ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ಶ್ರೀಶನು ತನ್ನಯ ದಾಸತ್ವ ಕೊಟ್ಟೆನ್ನ ಧ್ಯಾಸದಿ ಬಂದು ಸ್ಥಿರಮಾದ ಪ ಧ್ಯಾಸದೊಳಗೆ ಬಂದು ಸ್ಥಿರವಾಗಿ ನಿಂತಿನ್ನು ನಾಶನ ಜಗದಾಸೆ ಎನಗೇನೆ ಅ.ಪ ಸುಂದರಮಾದ ಸುಸಂಧಿಯೆನಗೆ ಫಲಿಸಿತು ಸುಕೃತ ಫಲದಿಂದೆ ಸುಕೃತ ಫಲದಿಂದ ಎನ್ನಗೆ ತಂದೆ ಗೋವಿಂದ ತಾನೆ ಗೋವಿಂದ 1 ಕೆಟ್ಟ ಬವಣೆಯಿಂದ ಕೆಟ್ಟು ಹೋಗುತಲಿರ್ದೆ ಸೃಷ್ಟೀಶ ದಯದಿ ನೋಡಿದ ಸೃಷ್ಟೀಶ ದಯದಿಂದ ನೋಡಿ ಮುಂದಕೆ ಕರೆದು ನೆಟ್ಟನ ಮಾರ್ಗಕೆ ಹಚ್ಚಿದ 2 ಸಾಧ್ಯವಲ್ಲಾರಿಗೀತಸಾಧ್ಯಮಾಗಿ ತಾನೆ ಸಾಧ್ಯವಿಲ್ಲದ ಸುದ್ದಿ ತಿಳಿಸಿದ ಸಾಧ್ಯವಿಲ್ಲದ ನಿಜ ಸುದ್ದಿ ತಿಳಿಸಿ ಪರಿ ಶುದ್ಧನ್ನ ಮಾಡಿ ನಿಲಿಸಿದ 3 ಮೂಲೆಗೆ ಬಿದ್ದ್ವೊಸ್ತು ಮೇಲಕ್ಕೆ ಎತ್ತಿ ತವ ಲೀಲೆ ನಾಲಗೆಮೇಲೆ ಬರೆದನೆ ಲೀಲೆ ನಾಲಗೆಮೇಲೆ ಬರೆದೆನ್ನಜ್ಞಾನ ಕಾಳೆಂಬ ಕತ್ತಲ ಕಳೆದನೆ 4 ಮಂತ್ರಮೂಲನು ಸರ್ವಾಂತರ್ಯಾಮಿಯು ಸ್ವ ತಂತ್ರ ತಾನೆಂಬ ನಿಜ ತಿಳಿಸಿದ ಸ್ವ ತಂತ್ರ ತಾನೆಂಬ ನಿಜ ತಿಳಿಸಿ ಎನಗನ್ಯ ಚಿಂತೆ ಭ್ರಾಂತಿಗಳೆಲ್ಲ ಬಿಡಿಸಿದ 5 ಮರವೆಯ ಹಾರಿಸಿ ಕರುಣಿಸಿ ಸ್ಥಿರಜ್ಞಾನ ಪರಿಭವ ದು:ಖ ಪರಿಹರಿಸಿದ ಪರಿಭವ ದು:ಖ ಪರಿಹರಿಸೆನಗೆ ಸ್ಥಿರವಾದ ಪರಲೋಕದರಿವು ನಿಲಿಸಿದ 6 ಆಶದಿ ಬಿದ್ದು ನಾ ದೇಶದೇಶವ ತಿರುಗಿ ಬೇಸತ್ತು ಬಾಯ ಬಿಡುತಿರ್ದೆ ಬೇಸತ್ತು ಬಾಯ ಬಿಡುತಿರ್ದೆ ಕಂಡೆನ್ನಯ್ಯ ಲೇಸಾದ ಪದವಿ ತೋರಿಸಿದ 7 ಜಗಸುಖಕೊಲತಿದ್ದೆ ಜಗದಾತ್ಮನು ಈಗ ಜಗದ್ಹಗರಣ ತೋರಿಸ ನಗಿಸಿದ ಹಗರಣ ತೋರಿಸಿ ನಗಿಸಿದಚಲಸೌಖ್ಯ ಬಗೆ ತೋರಿ ಜಗಸುಖ ಮರೆಸಿದ 8 ಏನೆಂದು ಪೇಳಲಿ ಸಾನಂದನುತ ಮಹ ದಾನಂದದಾಲಯ ಪೊಗಿಸಿದ ಆನಂದದಾಲಯ ಪೊಗಿಸೆನ್ನ ವದನದಿ ತಾ ನಿಂದು ನಿಖಿಲ ನುಡಿಸಿದ 9 ಭವಭಯಹರಿಸುವ ಸವಿನುಡಿಗಲಿಸಿದ ಭವರೋಗದ್ವೈದ್ಯ ಮಮಪಿತ ಭವರೋಗದ್ವೈದ್ಯ ಮಮಪಿತ ಮುಂದಿನ್ನು ಸಾವ್ಹುಟ್ಟೋಭೀತಿ ಎನಗಿಲ್ಲ 10 ಕರ್ತು ಸರ್ವೋತ್ತಮ ನಿತ್ಯನಿರ್ಮಲ ಎನ್ನ ಮತ್ರ್ಯದ ಗುಣವ ತೊಡೆದೆನ ಮತ್ರ್ಯದ ಗುಣ ತೊಡೆದು ಸತ್ಯ ಶ್ರೀರಾಮ ಎನ್ನ ಮುಕ್ತಿ ಸಾಮ್ರಾಜ್ಯ ತಖ್ತೆ ಏರಿಸಿದ 11
--------------
ರಾಮದಾಸರು