ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂತುಜನಕನ ನೆನೆಯಲೆ ಬರಿದೆ ಮನ ಚಿಂತಿಸಿ ಫಲವಿಲ್ಲಲೇ ಪ ಕುಂತಿಸುತರಪಾಲ ಸಂತಜನರ ಪ್ರೀಯ ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ ಕೀಳುಯೋಚನೆ ಅಳಿಯೆಲೆ ವೈಕುಂಠನ ಶೀಲತನದಿ ಭಜಿಸೆಲೆ ಮೂಲಮಂತ್ರವ ಕೇಳೋ ನೀಲವರ್ಣನ ಜಪ ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ 1 ಕರಿಧ್ರುವರೆಂಬುವರೊ ಹರಿಹರಿಯೆಂದು ಸ್ಥಿರಮುಕ್ತಿ ಪಡೆದಿಹ್ಯರೊ ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು 2 ವಾಸನಾದೇಹವಿದು ಶಾಶ್ವತವಲ್ಲ ನಾಶನಹೊಂದುವುದು ಬೇಸರಿಲ್ಲದೆ ಪಠಿಸೀಶ ಶ್ರೀರಾಮನ ಧ್ಯಾಸÀವ ಮರೆಯದಿರು ಹೇಸಿಭವವ ಗೆಲಿಪ 3
--------------
ರಾಮದಾಸರು
ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ ಮರಣಕಾಲದಿ ಸಂಸ್ಮರಣ ಮಾತ್ರದಿ ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ 1 ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು ನರಹರಿಯ ರೂಪದಿಂ ಭರದಿ ಕಂಬದಿ ಬಂದು ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ 2 ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ ಉಳಿದಳು ಮಾನದಿಂ ಖುಲ್ಲನ ಸಭೆಯಲಿ ಅನುದಿನ ಚಲಿಸದೆ ಮನವಂ ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ 3
--------------
ರಾಮದಾಸರು