ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ ಪ. ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ ಮೋದಗುರುಗಳು ಬೋಧಿಸೆ | ದಯದಿ ಅ.ಪ. ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ ಐದು ಇಂದ್ರಿಯವು ಕಲೆತು ಕಾಯ ಐದಲಾರದು ಜೊತೆಗೆ ಕರ್ಮ ಒಂದು ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು ಮೋದವಾಗುತ ಮನದೊಳು ಆದಿದೈವನ ಕರುಣವಾದ ಬಳಿಕಿನ್ನೇನು ಪಾದಪದ್ಮವ ತೋರೆಲೊ | ಸ್ವಾಮಿ 1 ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ ಐದಿಸಿ ಮೂಲಸ್ಥಳಕೆ ಐದು ರೂಪಾತ್ಮಕನ ಆದರದಿ ಪೂಜಿಸುತ ಐದೊಂದು ದೂರ ತ್ಯಜಿಸಿ ಐದು ನಾಲ್ಕು ತತ್ವದಧಿಪತಿಗಳನು ಆದರದಿ ಧ್ಯಾನಮಾಡಿ ಐದು ಮೂರು ದಳದಿ ಆದಿತ್ಯನಂತಿರುವ ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2 ಐದು ಭೇದಗಳ ಮತ ಸ್ಥಾಪಕರ ಕರುಣದಲಿ ಐದು ಮೂರನೆ ಖಂಡಿಸಿ ಐದೆರಡು ರೂಪಕನ ಆದರದಿ ಸ್ತುತಿಸುತ್ತ ಭೇದಿಸಿ ಹೃದಯಗ್ರಂಥಿ ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ ಆದರದಿ ನಂಬಿ ಸ್ತುತಿಸಿ ಈ ದಾರಿ ಕಾಣಲು ಇದಕೆ ಕಾರಣದಿವ್ಯ ಮೋದ ಶ್ರೀಗುರು ಕರುಣವೋ | ದಯವೋ 3
--------------
ಅಂಬಾಬಾಯಿ
ನಿರುತದಿಂದಿಳೆಯೊಳು ಅರಸಿ ನೋಡಲು ಕಾಣೆ ಗುರು ಸತ್ಯಜ್ಞಾನರಿಗೆ ಪ ಸರಿ ಇಲ್ಲಿವರ ಚರಣಕಮಲವ ನಿತ್ಯ ದುರಿತ ಹರಿಪರ ಅ.ಪ ಸತ್ಯ ಜ್ಞಾನ ಗುರೋ ನೀ ಗತಿ ಎಂದವರ ನಿತ್ಯದಿ ಬಿಡದೆ ಕಾಯ್ವ ಅತ್ಯಾದರದಿ ಮಧ್ವಮತ ಸ್ಥಾಪಕರಾಗಿ ಮಿಥ್ಯಾ ಜ್ಞಾನಗಳಳಿದ | ಮೆರೆದ 1 ಸತ್ಯಧೀರರಿಂದ ಯತ್ಯಾಶ್ರಮ ಪಡೆದು ರತ್ಯಾದಿ ವಿಷಯವ ಬಿಟ್ಟು ಯತ್ಯಾಶ್ರಮೋಕ್ತ ಕೋಪತ್ಯಾಗಾದಿಗಳನು ವ್ಯತ್ಯಾಸಿಲ್ಲದೆ ನಡೆಸಿ | ಶೋಭಿಸಿ2 ಗುರು ಆರಾಧನಿ ದಿನ ತೀರ್ಥವ ಕೊಡುತಿರೆ ವರ ಸುವಾಸಿನಿ ಒಬ್ಬಳೂ ಕರವ ನೀಡಲು ಬಂದು ಅರಿತು ವಿಧವತ್ವ ನೆರಪೇಳ್ದರಪರೋಕ್ಷದಿ | ಭೂತಳದಿ 3 ಭರದಿಂದ ಸುರಿಯುತ್ತಿರೆ ಮೊರೆಯಿಡೆ ಎಡಬಲದವರು ಅದನು ಕೇಳೆ ದೂರಸ್ಥಳಿಹಳೆಂದ್ಹೇಳಿರು | ಪಂಕ್ತಿಯಲಿ 4 ಈ ರೀತಿಯಿಂದಲಿ ತೋರಿಸಿ ಮಹಿಮೆಯ ಇರಿಸೆ ಮಂತ್ರಿಸಿ ಫಲವ ಭರದಿ ಸುರಿವ ಮಳೆ ತ್ವರಿತದಿ ನಿಲ್ಲಲು ಅರಿತು ವಿಚಾರಿಸಲು | ನಿಜವಿರಲು5 ಪತಿ ಪೂಜೆ ಸಾವಧಾನದಿ ಮಾಡಲು ಇವರ ಮನೋಧಾರಡ್ಯ ಜವದಿ ಜಯಾಮುನಿ ಅವನಿಗರುಹಬೇಕೆಂದು | ತಾ ಬಂದು 6 ಬರುತಿರೆ ಉರಗಾಕಾರದಿಂದಲಿ ಬಂದು ಅರಿಯದ ಜನರು ಕೂಗೆ ಮಾರಮಣನ ಧ್ಯಾನ ಜರಿಯದೆ ಅವರಿಗೆ ತೋರಿದರಭಯವನು | ವಿಚಿತ್ರವನು 7 ಭೂವೈಕುಂಠದಿ ವಿಶ್ವರೂಪದರ್ಶನಕ್ಹೋಗೆ ಮಾರ್ಗವ ಕೊಡದಿರಲು ಭಾವದಿ ಧ್ಯಾನಿಸೆ ಶ್ರೀ ವಲ್ಲಭನಾಮ ಧರಿಸದೀರಾಧರಿಸೇ | ಧರಿಸಿ 8 ಈ ವಿಧ ಮಹಿಮೆಯ ತೋರಿಸಿ ಜಗದೊಳು ಗೋದಾತೀರದಿ ಶೋಭಿಪ ಅವನಿಪ ಮಹೇಂದ್ರ ಭುವನ ಶ್ರೀ ನರ ಹರಿ ನಿನ್ನ ಮಾಘಸಿತದಿ | ಸ್ಮರಿಸಿದ9
--------------
ಪ್ರದ್ಯುಮ್ನತೀರ್ಥರು
ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು