ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ವಾದಿರಾಜರ ಸ್ಮರಣೆಯ ಮಾಡಿರೊ ಪ ಗುರು ವಾದಿರಾಜರ ಸ್ಮರಣೆಯ ಮಾಡಲು ದುರಿತ ಕಳೆದು ಮನಕೆ ಪರಮ ಹರುಷವೀವ ಅ.ಪ. ಪೂರ್ಣಭೋಧರ ಮತ ವಾರಿನಿಧಿಗೆ ಸಂ ಪೂರ್ಣ ಸುಧಾಕರ ಸುಗುಣ ಗಂಭೀರ ಕ್ಷೋಣಿ ಸುರೋತ್ತಮ ಕ್ಷೋಣಿಪಾಲಕ ಮಾನ್ಯ ಜ್ಞಾನಿವರೇಣ್ಯ ಹಯಾನನ ಪರಚರಣ 1 ಮಾನಸದೊಳಗಿಹ ಹೀನಮತಿಯ ಕಳೆ ದಾನಂದ ಕೊಡುವಂಥ ಜ್ಞಾನವ ಕರುಣಿಸಿ ಪ್ರಾಣನಾಥ ಶ್ರೀ ಕರಿಗಿರೀಶನ ಪದ ಧ್ಯಾನಿಪ ಸ್ಥಿರಮತಿ ತಾನಿತ್ತು ಪಾಲಿಪ 2
--------------
ವರಾವಾಣಿರಾಮರಾಯದಾಸರು
ಜಗದಾದಿಮಾತೆಯೆ ಪ ಮೊರೆಯ ಕೇಳಮ್ಮ ಪರಮ ಪಾವನೆಯೆ ಕರುಣ ಹಸ್ತವ ಶಿರದಿ ಇಡು ದಯೆ ಭರಿತೆ ಜಗನ್ಮಯೆ ಅ.ಪ ಕಮಲಜಾತನ ಪ್ರೇಮ ಸುಂದರಿಯೆ ಅಮರ ವಿನುತೆಯೆ ಕಮಲನೇತ್ರೆ ಸಾವಿತ್ರಿ ಶಾರದೆಯೆ ವಿಮಲಚರಿತಳೆ ದಮೆ ದಯಾನ್ವಿತೆಯ ಶಮೆ ಶಾಂತಿನಿಲಯೆ ಕುಮುದಬಾಂಧವಕೋಟಿಪ್ರಭಾಮಯೆ 1 ವರ ಸುವಿದ್ಯ ಸಂಗೀತ ಶರ್ವಾಣೆ ಪರಮಕಲ್ಯಾಣೆ ಶರಣ ಜನಪ್ರಿಯೆ ವೀಣಾಧರಪಾಣಿ ಸ್ಮರಿಪ ಜನ ಮನದಿಷ್ಟ ಪರಿಪೂರ್ಣ ದುರಿತದೂರಿಣೆ ಪೊರೆದೆ ಮನುಗಳ ಜ್ಞಾನದಿಂ ವಾಣಿ 2 ಚರಣದಡಿಲೆನ್ನ ಶಿರವನಿಕ್ಕಿ ಬೇಡಿಕೊಂಬುವೆ ನಾ ಮರೆವ ಹರಿಸಿ ಭರದಿಂ ಕೊಡು ಜ್ಞಾನ ಸ್ಥಿರಮತಿಯ ಮುನ್ನ ನಿರುತದ್ಹೊಗಳುವೆ ನಿಮ್ಮ ಚರಿತವನು 3
--------------
ರಾಮದಾಸರು
ರಾಮಚಂದ್ರವಿಠ್ಠಲನೆ ನೀನಿವನ ಕಾಮಿತಾರ್ಥಗಳಿತ್ತು ಕಾಪಾಡೊ ಹರಿಯೇ ಪ ಭೂಮಿಜೆಯ ರಮಣ ಸುರಸಾರ್ವಭೌಮನೆ ದೇವಪ್ರೇಮ ಈಕ್ಷಣದಿಂದ ನೋಡೊ ದಯಾಸಾಂದ್ರ ಅ.ಪ. ಗುರುದ್ವಾರವಿಲ್ಲದಲೆ | ಗರುಡವಾಹನ ಕರುಣದೊರಕಲಾರದು ಎಂಬ | ಸ್ಥಿರಮತಿಯನಿತ್ತೂಗುರುಭಕ್ತಿ ಹರಿ ಭಕ್ತಿ | ಕರುಣಿಸುತ ವೈರಾಗ್ಯಸ್ಥಿರಮಾಡಿ ಪಾಲಿಪುದು | ತರತಮದ ಜ್ಞಾನಾ 1 ಪತಿ ಪ್ರೀಯಪ್ರಾಕ್ಕುಕರ್ಮವ ಕಳೆದು ಕಾಪಾಡಬೇಕೋ 2 ಮಧ್ವಮತ ಸಿದ್ಧಾಂತ ಪದ್ಧತಿಯ ತಿಳಿಸುತ್ತಬುದ್ಧಿಪೂರ್ವಕ ನಿನ್ನ ಗುಣರೂಪ ಕ್ರಿಯೆಗಳಾಶ್ರದ್ಧೆಯಿಂದಲಿ ಭಜಿಪ ಸದ್ಬುದ್ಧಿ ಪಾಲಿಸುತಮಧ್ವೇಶ ಇವನ ಹೃನ್ಮಧ್ಯದಲಿ ಪೊಳೆಯೋ 3 ಶರ್ವಾದಿ ದಿವಿಜೇಡ್ಯ ದುರ್ವಿಭಾವ್ಯನೆ ದೇವಸರ್ವತ್ರ ಸರ್ವದಾ ತವಸ್ಮøತಿಯನಿತ್ತೂನಿರ್ವಿಘ್ನತೆಯಲಿವನ ಸಾಧನವ ಪೂರೈಸಿಅಸ್ವತಂತ್ರನ ಬಂಧ ಪರಿಹರಿಸಿ ಕಾಯೋ 4 ಭಕ್ತವತ್ಸಲನೆಂಬೊ ಬಿರಿದುಳ್ಳ ಶ್ರೀಹರಿಯೆಭೃತ್ಯನಿಗೆ ಬಪ್ಪ ಅಪಮೃತ್ಯು ಪರಿಹರಿಸೀಸತ್ಯ ಗುರು ಗೋವಿಂದ ವಿಠ್ಠಲನೆ ನೀನಿವಗೆನಿತ್ಯಾಯು ಪ್ರದನಾಗು ಎಂದು ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು