ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನಾತ್ಮಕ ಹಾಡುಗಳು ಉದ್ಭವಿಸಿದ ಕಂಬದಿ | ಶ್ರೀ ನಾರಸಿಂಹ ಉದ್ಭವಿಸಿದ ಕಂಬದಿ ಪ. ಉದ್ಭವಿಸಿದ ಬೇಗ ಪದ್ಮಸಂಭವಪಿತ ಮುದ್ದು ಬಾಲಕನ ಉದ್ಧರಿಸುವೆನೆಂದು ಅ.ಪ. ದುರುಳನು ಪ್ರಹಲ್ಲಾದನು | ಪರಿಪರಿಯಿಂದ ಕರಕರಪಡಿಸೆ ಕುವರನ ನರಹರಿ ಎನ್ನನು ಪೊರೆ ಎಂದು ಮೊರೆಯಿಡೆ ಸುರರು ನೋಡುತಿರೆ ಭೋರ್ಗರೆಯುತ ಆ ಕ್ಷಣ 1 ಎಲ್ಲಿರುವನು ಹರಿ ಎಂದು | ದೈತ್ಯನು ಮಗನ ಇಲ್ಲಿ ಸ್ಥಂಭದಿ ತೋರೆಂದು ಖುಲ್ಲನು ಹಿಂಸಿಸೆ ಸರ್ವತ್ರದಿ ಶ್ರೀ- ನಲ್ಲನಿರುವನೆಂದು ಸಾಧಿಸೆ ಭಕ್ತನು 2 ತನಯನ ನುಡಿ ಉಳಿಸಲು | ನರಹರಿ ಹೊಸಲೊಳ್ ಇನನು ತಾ ಮುಳುಗುತ್ತಿರಲು ದನುಜನ ತೊಡೆಯ ಮೇಲಿಟ್ಟು ನಖದಲಿ ಕನಲಿ ಸೀಳಿ ಕರುಳ್ಮಾಲೆ ಧರಿಸುತ 3 ಸುರರು ಜಯ ಜಯವೆನ್ನುತ | ಪೊಗಳುತ್ತಲಿರೆ ನರಹರಿ ಉಗ್ರ ತಾಳುತ ಸುರರು ಬೆದರಿ ಪ್ರಹ್ಲಾದನ ಕಳುಹಲು ಕರಿಗಿರಿ ನರಹರಿ ಶಾಂತನೆನಿಸಿದ 4 ತಾಪವಡಗಿತು ಜಗದಲಿ | ವರ ಭಕ್ತನಿಂದ ಶ್ರೀಪತಿ ಲಕುಮಿ ಸಹಿತಲಿ ಗೋಪಾಲಕೃಷ್ಣವಿಠ್ಠಲ ಗುರುವರದ ಈ ಪರಿಯಿಂದ ಭಕ್ತರ ಪೊರೆಯಲು5
--------------
ಅಂಬಾಬಾಯಿ
ಪಾಹಿ ಶ್ರೀ ನರಸಿಂಹಾ ಪಾವನ್ನ ಮಾಡೆನ್ನಾ ನರಹರಿ ಪ. ಅತಿಶಯವಾದ ಪಿತನ ಬಾಧೆಗೆ ಸುತ ಪ್ರಹ್ಲಾದ ಖತಿಯಿಂದ ಕೂಗೆ ದಿತಿಸುತನ ಅಸುನೀಗೆ ಉದಿಸಿದೆಯೊ 1 ಸ್ಥಂಭದಿಂದುದಿಸ್ಯವನ ಡಿಂಭವ ಬಗೆದು ಅಂಬುಜಾಕ್ಷ ಕರುಳಾ ಹಾರವ ಧರಿಸೇ ಅಂಬರದೀ ಸುರರೆಲ್ಲಾ ಸ್ತುತಿಗೈಯ್ಯೆ 2 ಕಂದನ ಸಲಹಿದ ತಂದೆ ಶ್ರೀ ಶ್ರೀನಿವಾಸ ನಿಂದು ನಾ ಪ್ರಾರ್ಥಿಪೆ ಬಂಧನ ಬಿಡಿಸಿ ಬಂದು ನೀ ಕಾಯೊ ಶ್ರೀ ಹರಿಯೆ 3
--------------
ಸರಸ್ವತಿ ಬಾಯಿ
ರಾಘವೇಂದ್ರ ಗುರುವರ್ಯ ಮಮಾಘನಾಶನಾ ಪ ಪಾದ ಪದ್ಮಕ್ಕನುದಿನ ಅ.ಪ ಕನಕ ಕಶ್ಯಪನಾತ್ಮಜನೆಂದೆನಿಸಿ ಮೋದದಿ ವನಜನಯನ ಸ್ಥಂಭದಿ ಬರುವಂದದಿ ಗೈದಿ 1 ದೋಷರಹಿತ ಹರಿಭಕ್ತರಿಗೆ ಸುರತರುವೆ 2 ಗುರುರಾಮ ವಿಠಲನ ಪ್ರಿಯಕಿಂಕರವರೇಣ್ಯನೆವರಮಂತ್ರಾಲಯನಿಲಯ ನೀಂ ಕರುಣಿಸೆನ್ನನೆ 3
--------------
ಗುರುರಾಮವಿಠಲ