ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾರ್ಯರು ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ 1 ಇಂದು ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ- ವಿಠಲರೇಯಾನವಲಿಸು ಬಿಡದೆ 2 ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ 3 ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ4 ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ 5 ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ 6
--------------
ತಂದೆವರದಗೋಪಾಲವಿಠಲರು
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1 ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ || ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3
--------------
ಗುರುಪ್ರಾಣೇಶವಿಠಲರು
ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ ಪ ಶ್ರೀಕರ ಕೃಷ್ಣಾತಟದಿ ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ ಸದಾ ಶ್ರೀಕಾಂತನ್ನ ಧ್ಯಾನಂಗತರು 1 ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ 2 ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ | ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು 3 ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು 4 ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ 5 ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ 6 ಯಾವ ಸಂಶಯವ್ಯಾಕೆ ಕೋವಿದವರ್ಯರಾದ | ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು 7 ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ 8 ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ ಪಿಸಿ ಬಿಂಬೋಪಾಸನಗೈವ ಬುಧರು 9 ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ 10 ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು | ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು 11 ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ ಚರಿಯ ನರೆÉದ ಜನಕೆ ತೋರಿ 12 ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ | ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು 13
--------------
ಶಾಮಸುಂದರ ವಿಠಲ
ಮುಖ್ಯಕಾರಣ ವಿಷ್ಣು ಸ್ವತಂತ್ರನೆಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ ಪ. ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆತಿಳಿವ ವಸ್ತುವು ನೀನೆ ತೀರ್ಥಪದನೆ ತಿಳಿದುದಕೆ ಫಲನೀನೆ ತಿಳಿಯಗೊಡದವ ನೀನೆತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ 1 ಧ್ವನಿ ವರ್ಣಉಭಯ ಶಬ್ದದ ವಾಚ್ಯನು ನೀನೆಗುಣದೇಶಕಾಲ ಕರ್ಮದನು ನೀನೆತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ 2 ಹಯಾಸ್ಯ ಧನ್ವಂತ್ರಿ ವೃಷಭ ಮಹಿ-ದಾಸ ದತ್ತಾತ್ರಯಾದ್ಯಮಿತ ರೂಪಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದುಪೋಷಕನು ಆದೆ ಕೃಪಾಳುವೆ ಶ್ರೀಶ 3 ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-ಚೇತನನು ಸರಿ ನೀನು ಸುಮ್ಮನಿರಲುಯಾತರವ ನಾನಯ್ಯ ನಿನ್ನಧೀನವು ಎಲ್ಲಚೇತನನಹುದೊ ನೀ ಚಲಿಸೆ ಚಲಿಸುವೆನು 4 ತಿಳಿ ಎನ್ನುವುದಕಾಗಿ ತಿಳಿಯತಕ್ಕದ್ದು ನೀನೆತಿಳಿಸೊ ಸೋತ್ತುಮರೆಲ್ಲ ತಿಳಿದ ಶೇಷತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿಚಲಿಸದಲೆ ಮನ ನಿಲಿಸೊ ಗೋಪಾಲವಿಠಲ 5
--------------
ಗೋಪಾಲದಾಸರು
ಮೋಕ್ಷ ಪುಣ್ಯ ಫಲಾ ಮದನ ಗೋವಿಂದನ ಕರುಣವು ಪ ಆಕಾರಾಮೊದಲಾ ದಕ್ಷರದಲಿ ನೇಕಾ ಪರಿಯಲಿ ಕರೆದು ಸುವರ್ತಡದನಿಂದಾದಾ ಆದಿಮುನಿ ಗಣಸಹಿತಾ ಶ್ರೀ ಕರದಿಂದಾಲಾಶ್ರಿತ ಜನ ಪೋಷಕನ ನೀ ಕಾಮನಾದಿ ಪೂಜಿಸಿ ನಿಜಭಕುತಿ ಆಕಾಲದಲ್ಲಿ ಮಾಡಿದವರಿಗೆ ಎಲ್ಲಾ ಮುಕುತಿ ಲೋಕನಾಯಕನನುಗ್ರಹದಿಂದಲೇ 1 ನಾಯಕ ಪೂಜಿತನಾ ಸಾಸಿರನಾಮದ ಸರ್ವೇಶನ ದಾಸೋತ್ತುಮರಾದ ವರಿಗೆಲ್ಲಾ ವಾಸುದೇವಾನು ತನ್ನವರು ಎಂದು ಪಾಲಿಸಿ ಈಸು ಜನರಿಗಿತ್ತಾ ಇಹಪರವು 2 ಅಂದು ಚಂದ್ರಗೆ ಬಂದ ಶಾಪವು ಕಳೆದಾ ಅಜಮಿಳನಂತ್ಯ ಕಾಲಕೆ ಕಾಯ್ದ ಕಂದಾ ಕೂಗಲು ನೇರ ಕಂಭದೊಳಗೆ ಬಂದಾ ಮುಂದಾ ದನುಜನ ಸೀಳಿ ಮಗನಕಾಯ್ದ ಸಿಂಧುಶಯನ ತನ್ನ ಹೊಂದಿದವರನೆಲ್ಲಾ ಬಂಧು ಬಳಗ ಆಗಿಪೊರೆವಂಥಾ ಸ್ಮರಿಸುವ ಶರಣರಿಗೆ 3
--------------
ಹೆನ್ನೆರಂಗದಾಸರು