊಂದಪೇಕ್ಷಿಸದೆ |ಸರಸದಲಿ ತವರೂಪ | ಚಿಂತೆಯಲ್ಲಿಹಳೋ 1 ಮರುತ ಮತವನೆ ಪೊಂದಿ | ತರತಮದ ಸುಜ್ಞಾನ ಪರಪಂಚಬೇಧಗಳ | ಅರಿತು ಭಜಿಸುವಳೋನೆರೆನಂಬಿ ತವಪಾದ | ಹಾರೈಸುತಿರುತಿಹಳವರ ಸುಸಾಧನವನ್ನೆ | ಅಭಿದೃದ್ಧಿಗೊಳಿಸೊ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀಹರಿಯೆಂಬಮತಿಯಿಂದ ಸೇವಿಸುತ | ದ್ರವ್ಯ ವಿಭಮನಾಹತಗೈದು ಕತೃಪ್ವ | ಅಂತಕಾರಕ ಭ್ರಮವಕ್ಷಿತಿರಮಣ ಪರಿಹರಿಸಿ | ಆರ್ತಳುದ್ಧರಿಸೋ3 ಜ್ಞಾನ ಸದ್ವೈರಾಗ್ಯ | ಅನುವಂಶಿಕವಾಗಿನೀನಾಗಿ ಕರುಣಿಸಿಹೆ | ಜ್ಞಾನಾತ್ಮಹರಿಯೆಮೌನಿಕುಲ ಸನ್ಮಾನ್ಯ | ಜ್ಞಾನಿ ಜನಸಂಗವನುನೀನಾಗಿ ಕೊಟ್ಟಿವಳ ಉದ್ಧರಿಸೋ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವಾಂತಾರಾತ್ಮಕನೆದರ್ವಿ ಜೀವಿಯ ಹೃದಯ | ಗಹ್ವರದಿ ನಿನ್ನಾಭವ್ಯರೂಪವ ತೋರಿ | ಉದ್ದಾರ ಗೈ ಇವಳಾಶರ್ವವಂದ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರುರಾಜರ ನಂಬಿರೋ ಸಾರುವೆ ನಾ ಸಾರುವೆ ನಾ ಸಾರುವೆ ನಾ ಪ ಗುರು ವಾದಿರಾಜರ ಚರಣ ಸ್ಮರಣೆಯಿಂದ ದುರಿತ ರಾಶಿಗಳೆಲ್ಲ ಪರಿಹಾರವಾಗುವುದು ಅ.ಪ ಕರುಣಾಸಾಗರರಿವರು ಸ್ಮರಿಪರಘ ಸ್ಮರಿಸದೆ ಪರತತ್ವವರಿದು ಬಾರಿ ಬಾರಿಗೊದಗಿದಪಾರ ಸಂಶಯ ದೂರಗೈಸಿ ಮುರಾರಿ ಚರಣವ ತೋರ್ಪ ಸುರರಿಗೆ ಮರುತರೆನಿಪರು ಬರುÀವ ಕಲ್ಪಕೆ 1 ಗುರು ವಾದಿರಾಜರೆಂಬ ಸುರತರು ಇರುವುದು ಸೋದಾಪುರದಿ ಅರಿತು ನಿರುತದಿ ಪರಮ ಭಕುತಿಯಲಿ ಸೇರಿ ಸೇವೆಯ ಮಾಳ್ವ ಸುಜನಕೆ ಬೀರುವರು ಪುರುಷಾರ್ಥಗಳನು ಸುರರು ಮಹಿಮೆಯ 2 ಉಪಚಾರವಲ್ಲವಿದು ಶ್ರೀಪತಿಯಾಣೆ ಗುಪಿತದಿಂದಿವರ ಮಂತ್ರ ಜಪಿಸಿ ಭೂತರಾಜರೆಂಬೊರು ತಾಪಹಾರಕರಾಗಿ ಸುಜನಕೆ ತಪವ ಮಾಳ್ವರು ರುದ್ರ ಪದವಿಗೆ ಪಾದ ಇವರಲಿ 3
--------------
ಪ್ರದ್ಯುಮ್ನತೀರ್ಥರು
ಜೋ ಜೋ ಶ್ರೀಗುರು ಪ್ರಹ್ಲಾದರಾಜ ಜೋಜೋ ಭಜಕರ ಕಲ್ಪಮ ಹೀಜ ಸ್ತಂಭ ದರ್ಶಿತ ನರಮೃಗರಾಜ ಜೋಜೋ ಭಂಗಾರಕÀಶಿಪುತನುಜ ಜೋ ಜೋ 1 ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ ನಂದಿತ ಭೂಮಿ ವೃಂದಾರಕ ವೃಂದಾ ವಂದಿಪರಘಕುಲ ಪನ್ನಗವೀಂದ್ರ ವಂದಿಸುವೆನು ಗುರು ವ್ಯಾಸಯತೀಂದ್ರ2 ಜೋ ಜೋ ಮಧ್ವಮತಾಂಬುಧಿ ಚಂದ್ರ ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ ಜೋ ಜೋ ಜ್ಞಾನಾದಿ ಸದ್ಗುಣ ಸಾಂದ್ರ ರಾಜಾಧಿರಾಜ ಶ್ರೀ ಗುರು ರಾಘವೇಂದ್ರ 3 ಮಂತ್ರಮಂದಿರದಿ ನಿಂತು ಶೇವಕರ ಚಿಂತಿಪ ಫಲಗಳ ಕೊಡುವ ಉದಾರ ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ ಪಂಥವ ತೋರಿಸಿ ಮಾಡೊ ಉದ್ಧಾರ 4 ಶುಭ ಚರಿಯ ನಿರುತಸ್ಮರಿಪರಘ ತಿಮಿರಕೆ ಸೂರ್ಯ ಧರಿಸುರ ಶೇವಿತ ಪರಿಮಳಾಚಾರ್ಯ ಶಿರಿ ಕಾರ್ಪರನರಹರಿ ಗತಿ ಪ್ರಿಯ5
--------------
ಕಾರ್ಪರ ನರಹರಿದಾಸರು
ಭಕುತವತ್ಸಲ ಶೀಲಾ-ಶೇಷಗಿರಿಯ ಲೋಲಾ ಪ ನೀ ಕರುಣಿಸೊ ಎನ್ನಾ-ಕುಲಸ್ವಾಮಿ ಘನ್ನಾಅ.ಪ ಮಂದಭಾಗ್ಯನು ನಾನು ವೃಂದಾರಕ ವಂದ್ಯ ತಂದೆ ಎನಗೆಂದೆಂದು ಅನಿಮಿತ್ತಬಂಧೂ ವಂದಿಪೆ ನಿನ್ನಯ ದ್ವಂದ್ವಪಾದದ ಧ್ಯಾನ ಅ- ದೊಂದನಾದರು ಇತ್ತು ಬಂಧವ ಪರಿಹರಿಸೊ ಹಿಂದೆ ನಿನ್ನಯ ನಾಮ ಒಂದೇ ಬಂಧಹರಿಸಿತು ಭಕುತವೃಂದಕೆ ಅಂದು ಅವರೇನೆಂದು ಕರೆದರೋ ಮಂದರೋದ್ಧರ ಬಂಧಮೋಚಕ1 ಓಲೈಪರೋ ಮುಕ್ತಜಾಲ ನಿನ್ನ ಕಾಲನಾಮಕ ಆಪತ್ಕಾಲಬಾಂಧವನೆಂದು ಕಾಲಿಗೆರಗುವೆ ಕೃಪಾಳು ನೀನಲ್ಲವೆ ಸೊಲ್ಲಲಾಲಿಸೊ ಲಕುಮಿನಲ್ಲ ನೀ ನಲ್ಲದಲೆ ಇನ್ನಿಲ್ಲವೆಂದಿಗೂ ಬಲ್ಲಿದರಿಗತಿಬಲ್ಲಿದನು ಆ- ವಲ್ಲಿ ನೆನೆದರೆ ಅಲ್ಲೇ ಪೊರೆವೆ 2 ಪುರಾಣಪುರುಷನೆ ಪರಮ ಕರುಣಿ ಎಂದು ಪುರಾಣದೊಳು ನೀನೆ ಪ್ರತಿಪಾದ್ಯನೊ ಕರಿ ಧ್ರುವ ಭೃಗು ಭೀಷ್ಮರ ಚರಿತೆಯ ನೋಡಲು ಹರಿ ನಿನ್ನ ಸರಿಯುಂಟೆ ದುರಿತಾಪಹಾರದಿ ಸ್ಮರಿಪರಘ ಪರಿಹರಿಪ ಶ್ರೀಪ ಸುರಪಹರಮುಖವಿಬುಧವಂದ್ಯ ದರಸುದರ್ಶನಧಾರಿ ಶ್ರೀ ವೇಂಕಟೇಶಉರುಗಾದ್ರಿವಾಸ ವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ವೆಂಕಟಾಚಲ ನಿವಾಸಾ-ಜಗದೀಶ ಸಂಕಟ ಹರಿಸೋ ಶ್ರೀಶಾ ಪ ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ ಅಕಳಂಕಮಹಿಮ ಖಗಾಂಕ ಚಕ್ರಗದಾ ಶಂಖಶ್ರೀಕರಕಂಜಧರಪಾಣೀ ಅ.ಪ ಲೋಕನಾಥ ಲೋಕಬಂಧು-ದಯಾಸಿಂಧು ಭಕುತರನಿಮಿತ್ತಬಂಧು-ಎಂದೆಂದೂ ಭಕುತರ ಬೆಂಬಲನು ಎಂದೂ-ಇಂತೆಂದೂ ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ ಏಕಮೇವ ನೀ ಕೈಬಿಡದೆ ಕರ್ಮ- ಪಾಕಮಾಡಿಸೋ-ಕಾಲನಾಮಕ1 ಬಂಧಕಗಳ ತಂದೊಡ್ಡೀ-ಭಕುತರ ಮನ ಪರಿ ಧೃಢಮಾಡಿ-ಪರಿಯುನೋಡಿ ಬಂದ ಬಂಧವ ಹರಿಸಿ-ಹೃದ್ವಾಸೀ ಹಿಂದುಮುಂದೂಕಾಣದ ಮಹ- ಅಂಧಕಾರಣ್ಯದಲಿ ಸಲಹಿದೆ ಬಂಧ ಮೋಚಕನಹುದೋ ಅನಾಥ ಬಂಧು ನೀನೆಂದು ನಂಬಿದೇ 2 ಕರುಣಾಸಾಗರನೇ ನಿನ್ನಾ-ನಾ ನಂಬಿದೆ ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ ಪರಮಸಾಧನ ಕಾಣದೇ-ಪರಿತಪಿಸುವೇ ನಿರುತ ಭವಸಂಕೋಲೆಯಾ ಕಡಿದು ಪೊರೆಯುವುದೋ ಶ್ರೀ ವೆಂಕಟೇಶನೆ ಸ್ಮರಿಪರಘ ಪರಿಹರಿಪ ಶ್ರೀ- ಉರಗಾದ್ರಿವಾಸವಿಠಲ ಪ್ರಭೋ 3
--------------
ಉರಗಾದ್ರಿವಾಸವಿಠಲದಾಸರು
ಸ್ಮರಿಸಿ ಬೇಡುವೆ ಗುರುವರರ ಪಾದ- ಸರಸಿಜ ಸ್ಮರಿಪರಘುಪರಿಹರಿಸುವರಪ ಇಂದಿರೇಶನ ಮಹಿಮೆ ಬಲ್ಲ ಭಕ್ತ ಸಂದಣಿಯೊಳು ಇವರಿಗೆ ಸಮರಿಲ್ಲ ತಂದೆ ವೆಂಕಟೇಶ ವಿಠ್ಠಲನೆಂದು ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ 1 ಸಿರಿವೆಂಕಟೇಶನ್ನ ಸ್ಮರಿಸಿ ಬಹು ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ ಗಿರಿಯ ವೆಂಕಟನನ್ನು ಭಜಿಸಿ ನಮ್ಮ ಉರಗಾದ್ರಿವಾಸ ವಿಠ್ಠಲದಾಸರೆನಿಸಿ2 ಸದ್ವೈಷ್ಣವರ ಸುರಧೇನು ಸರ್ವ ರುದ್ಧಾರವಾಗಲು ಜನಿಸಿದರಿನ್ನು ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ ಮುದ್ದು ಮೋಹನ್ನ ವಿಠ್ಠಲದಾಸರನ್ನು 3 ಸುಂದರ ಮೂರ್ತಿಯ ತಂದು ದುರ್ಗ ಮಂದಿರದಲಿ ಸ್ಥಾಪಿಸಿದರೊ ಅಂದು ಛಂದದಿ ಸೇವಿಸಿರೆಂದು ಶಿಷ್ಯ ಮಂಡಲಿಗಳಿಗೆ ಬೋಧಿಸಿದರೆಂತೆಂದು 4 ಕಳವಳ ಪಡುತಿಹೆನಲ್ಲ ಕಾಲ ಕಳೆದು ಹೋಗುತಲಿದೆ ಅರಿವು ಬರಲಿಲ್ಲ ಪರಮ ಭಕ್ತರ ಪರಿಯನೆಲ್ಲ ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ 5
--------------
ನಿಡಗುರುಕಿ ಜೀವೂಬಾಯಿ