ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜÉೂೀಜೋ ಜೋಜೋ ಜೋ ಮುಖ್ಯಪ್ರಾಣ ಜÉೂೀಜೋ [ಮಲೆವರ] ಗಂಟಲಗಾಣ ಪ. ಜÉೂೀಜೋ ರಾಕ್ಷಸಶಿಕ್ಷ ಕಲ್ಯಾಣ ಜÉೂೀಜೋ ಸಕಲವಿದ್ಯಾ ಪ್ರವೀಣ ಅ.ಪ. ಆ ಜಗದಲಿ ನೀ ಬಾಲಬ್ರಹ್ಮಚಾರಿ ಸೋಜಿಗದಲಿ ಕಪಿ ರಾಜ್ಯವನಾಳಿ ತೇಜಮುತ್ತಿನ ಕವಚಕುಂಡಲಧಾರಿ ಪೂಜಿಪರ ಪಾಲಿಪೆ ಸುಜನರುಪಕಾರಿ 1 ಭೂಮಿ ಭಾರವನಿಳಿಸಿದ ಭೀಮ ಕಾಮಿ ಕೀಚಕನ ಕುಟ್ಟಿ ರಣಧಾಮ ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ ಕಾಮಿತಾರ್ಥವನೀವÀ ಕಲ್ಪತರು ಭೀಮ 2 ಸೌಂದರ್ಯರೂಪದ ಶ್ರೀಮದಾನಂದ ತಂದೆ ಹಯವದನನ ಮೋಹದ ಕಂದ ಬಂದು ಉಡುಪಿಯಲಿ ನೆಲೆಯಾಗಿ ನಿಂದ ವಂದಿಸುವೆ ನಿದ್ರ್ರೆಗೈ ಹರಿಧ್ಯಾನದಿಂದ 3
--------------
ವಾದಿರಾಜ
ಪುಣ್ಯ ಪೂರ್ವಾರ್ಜಿತವಿದು ಸುರ ಮಾನ್ಯ ಶ್ರೀ ನಿಲಯನ ದರುಶನ ಪ ಚೆನ್ನಿಗನೀತನು ಸುಜನರ ಪೊರೆಯಲು ಪನ್ನಗಾಚಲದಿ ಬಂದಿರುವುದು ಬಲು ಅ.ಪ ರಾಜ್ಯವಿವಗೆ ಹದಿನಾಲ್ಕು ಲೋಕಗಳು ಭೋಜ್ಯ ಚರಾಚರಜಗವೆಲ್ಲ ರಾಜೀವಾಲಯನಾಥನಿವನು ಬಲು ಸೋಜಿಗದಲಿ ಬಂದಿಹ ನೋಡಿ ಪೂಜ್ಯಚರಣ ಗುರುವ್ಯಾಸರಾಜ ಯತಿರಾಜ ರಚಿತ ದ್ವಿಕ್ಷಡಬ್ಧದ ಪೂಜೆಯ 1 ಸೌಂದರ್ಯದ ಗಣಿ ಇವನು ಎಲ್ಲರನು ತಂದೆಯಂತೆ ಸಲಹುವ ಸತತ ಒಂದೊಂದೆಡೆಯಲು ವ್ಯಾಪ್ತನಿವನು ತಾ ನೊಂದೆಡೆಯಲು ಸುಲಭದಿ ಸಿಗನು ನಂದತೀರ್ಥ ಪರಿವಾರ ಜನರು ಇವರೆಂದು ಹರುಷದಲಿ ಮುಂದೆ ನಿಂತಿಹುದು 2 ಪದ್ಮಾವತಿ ವಲ್ಲಭನಿವ ಮುನಿಜನ ಹೃದ್ಗತ ಪ್ರಕಟಾಮಿತ ಚರಿತ ಮುಗ್ಧಜನರು ಪರಮಾದರ ತೋರಲು ಸ್ನಿಗ್ಧನಾಗುವನು ಹರುಷದಲಿ ಛದ್ಮಕೆ ದೂರನು ಭಕ್ತ ಪ್ರಸನ್ನನು ಉದ್ಧರಿಸಲು ಈ ಸದ್ಮಕೆ ಬಂದಿಹ 3
--------------
ವಿದ್ಯಾಪ್ರಸನ್ನತೀರ್ಥರು
ಸೋಜಿಗದಲಿ ಜೀವಿಸುವರು ಸುಜನರು ಪ ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ ಪರರ ವಿಭವಗಳಿಗೆ ಕರಗಲರಿಯರಿವರು ಕೊರೆಯುವ ಬಡತನಕುರಿಯಲರಿಯರು ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ 1 ಕೆಡುಕುತನಗಳನು ಅರಿಯರು ಈ ಜನ ಬಡವರ ಸೌಖ್ಯಕೆ ದುಡಿವರು ಮುದದಲಿ ಕಡುದುರುಳರು ನಿಂದೆ ನುಡಿಗಳಾಡುವರೆಂದು ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ 2 ಪರರಿಗುಪಕೃತಿಯಲರಿಯರು ಮಿತಿಯನು ಪರರಿಗುಪಕೃತಿಗೆ ಜರಿಯರು ಮತಿಯನು ಶರಣ ಪ್ರಸನ್ನನ ಕರುಣವ ಪೊಂದಲು ವರನೀತಿಗಳಲಿ ನಿರತರಾಗುತ ಸದಾ 3
--------------
ವಿದ್ಯಾಪ್ರಸನ್ನತೀರ್ಥರು