ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಗಬೇಡಿ ನಗಬೇಡಿ ನೀವ್ ನಗಬೇಡಿ ನಗಬೇಡಿ ಪ. ನಿಗಮನುತನ ಭಜಿಸುವ ನಿಜದಾಸರ ಬಗೆಯರಿಯದೆ ಬಿನ್ನಾಣದಿಂದ ನೀವ್ ಅ.ಪ. ಹರಿಸರ್ವೋತ್ತಮ ಹೌದ್ಹೌದೆಂಬುವ ಹರಿದಾಸರ ಲಕ್ಷಣಗಳ ತಿಳಿಯದೆ1 ಸ್ಥಿರವಲ್ಲದ ತನುಭ್ರಾಂತಿಯ ಪೊಂದುತ ಗುರುಚರಣ ನಂಬಿದ ದಾಸರ ಕಂಡು 2 ಲಜ್ಜೆಯ ತೊರೆಯುತ ಮೂರ್ಜಗದೊಡೆಯನ ಘರ್ಜಿಸಿ ಪಾಡುವ ಸಜ್ಜನರನೆ ಕಂಡು 3 ಲೋಕವಿಲಕ್ಷಣ ಚರ್ಯೆಯ ಧರಿಸುತ ಶ್ರೀ ಕಾಂತನ ಧ್ಯಾನಿಪರಿವರನರಿಯದೆ4 ಗೋಪಾಲಕೃಷ್ಣವಿಠ್ಠಲನಂಘ್ರಿಗಳನು ಭೋಪರಿ ನಂಬಿದ ನಿಜದಾಸರ ಕಂಡು 5
--------------
ಅಂಬಾಬಾಯಿ
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1 ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2 ದುರಿತ ಮಾಯಾ ಶರೀರಿ ನಾನು 3 ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4 ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5
--------------
ಕನಕದಾಸ
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು
ಪಾದ ಪದ್ಮದಲಿಮಾಯೆ ದಾಟಿತು ಮಹಿಮಳೇ ದೇವಿ ಪಕಾಯ ಕರ್ಮಗಳೆಂಬ ಕಾತ್ಯ ಸಮುದಾಯವನುದಾಯದಿಂದಳವಡಿಸಿದೆ ದೇವಿ ಅ.ಪಆಜಸುರಾದಿಗಳಿಂಗೆ ಅಮರಿಸಿಹೆ ಭಾಗ್ಯವನುಭಜಿಸುತಿಹರನವರತವೂ ದೇವಿನಿಜದಿರವನೂ ಕೊಟ್ಟು ನಿಲಿಸಿರಲು ನೀನವರತ್ರಿಜಗ ವಂದಿತರಾದರು ದೇವಿಸುಜನ ವಂದಿತನಾದ ಶ್ರೀಹರಿಯೆ ನೀನಾಗಿರುಜುಕರದಲಾಳುತಿರುವೆ ದೇವಿಕುಜನನಾದರು ನಾನು ಕರವಿಡಿದು ನೀ ಕಾಯ್ದುದ್ವಿಜಜನ್ಮದೆಣಿಕೆದೋರ್ದೆ ದೇವಿ 1ಅಣುಮಾತ್ರವಿರಲಿಲ್ಲ ವಿಷಯ ಭೋಗಕೆ ಬೀಜದಣಿಸಿದುದು ದಾರಿದ್ರವು ದೇವಿಕಣುಗಾಣದಿದ್ದವಗೆ ಕೊಟ್ಟಿಯನ್ನವ ನೀನೆಮಣಿವದನು ಮಾಡ್ದೆ ನೀನೆ ದೇವಿಪ್ರಣತ ರಕ್ಷಾಮಣಿಯೆ ಪರತತ್ವವನ್ನಿತ್ತೆಎಣಿಪುದೆಂತೀ ಮಹಿಮೆಯಾ ದೇವಿಕ್ಷಣಮಾತ್ರ ಪೂಜೆಯನು ಕ್ರಮದಿ ಮಾಡ್ದವನಲ್ಲಭಣಿತೆುದ ಬಗೆವರಾರು ದೇವಿ 2ಪರಿತೃಪ್ತಳಾಗಿರುವೆ ಪರಮಭಾಗ್ಯವನೀವೆನೆರೆ ನೀನೆ ನಿರ್ಮಿಸಿರಲು ದೇವಿಇರಿಸಿದಂತಿರುವರಿಂದೇನಹುದು ಕೊಡುವದಕೆಅರಿಯಲಖಿಳವು ನಿನ್ನದೇ ದೇವಿಮರುಗಿ ನೀನೇ ಕಾಯ್ವೆ ಮಾತೃ ರೂಪಹುದಾಗಿಸುರತರುವಿನುಪಮಾನಳೇ ದೇವಿವರದ ತಿರುಪತಿ ವಾಸ ವೆಂಕಟೇಶನ ರೂಪಧರಿಸಿಹಳೆ ದಿವ್ಯ ಲಕ್ಷ್ಮೀದೇವಿ 3ಕಂ||ಸ್ಥಿರವಾರವಿಂದು ಕೇಶವಸ್ಥಿರವಹುದಿತ್ತಭಯವೆನಗೆ ಭಯವನು ಬಿಡಿಸೈಸ್ಥಿರವಲ್ಲದ ಸಂಸಾರವಸ್ಥಿರವೆಂದೇ ನೊಂದೆನೈಯ ವೆಂಕಟರಮಣಾಓಂ ನಾರಾಯಣಾಯ ನಮಃ
--------------
ತಿಮ್ಮಪ್ಪದಾಸರು