ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರ ಪ ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲಅಟ್ಟು ಉಣ್ಣದ ವಸ್ತುಗಳಿಲ್ಲಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನುನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ 1 ಜಲವೆ ಸಕಲ ಕುಲಕ್ಕೆ ತಾಯಲ್ಲವೆಜಲದ ಕುಲವನೇನಾದರೂ ಬಲ್ಲಿರಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹನೆಲೆಯನರಿತು ನೀ ನೆನೆ ಕಂಡ್ಯ ಮನುಜ 2 ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿಕೇಶವರಾಯನಚರಣ ಕಮಲವ ಕೀರ್ತಿಸುವನೆ ಕುಲಜ 3
--------------
ಕನಕದಾಸ
ದುರಿತಾರಿಯೊಳು ಮನವಿರಿಸಿ ಸೌಖ್ಯವತಾಳು ನರಕವು ಬರದೊ ಮಾನವಾ ಪ ಪರಿಪರಿ ಜನ್ಮದೆ ಕೊರಗಿ ಕಂಗೆಡಬೇಡ ಸ್ಥಿರವಲ್ಲವೀ ದೇಹವೂ ಭರವಸದಿಂದ ಅ.ಪ ಮಂದಮತಿಯನಾಂತು ನೊಂದು ಸಾಯಲಿಬೇಡ ಕುಂದುಕೊರತೆಗಳಿಲ್ಲವೋ ವಂದಿಸಲು ಹರಿಯ 1 ಎರಡು ಕಂಬದ ಮೇಲೆ ಮೆರೆವ ಗೋಪುರವಿದು ಬಿರುಗಾಳಿಯಿಂದಲೋ ಉರುತರ ಮಳೆಯೊಳೊ ಉರುಳಿ ಬೀಳುವುದೆಂಬುದು ಬರೆದಿಡೊ ಮೂಢಾ 2 ನೀರ ಬೊಬ್ಬುಳಿಯಂತೆ ಆರಿಹೋಗುವುದಿದು ಸೇರದು ಪದುಮಾಕ್ಷನಾ ಆರುದಿನ ಬಾಳಿಗಾರು ಸಮರೆನಬೇಡ ಆರಡಿ ಕಮಲವುತಾ ಸೇರುವವೊಲು 3 ಎನಗೆ ಮುಂದೊದಗುವ ಜನ್ಮಕೋಟಿಗಳೊಳು ಅನುಗಾಲ ದೇಶವಸ್ಥೆಗಳೊಳಗೂ ವನಜನಾಭನೆ ನಿನ್ನ ಘನಪಾದಕಮಲವ ನೆನೆವ ನೆಲೆಸುವಂದದೆ ಅನವರತ ಬೇಡೋ 4 ಜೀವಾತ್ಮ ಪೋಪಾಗ ದೇವದೇವನ ಮರೆವ ಭಾವಗಳೊಳುದಯಿಪವು ಸಾವಕಾಶವ ತೊರೆದು ಮಾಂಗಿರಿರಂಗನ ದಿವ್ಯನಾಮವ ನೆನೆದು ಭಾವುಕನಾಗು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್