ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ನಿನ್ನಚರಣಾರವಿಂದವ ಪ ಪರಮ ಪುರುಷನಿನ್ನ ಚರಣ ಪಂಕಜವನ್ನು ನಿರುತ ನಂಬಿದೆ ಎನ್ನದುರಿತ ಪರ್ವತವನ್ನು ಸುರಪ ವಜ್ರದಿ ಗಿರಿಗಳನು ಖಂಡಿಸಿದವೋಲ್ ತರಿದು ರಕ್ಷಿಸೋ ಮುರಹರನೆ ಸ್ಮರಣೆಯಿತ್ತು 1 ಮಕ್ಕಳಾಟಿಕೆಯಿಂದ ಕೆಲವು ದಿವಸಸಂದು ಕಾಲ ಬರಲುಸ್ತ್ರೀಯರಿಗೆ ಕ ಣ್ಣಿಕ್ಕಿ ಮುದದಿ ದಿನಗಳೆದು ಮರೆತೆನೀಗಳು ಸೀತಾ ರಮಣ ಸ್ಮರಣೆಯಿತ್ತು 2 ವಿಧಿ ಬರೆದ ಲಿಖಿತವೆಲ್ಲ ಸಂತು ದರ್ಜನರೊಡನಾಟದೊಳಗೆ ಕಾಲ ವಿಂತು ಸವೆದು ಜರೆ ಮುಸುಕಿತೆನೆಗೆ ಲಕ್ಷ್ಮೀ ಕಾಂತ ನಿನ್ನಯ ನಾಮ ಸ್ಮರಣೆಯಂತ್ಯದೊಳಗಿತ್ತು 3
--------------
ಕವಿ ಪರಮದೇವದಾಸರು
ಪಾರ್ವತಿದೇವಿ ಕರುಣದಿ ಕಾಯೆ ತಾಯೆ ಕರುಣಾಭರಣೆ ವಿಶ್ವಂಭರಣೆ ಪ. ಕರುಣಿಸಿ ಕಾಯೆ ತಾಯೆ ಮರೆಯದೆ ನಿನ್ನಯ ಚರಣಸ್ಮರಣೆಯಿತ್ತು ಭರದಿ ಕಾಪಾಡೆ ಅ.ಪ. ಅಂಬಾ ಲೋಕೇಶ್ವರಿ ಅಂಬಿಕೆ ನಿನಪಾದ ನಂಬಿದವರಿಗೆ ಕಷ್ಟಗಳುಂಟೆ ತಾಯೆ ನಿನ್ನ ಕಂಬುಕಂಠನರಾಣಿ ಬೆಂಬಿಡದಲೆ ಕಾಯೆ ಸಂಭ್ರಮದಲಿ ನಿನ್ನ ಇಂಬ ತೋರಿಸುತ 1 ಅಖಿಳಾಂಡನಾಯಕಿ ಸುಖಪ್ರದಾಯಕಿ ಸಖ ಶಂಕರನೊಳು ಸುಖಿಪ ಕಲ್ಯಾಣಿ ಅಕಳಂಕ ಮಹಿಮಳೆ ಸಕಲಕಾಲದಿ ನಿನ್ನ ಭಕುತಿಯೊಳ್ ಪೂಜಿಪÀ ಸಖರೊಳಗಿರಿಸೆ 2 ಭಕ್ತ ಮಂದಾರೆ ಭಕ್ತಿ ಮುಕ್ತಿಯನೀಯೆ ಸಹೋದರಿ ಕಾಯೆ ಭುಕ್ತಿಗೋಸುಗ ನಿನ್ನ ಸ್ಮರಣೆ ನಾನೊಲ್ಲೆನೆ ಶಕ್ತಿ ಸ್ವರೂಪಿಣಿ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ
ಶೇಷಾಚಲ ಮಂದಿರ-ಇಂದಿರೇಶ ಪ. ಪಾದ ಸ್ಮರಣೆಯಿತ್ತು ಅ.ಪ ಕರಣಕ್ರಿಯಕರ್ಮಂಗಳೆಲ್ಲವು ಜಡವು ಕರ್ಮ ನಿನ್ನ ನಿಯಮನವಿಹುದು ನಿರುತ ಪರವಶನಾಗಿ ನಾ ಮಾಳ್ಪೆನೆಂಬ ಈ ದುರಭಿಮಾನದಿ ನಾ ಭವಕೊಳಗಾದೆನೊ 1 ವಿಷಯಂಗಳೆಲ್ಲ ಜ್ಞಾನಗೋಳಕದಿ ಬಂದು ಎನ್ನ ವಿಷಮಗೊಳಿಸಿತು ಮನ ಅಭಿಮಾನದಿಂದಲಿ ಹೃಷೀಕಪನೆ ಎನ್ನ ಮನವಿಷಮತೆಯ ಹರಿಸಿ ಪೋಷಿಸೊ ನಿರುತ ಕೃಪಾಕರ ಮೂರುತೇ 2 ದೋಷದೂರನೆ ನಿನ್ನ ವಿಸ್ಮರಣೆಯಿಂದಲಿ ವಾಸುಕೀಶಯನ ನೀ ಭೂತಾವಾಸ ನೀನಾಗಿರೆ ಮೋಸಹೋದೆನ್ನನು ಪೋಷಿಸಬೇಕಯ್ಯ 3 ಕುಟಿಲ ಮನದಲಿ ನಿನ್ನ ಭಕುತನೆಂದೆನಿಸಿದೆ ವಟಪತ್ರಶಾಯಿ ನೀ ಹಟ ಸಾಧನಕ್ಕೆ ಒಲಿಯೆ ದಿಟಭಕುತಿಯ ಕೊಟ್ಟು ಕಡೆ ಹಾಯಿಸಯ್ಯ 4 ತನುಛಾಯೆ ಕ್ರಿಯೆಯು ತನ್ನ ತನುವನಾಶ್ರೈಸಿದಂತೆ ನಾ ನಿನ್ನ ಪ್ರತಿಬಿಂಬನಾಗಿರಲು ಸದಾ ಎನ್ನ ಕ್ರಿಯೆಗಳೆಲ್ಲಾ ನಿನ್ನ ಆಣತಿಯಂತಿರೆ ಘನಮಹಿಮನೆ ನಿನ್ನಾಕ್ರಿಯವನರಿಯದೆ ಹೋದೆ5 ಪನ್ನಗಾಚಲನಿಲಯ ಆಪನ್ನರಕ್ಷಕ ನೀನಿರೆ ಬನ್ನಬಡಲ್ಯಾಕಯ್ಯ ಅನ್ಯರನಾಶ್ರಯಿಸಿ ಮನೋವಾಕ್ಕಾಯ ಕರ್ಮವನರ್ಪಿಸಲು ಸನ್ಮತಿಯನೆ ಇತ್ತು ಸತತ ಸಲಹಯ್ಯ 6 ಸರ್ವಸತ್ತಾಪ್ರದನೆ ಸರ್ವಪ್ರವೃತ್ತಿಪ್ರದನೆ ಸರ್ವರಂತರ್ಯಾಮಿ ಮಮಕುಲಸ್ವಾಮಿ ಉರಗಾದ್ರಿವಾಸವಿಠಲ ನಿನ್ನಯ ದಿವ್ಯ ಚರಣಸ್ಮರಣೆಯನಿತ್ತು ಕಾಯೊ ಕಮಲಾಕಾಂತ7
--------------
ಉರಗಾದ್ರಿವಾಸವಿಠಲದಾಸರು