ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕಾದಶಿ ನಿರ್ಣಯ ಅನಲು [ಸಮನೆ] ಮನೆಗೆ ಪೇಳಬಂದ ಅನಾಥಬಂಧು ಹಯವದನ ಗೋವಿಂದ ಪ. ತನ್ನ ನಂಬಿದವರ ತಾಪತ್ರಯವಳಿದು ಉನ್ನಂತ ಪದವೀವ ದಿನತ್ರಯವನ್ನು 1 ವೃದ್ಧಿಮಾತ್ರ ಅರುಣೋದಯದ ಕೆಳಗೆ [ಶುದ್ಧಿದಂ] ಘಳಿಗೆ ಸಾಕುಯೆಂದು 2 ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ ಶತಿ [ಫಣಫಲ] ದೊಳಗೆ [ಶುದ್ಧಿ] ಬೇಕೆಂದು 3 ತಿಥಿ ವೃದ್ಧಿಆದಾಗೆ ಹತ್ತು [ಫಣಪಲ] ತಿಥಿಕ್ಷಯದಲ್ಲಿ ಅದರೊಳು [ಶುದ್ಧಿ] ಬೇಕೆಂದು 4 ಇಂದು ದಶಮಿ ಶಾಖವ್ರತವ ಮಾಡಿ ನೀವು ಒಂದು ಬಾರಿ ಭೋಜನ ಮಾಡಿರೊಯೆಂದು 5 ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ ಹಂಬಲವನ್ನು ನೀವು ಬಿಡಿರಿಯೆಂದು 6 ನಾಳೆ ಏಕಾದಶೀ ಉಪವಾಸ ಜಾಗರ ಆಲಸ್ಯ ಮಾಡದೆ ಆಯತಾಕ್ಷಗೆಯೆಂದು 7 ಫಲಹಾರವು ಸಲ್ಲ ಭೋಜನವು ಸಲ್ಲದು ಜಲಪಾನ ಸಲ್ಲ ಮೆಲಸಲ್ಲದೆಂದು 8 ನಾಲ್ಕುಹೊತ್ತಿನ ಆಹಾರವ ಬಿಡುವುದು ಹದಿ ಜಾಗರ ಮಾಡಿರೊಯೆಂದು 9 ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ ಒಲುಮೆಯಿಂದ ಪಾರಣೆಯ ಮಾಡಿರೊಯೆಂದು10 ಇಂತು ತಿಥಿತ್ರಯ ಮಾಡುವ ಜನರನ್ನು ಸಂತತ ಪೊರೆವ ಶ್ರೀಕಾಂತ ಹಯವದನ 11
--------------
ವಾದಿರಾಜ
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದುನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1 ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2 ಗಾಳಿಯದು ಹಾಯಲಿಕೆ ಗತವಹುದು ಅನುಭವವುಬೀಳೆ ಅವರ ನೆರಳು ಬಯಲಹುದು ಬೋಧನೆಯುಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3 ನವನೀತ ಪುರುಷನು ನಾರಿಯೇ ಅಗ್ನಿಯುನವನೀತ ಕರಗದೆ ಅಗ್ನಿಯೆದುರಿನಲಿಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4 ಪಾತಕದ ಬೊಂಬೆಯು ಫಣಿವೇಣಿಯರ ರೂಪಘಾತಕವು ತಾನಹುದು ಯೋಗಗಳಿಗೆಯಲಯ್ಯಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆದಾತ ಚಿದಾನಂದನು ತಾನೆ ಅಹನಯ್ಯ5
--------------
ಚಿದಾನಂದ ಅವಧೂತರು