ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಣಿ ಕುಣಿಯೆಲೋ ಹರಿಗಾನದಲಿ ಪ ಅಣಕಿಸುವರೆಂದು ಮನ ಜರಿಯದೆಲೆ ಅ.ಪ ಅನುಗಾಲವು ಮನಕೊರೆಯುವ ಅನುತಾಪಗಳ ಕೊನೆಗಾಣಿಸಲು 1 ಸ್ಥಿರವಲ್ಲವು ನರಜನ್ಮವು ಸರಿಸಮಯವೆಂದು ಅರಿಯುತ್ತ ಮುದದಿ 2 ಒಣ ಭೋಗವ ಉಣಲೋಸುಗ ಹಣಗಳಿಸೆ ಬಲು ದಣಿವುದಕಿಂತ 3 ಗಾನ ಲೋಲನ ನಾಮ ಮಧುರಸ ಸಾನುರಾಗದಿಂದ ವಾಸಮಾಡುತಲಿ 4 ಪನ್ನಗಾರಿವಾಹನ ಹರಿಯು ಪ್ರ ಸನ್ನನಾಗಲೆಂದು ಸನ್ನುತಿಸುವ ಸದಾ 5
--------------
ವಿದ್ಯಾಪ್ರಸನ್ನತೀರ್ಥರು
ಜೀವನ ಶಟವಿ ಹೇಳುವೆ ಕೇಳುಜೀವನವೆಂಬುವ ಮಾತೇ ಶಟವಿದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ ಒಗೆತನ ಶಟವಿ ಎಲೆ ಜೀವನ ಶಟವಿ 1 ಆರ ಸಂಗಡ ಜಗಳವು ಶಟವಿಆರನಾದರು ಅಣಕಿಪೆ ಶಟವಿಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ 2 ನನ್ನದು ನನ್ನದು ಎಂಬೆ ಶಟವಿನಿನ್ನ ತಂದೆಯು ಹೋದನೆ ಶಟವಿನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ3 ಗುರು ಹಿರಿಯರ ನೀ ನಿಂದಿಪೆ ಶಟವಿಗುಣ ನಿನಗೇನೇನಿಲ್ಲವೊ ಶಟವಿಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ4 ಶರೀರವು ಸ್ಥಿರವಲ್ಲವು ಶಟವಿತೆರಳುವೆ ನೀನು ಬೆಳಗಿಗೆ ಶಟವಿತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ 5 ನಿನ್ನ ಸಂಸಾರ ಸುಳ್ಳಿದು ಶಟವಿನೀರಲಿ ಅಕ್ಷರ ಬರದಂತೆ ಶಟವಿನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ 6 ನಿನಗೆ ಅನಂತ ಜನ್ಮವು ಶಟವಿನೀನು ಹೆಣ್ಣು ಗಂಡಲ್ಲ ಶಟವಿನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ 7 ಪಾಪದ ವಿದ್ಯದ ಮೂಲದಿ ಶಟವಿರೂಪಿಗೆ ಬಂದಿಹೆ ನೀನೀಗ ಶಟವಿ ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ 8 ಭೂಪ ಚಿದಾನಂದನ ಹೊಂದೆಲೋ ಶಟವಿರೂಪು ವಿರೂಪು ಆಗುವಿ ಶಟವಿದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ 9
--------------
ಚಿದಾನಂದ ಅವಧೂತರು
ಪತಿತ ಪಾವನ ನೀನೆ ಗತಿಯೆನಗೆ ಕೇಳು ಅತಿ ನೀಚ ತರತಮನಾದವಗೆ ಪ. ಸಾರಥಿ ಸ್ಥಿರವಲ್ಲವು ದುರುಳ ದಶೇಂದ್ರಿಯಾಶ್ವಗಳಿರವು ಹುರುಳಿಲ್ಲದಂತೆ ದುರ್ವಿಷಯಾಂಧಕೂಪಕೆ ಸರಿದು ಪೋಗುತಲೆನ್ನ ಕೆಡಹುವವು 1 ಅನ್ಯರಿಗುಸುರೆ ಲಜ್ಜಾಕರದ ಅನ್ಯಾಯ ಕೃತ್ಯದಿಂದಲಿ ನೆರೆದ ಮುನ್ನಿನ ನರಕಯಾತನೆಗಳ ತರಿವದ ನಿನ್ನ ಚರಣಕೊಪ್ಪಿಸಿದೆ ವರದ 2 ದಾಸದಾಸ್ಯವನೆಲ್ಲ ದಯಮಾಡು ಪ- ರೇಶ ಪರಾತ್ಪರ ಮೂರುತಿಯೆ ಲೇಶಾಯಾಸವಿಲ್ಲದೆ ಸಲಹುವ ಜಗ- ದೀಶ ಶೇಷಾಚಲವಾಸಿ ಹರೇ 3
--------------
ತುಪಾಕಿ ವೆಂಕಟರಮಣಾಚಾರ್ಯ