ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ ಆವುದು ಖರೆಯಲೋ ಜೀವ ಜಗದ ಸುಖ ಮಾಯದೆಲ್ಲನು ಭಾವಿಸಿ ನೋಡೋಅ.ಪ ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು 1 ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ ಸೋಜಿಗವಾಗಿ ಮಿಂಚು ತೇಜದಡಗುವಂತೆ ಈ ಜಗ ಸಮಾಜ ನಿಜವಿನಿತಿಲ್ಲೆಲೊ 2 ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ3
--------------
ರಾಮದಾಸರು
ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ಪ. ಅರಳು ಅರಳು ಮೊದಲಾಗಿ ಏ ನಾರಿಸಕ್ಕರೆಯ ತಂದಿಟ್ಟು ಮಾರುವವರು ಕಡೆಯಿಲ್ಲ 1 ಕುಂಕುಮ ಅರಿಷಿಣ ಅಲಂಕಾರ ದ್ರವ್ಯವಅಂಕ ಅಂಕಣಕ ನೆರವ್ಯಾವ ಏನಾರಿ ಅಂಕ ಅಂಕಣಕ ನೆರವ್ಯಾವ ಬೆಲೆ ಮಾಡೊಕಂಕಣದ ಕೈಯ ಕೆಲದೆಯರು ಕಡೆಯಲ್ಲಾ ಏ ನಾರಿ 2 ಬುಕಿಟ್ಟು ಪÀರಿಮಳ ದ್ರವ್ಯ ಪೊಟ್ಟಣ ಕಟ್ಟಿತರಹತರಹ ಏ ನಾರಿಪೊಟ್ಟಣವ ಕಟ್ಟಿ ತರಹತರದ ದ್ರವ್ಯವ ಕೊಟ್ಟು ಕೊಂಬುವರು ಕಡೆಯಿಲ್ಲ ಏ ನಾರಿ3 ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು ಸೂಜಿ ಮಲ್ಲಿಗೆ ಸರಗಳ ರಂಗನ ಪೂಜೆಗೊಯ್ವೊ ಪುರುಷರು ಏ ನಾರಿ4 ನಾಲ್ಕು ದಿಕ್ಕಿಗೆ ದಿವ್ಯ ಆಕಳ ಹಿಂಡುಗಳು ಸಾಕುವ ಎರಳೆ ಎಳಿಗಾವು ಏ ನಾರಿಸಾಕುವ ಎರಳೆ ಎಳಿಗಾವು ಹೂಂಕರಿಸಿ ಬಾಹೋ ಚಲ್ವಿಕೆಯ ಏ ನಾರಿ 5 ಎತ್ತೆತ್ತ ನೋಡಿದರೂ ಮುತ್ತಿನ ಪಲ್ಲಕ್ಕಿಉತ್ತಮ ರಥವ ಹಿಡಿದೇಜಿ ಏ ನಾರಿಉತ್ತಮ ರಥವ ಹಿಡಿದೇಜಿ ಮ್ಯಾಲಿನ್ನು ಹತ್ತಿ ಬಾಹುವರು ಕಡೆಯಿಲ್ಲ ಏ ನಾರಿ6 ಬಾಜಾರದೊಳಗಿನ್ನು ರಾಜಸಿಂಹಾಸನ ರಾಜ ರಾಮೇಶ ಕುಳಿತಲ್ಲಿಯೆ ಏ ನಾರಿ ರಾಜ ರಾಮೇಶ ಕುಳಿತು ಪೂಜೆಗೊಂಬೊಮೂರ್ಜಗವು ಮುದದಿಂದ ಏ ನಾರಿ7
--------------
ಗಲಗಲಿಅವ್ವನವರು
ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಪ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಅ.ಪ ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ 1 ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ2 ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ 3 ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲುಕದು ಹರಿಯೆ 4 ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾಣೆ ಸತ್ಪಾತ್ರ ಕೂಡುಂಬೊ ಪದ್ಧತಿ ನೋಡೊ ಪುಣ್ಯಾತ್ಮ 5 ಮನೆ ಮನೆ ತಿರಿದರು ಕಾಸು ಪುಟ್ಟದೆ ಸು ಮ್ಮನೆ ಚಾಲ್ವರಿದು ಬಳಲಿದೆನೊ ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ ತಾನೆ ಪ್ರಾಪ್ತಿ ನೋಡೊ ಜೀಯಾ 6 ವೈದಿಕ ಪದವಿಯನೀವಗೆ ಲೌಕಿಕ ಐದಿಸುವುದು ಬಹು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ ಪಾದಸಾಕ್ಷಿಯನುಭವವೊ 7
--------------
ವಿಜಯದಾಸ