ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಚಿಂತನೆ ಎನಗಿಲ್ಲ ಹರಿ ನಿನ್ನ ಚಿಂತನೆ ಎನಗನುಗಾಲ ಪ ಮಾನಾಪಮಾನದ ಭಯವಿಲ್ಲೆನಗೆ ತವ ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ ಗಪರೂಪ ಊಟಾದರ್ಹಿಗ್ಗಿಲ್ಲ ಕಪಟದಿ ಬೈದರೆ ಅಹಿತಿಲ್ಲ ಜನ ನಿಪುಣನೆಂದರೆ ಎನಗ್ಹಿತವಿಲ್ಲ ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ ಗುಪಿತ ಮಂತ್ರ ಮಾಡನುಕೂಲ 1 ಪರಮ ಬಡತನವಿರೆ ಪರವಿಲ್ಲ ಬಲು ಸಿರಿ ಸಂಪದವಿರೆ ಹರುಷಿಲ್ಲ ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ ಸ್ಥಿರಮಾಡು ಮರೀದಂತೆ ಗೋಪಾಲ 2 ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು ಹೇಮ ಮುತ್ತು ರತ್ನ ಇರೋದಲ್ಲ ಭೂಮಿಸೀಮೆಯ ಸುಖವಿಲ್ಲ ಇದು ನೇಮವಲ್ಲೊಂದಿನ ಬಟ್ಟಬೈಲ ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3
--------------
ರಾಮದಾಸರು
ಸಾಕು ವಿಷಯ ಸುಖ ಲೋಕೇಶ ಜಗ ದೇಕನಾಥ ಕೊಡು ತವಧ್ಯಾಸ ಪ ಬೇಕು ನಿನ್ನಪಾದ ಭಯನಾಶ ಭವ ನತ ಪೋಷಅ.ಪ ಮಸಣ ಬುದ್ಧಿ ಬೇಗ ಪರಿಹರಿಸು ಜವ ನಶಿಸಿ ಪೋಗುವ ಮಾಯ ಮೋಹ ಬಿಡಿಸು ಅಸಮ ಸತ್ಯಪಥದೆನ್ನ ನಡೆಸು ಎನ್ನ ರಸನೆಯಿಂದ ನಿನ್ನ ನಾಮ ನುಡಿಸು ಒಸೆದು ನಿನ್ನವರೊಳಗೆನ್ನಾಡಿಸು ನಿನ್ನ ವಶಿಕಪತ್ರ ಬೇಗ ದಯಪಾಲಿಸು 1 ಚಿತ್ತವಗಲದಂತೆ ಸ್ಥಿರಮಾಡು ನಿಜ ಭಕ್ತಿ ಕದಲದಂಥ ದೃಢ ನೀಡು ಸತ್ಯಸಮಾಗಮ ಸತತ ಕೊಡು ದೇವ ನಿತ್ಯ ನಿರ್ಮಲಮನ ದಯಮಾಡು ಹತ್ತಿದ ಪಾಪರಾಸಿ ಕಡೆಮಾಡು ನಿನ್ನ ಭೃತ್ಯನೆಂದೆನ್ನನು ಕಾಪಾಡು2 ನಿನ್ನ ಮರೆಯ ಬಿದ್ದು ಭಜಿಸುವೆನು ನಾ ನನ್ಯ ದೇವರ ಗುರುತರಿಯೆನು ನಿನ್ನವನೆಂದೆನಿಸೆನ್ನನು ಕಳಿ ಭವ ರೋಗವನು ಎನ್ನಯ್ಯ ಶ್ರೀರಾಮ ನಿನ್ನ ನಂಬಿದೆನು ನೀಡು ಉನ್ನತ ಮುಕ್ತಿ ಸಾಮ್ರಾಜ್ಯವನು 3
--------------
ರಾಮದಾಸರು