ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪೆರ್ಡೂರು ಶ್ರೀ ಅನಂತಪದ್ಮನಾಭ) ಪದ್ಮನಾಭ ಚರಣವೆನ್ನ ಶಿರದೊಳಿಟ್ಟು ಪಾಲಿಸು ಮಾತ ಲಾಲಿಸು ಪ. ಆದಿಭೌತಿಕಾದಿ ನಾನಾ ಬಾಧೆಯಿಂದ ಬಳಲಿ ಬಹಳ ನೊಂದೆನು ಇಲ್ಲಿ ಬಂದೆನು ಮೂರ್ತಿ ನಿನ್ನ ಕರುಣವಾಗಲೆಂದು ಕೈಯ್ಯ ಮುಗಿದು ಬೇಡುವೆ ಮಹಿಮೆ ಪಾಡುವೆ ಕಾದರೊಳ್ಳಿತಿನ್ನು ನಿನ್ನ ಪಾದಸೇವೆ ಮಾಳ್ಪುದನ್ನು ಮಾಧವ ಮಛ್ಛಾದಿರೂಪ 1 ದುರುಳ ಭಾವವನ್ನು ಬಿಡಿಸಿ ಸಲಹಿನ್ನು ಕೊಟ್ಟು ಫಲವನ್ನ ಒರಳಿನಲ್ಲಿ ಕೊರಳ ಸಿಕ್ಕಿ ನರಳುವಂತಾಗಿರುವ ಕಷ್ಟ ಪರಿಯಾಯ ಸ್ವಾಮಿಯರಿಯೆಯ ಶರಣು ಶರಣು ಎಂದು ಮುಂದೆ ಹೊರಳಿ ಬೇಡಿಕೊಂಡು ನಿಂದೆ ಚರಣ ಪದ್ಮದಾಸರನ್ನು ಮರಿಯದೆ ಮಾನಿಸುವ ತಂದೆ 2 ರಾಜಕದಳಿಮಾಲಿಕಾ ವಿರಾಜಕಂಠ ಭಕ್ತ ಕಲ್ಪ ಭೂಜನೆ ರಾಜ ರಾಜನೆ ಮೂಜಗನ್ನಿವಾಸ ಪೂರ್ಣ ರಾಜರಂತರಾತ್ಮ ವ್ಯಸನ ರಾಜಿಯ ಕಡಿಸು ಬೋ ಜೀಯಾ ಈ ಜಗತ್ತಿನಲ್ಲಿ ನಿನ್ನ ಸೋಜಿಗವನರಿವರುಂಟೆ ತೇಜದಾಯಿ ವೆಂಕಟಾದ್ರಿ ರಾಜನೀನೆಂದರಿದೆ ನಿಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
ದೃಷ್ಟಿಯೊಳಗೆ ದೃಷ್ಟಿ ನಿಂತಿತು | ನೋಡಲಿನ್ನು ದೃಶ್ಯ ನಷ್ಟವಾಯಿತು | ಕಷ್ಟವೆಲ್ಲ ಕಡೆಗೆ ಸಾರಿ | ಅದೃಷ್ಟವನ್ನು ಮೀರಿ ನಿಂದು ನಿಷ್ಠೆಯಲ್ಲಿ ತುಷ್ಟಿಯಾಯ್ತು ನೀ ನೋಡು ಸಖಿಯೆ ಪ ಐದು ಮಂದಿ ಅಗಲಿ ಹೋದರೆ | ಐದಕೈದು ಕೂಡಿ ಬಂದು ಕೂಡದಾದರೆ | ಐದರೊಳಗೆ ನೋಡಲಿನ್ನು || ಐದು ಐದು ತಾನೆ ಅಲ್ಲ | ಐದನೇದರಲ್ಲಿ ನಿಂತೆನೇ | ನೀ ಕೇಳಿದೇನೆ ? 1 ಕರ್ಮವೆಲ್ಲ ಕಾಣದಾಯ್ತು | ಧರ್ಮವೊಂದು ಸರ್ವಕಾಲ ತೂಗಿ ನಿಂತಿತು |ಶರ್ವನಲ್ಲದಿನ್ನು ಮತ್ತೆ | ಉರ್ವಿಯಲಿ ಪೇಳದಾಗಿ ಪರ್ವತಾಗ್ರ ಭೂಮಿ ಒಂದು ನಿರ್ವಿಕಾರ ತೋರಿತಲ್ಲಾ 2 ಹಿಂದೆ ಎಂದು ಕಂಡಿದಿಲ್ಲ | ಈ ಸೋಜಿಗವನ | ಮುಂದೆ ದಾರಿಗುಸುರಲೀಗತೀ | ತಂದೆ ಭವತಾರಕನ | ಹೊಂದಿದವರ ಕೇಳಿದೇನೆ | ಎಂದು ಎಂದು ಹೀಗೆಂಬರೆ | ನೀ ಬಲ್ಲಿಯೇನೇ 3
--------------
ಭಾವತರಕರು
ಪಾದ ಭಕ್ತಿಯಿಂದ ಭಜಿಸು ಮನವೆ ಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ ಪ ಹಿಂದೆ ನಾರದರಿಂದಿರೇಶಗೆ ವಂದಿಸಿ ಬೆಸಗೊಳಲು ಛಂದದಿಂದಲಿ ಸಿಂಧುಶಯನ ಬಂಧಮೋಚಕವೆಂದು ಪೇಳಿದ 1 ತಿಳಿದು ನಾರದರಿಳೆಯೊಳರುಹೇ ಕಲಿತು ಜನಗಳಲ್ಲಾರಂಭಾ ಪಾಲು ಘೃತಾದಿಗಳಿಂದ ಪೂಜಿತ 2 ದ್ವಿಜವಣಿಕ್ ಭೂಭುಜರು ನಿಜಭಕುತಿಯಿಂದ ಯ್ಯಜಿಸೆ ಸೋಜಿಗವನ್ನೇ ತೋರಿದುದರಿಯ 3
--------------
ಪ್ರದ್ಯುಮ್ನತೀರ್ಥರು