ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೋ ಮನವೇ ನೀಹೀಂಗಾದಿ ಧ್ರುವ ಏನೋ ಮನವೇ ನೀ ಹೀಂಗಾದಿ | ಸ್ವಾನಂದ ಸುಖ ತಿಳಿಯದೆ ಬಳದಿ | ಮಾನುಭವರ ವಿಡಿನಿಜ ಹಾದಿ | ಭವ ವ್ಯಾಧಿ 1 ಮಂದ ಮತಿತನ ಬಿಡು ಗುಣದಾ | ಹೊಂದೋ ಸದ್ಗುರುವಿನ ಪಾದಾ | ಛಂದದಿ ಪಡಿಯೋ ನಿಜ ಬೋಧಾ | ಸಂದೇಹ ಬಿಡಿಸೆಚ್ಚರಿಸುವದಾ2 ಹೊಗೆ ಅಗ್ನಿಯ ಮುಸುಕಿಹ ಪರಿಯಾ | ಮಾಯಾ | ಬಿಗಿದಾವರಿಸಿಹುದು ನೋಯಾ | ಬ್ಯಾಗನೆ ತಿಳಿ ಗೆಲುವ ಉಪಾಯಾ 3 ಮುಂದ ಹಾಕಿದ ಹೆಜ್ಜೆಯನು | ಹಿಂದಕ ತಿರುಗಿಸದಿರು ನೀನು | ನಿಂದಿಸಲೊಂದಿಸಲಾರೇನು | ಮುಂದಗಿಡದೆ ಬೆರಿ ವಸ್ತವನು 4 ನಿನ್ನ ಸುದ್ದಿಯು ತಾ ನಿನಗಿಲ್ಲಾ | ಇನ್ನಾರೆ ತಿಳಿತನು ಸ್ಥಿರವಲ್ಲಾ | ಮುನ್ನಿನ ಪರಿಕೆಡುವುದು ಸಲ್ಲಾ | ಮನ್ನಿಸು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬಿಗಿಟ್ಟ ಸಂಸಾರ ಇದು ನಂಬಿ ಹಂಬಲಿಸದಿರು ಪೂರಾ ಪ ಕಾಯವೆಂಬುದು ಸ್ಥಿರವಲ್ಲಾ ಅತಿ ಮಾಯಕೆ ಬಂದು ಸಿಕ್ಕಿದೆಲ್ಲಾ ಬಾಯಿ ರುಚಿಗಳು ಬಿಡು ಎಲ್ಲಾ ರುಚಿ ರುಚಿಸೆಲ್ಲಾ ತಂದೆ ತಾಯಿಗಳು ಇನ್ನು ಹೊಂದಿದ ಅದರಲ್ಲೆ ಬಗೆ ಮಾಯದೊಳು ಇರುವಾಗೆ ಆನಂದ ತೋರುವದು ನಿನ್ನೊಳಗೆ 1 ಧೊರೆತನ ದೌಲತ್ತು ಸ್ಥಿರವೆಂದು ಪರಿ ಪರಿಯಲಿ ವಿಹರಿಸು ಎಂದೂ ಪರಮಾತ್ಮನ ಭಜನಿಲ್ಲದೆಂದೂ ವ್ಯರ್ಥ ಪಾಪಕೆ ಒಳಗಾಗಿ ಕೆಡುವೆಂದೂ 2 ಬದುಕು ಬಾಳುವೆ ನಂಬಿಕೊಂಡು ಮುಂದೆ ತುದಿಗಾಣದೆ ಹೋಗ್ವದು ಕಂಡೂ ----------------------- ---------------------- 3 ಅಷ್ಟೂ ಶ್ರೀಹರಿ ಮಾಯವೆಂದೂ ಸ್ಪಷ್ಟದಿ ಮನದಲಿ ತಿಳಿಯಿಂದೂ ಶಿಷ್ಟ ಹೆನ್ನ ವಿಠ್ಠಲನೆಂದೂ ಉತ್ಕøಷ್ಟದಿ ಹೃದಯದಿ ಸ್ಮರಿಸಿಂದೂ 4
--------------
ಹೆನ್ನೆರಂಗದಾಸರು
ಮನವೇ ಕೊಬ್ಬ ಬ್ಯಾಡ ಉಬ್ಬ ಬ್ಯಾಡಾ ಪ ನೆನುವಿನೊಳಿಟ್ಟು ಮಾನುಭಾವರ ಚರಣ ಕಮಲವನು ಜನುಮ ಸಾರ್ಥಕವನು ಮಾಡು ಕಂಡ್ಯಾ ಅ.ಪ ವಿದ್ಯೆ ವಶವಾದರೆ ನೀ ತಿದ್ದಿ ಕಲಿಸು ಆರ್ತರಿಗೆ | ಬುದ್ಧಿವಂತರ ಕೂಡಾ ತರ್ಕಸ್ಯಾಡ ಬೇಡಾ ನೋಡಬ್ಯಾಡಾ | ಉಧೃತ ಶಕ್ತಿಯ ಬಲದಿಂದ ಸಂತ ಸೇವೆ ಮಾಡು | ಗುದ್ದಿ ಹೆಟ್ಟಿ ಪರರ ಪೀಡಿ ಕುಡಬ್ಯಾಡಾ ಮಾಡಬ್ಯಾಡಾ | ಮುದ್ದಿ ಘನವಾದರ ಸತ್ಪಾತ್ರಕ ನಿವೇದಿಸು | ಮದ್ದು ತಿಂದು ನುಡಿವವನಂತ ಪರರ ದೋಷ ಗುಣಾ | ಬದ್ಧವಚನವ ನುಚ್ಚರಿಸದಿರು 1 ರಾಜಮುದ್ರಿಯ ನೆವದಿ ಉದರ ತುಂಬಲಾಗಿ ನೀತಿ ಬಿಟ್ಟು | ಈ ಜನರನಾ ದಂಡಿಸುವದಲ್ಲಾ ಇದುಸಲ್ಲಾ | ಆ ಜನ ಹೊಟ್ಟೆ ಹಾಕಿ ಬರೆಗೈಯ್ಯ ಹೋಗುವಂತೆ | ನೀ ಜಯಿಸಿ ಬಂದದಲ್ಲಾ ಸಂದದಲ್ಲಾ | ತ್ಯಾಜದಿಂದ ದೊಡ್ಡವ ನೀನೆಂದು ಸೆಜ್ಜಿ ತೆನೆಯಂತೆ | ಸುಜನರೊಳಗ ಗರ್ವ ಹಿಡಿಯದಿರು ಪಡೆಯದಿರು | ವಾಜಿಯಲಿ ನವಣಿ ತೆನೆಯಂತ ಬಾಗಿ ನಡೆದರೆ| ಶ್ರಿ ಜನಾರ್ಧನ ರಕ್ಷೀಸುಚ ಕಂಡ್ಯಾ 2 ಜರಿದು ಕೈಯಲ್ಲಿಂದ ಸಬಕಾರ ನೀರೊಳಗ ಬಿದ್ದ | ತೆರದಿಂದ ತಿರುಗಿ ತಿರುಗಿ ಯಾತಿಗಳನು | ಭರದಿಂದ ಕಡಿಯಲಿ ಪುಣ್ಯ ಫಲ ವಶದಿಂದ| ನರದೇಹವನು ತಾಳಿ ಬಂದಿ ನೀನು ತಿಂದಿ ನೀನು | ತ್ವರಿತ ಸುತಪ್ರಿಯ ಗುರು ಮಹಿಪತಿ ಚರಣಕ | ಮೊರೆ ಹೊಕ್ಕು ಗತಿ ಪಡೆ ಭಾವದಿಂದ ಜೀವದಿಂದ | ಧರೆಯೊಳು ಗಾಳಿಯೊಳಗಿನ ದೀಪ ತೋರುವಂತೆ | ಸ್ಥಿರವಲ್ಲಾ ಆಗಲ್ಹೋ ಈಗಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಗುರುವಿಟ್ಟಂತಿರಿರೋ ವ್ಯರ್ಥಸ್ಯ ಭ್ರಮೆಗೊಳ್ಳಬೇಡೀ ಪ ಕೊಟ್ಟರೂಟವ ಮಾಡಿ ಕೊಡದಿದ್ದರವನ ಪಾಡಿ ಸಿಟ್ಟಾಗಿ ಶಿವನ ಬೈಬೇಡೀ 1 ಸಂತೆಯ ಕೂಟವಿದು ಸಟೆಯ ಸಂಸಾರವಿದು ಅಂತರಾತ್ಮನ ಧ್ಯಾನಿಸುವನೇ ಸಾಧು 2 ಯಾರಿಗೆ ಯಾರಿಲ್ಲಾ ನರದೇಹ ಸ್ಥಿರವಲ್ಲಾ ವಸ್ತು ಮೀರಿದ ಬಳಿಕ ಇರಲಿಲ್ಲಾ 3 ಒಂದೇ ಜನ್ಮದ ನಂಟು ಸುಖದುಃಖಕ್ಕೋಂದೇ ಗಂಟು ಸಂದೇಹವಿಲ್ಲ ಕೊಟ್ಟ ಋಣ ಉಂಟು 4 ವರಮಂಗೀಶಾತ್ಮಾರಾಮಾ ಇರಿಸಿದಂತಿರುವ ನೇಮಾ ಗುರು ವಿಮಲಾನಂದ ಸುಖಧಾಮಾ 5
--------------
ಭಟಕಳ ಅಪ್ಪಯ್ಯ