ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಲೋಕನೀತಿ ಮಾಧವ ಎನಬಾರದೆ ಜೀವ ಕಾಲ ಪ ಆಚಿಂತೆ ಈ ಚಿಂತೆ ಎಲ್ಲಾ ಚಿಂತೆಯನು ಕಿಂಚಿತ್ತು ಹೊತ್ತು ಬಂತೆಯಾದೆ ನಾನು ಅ.ಪ ಪತಿಯ ಚಿಂತೆ ಪರಸತಿಯ ಚಿಂತೆ ಅತಿಯಾದ ಮೋಹದ ಮಕ್ಕಳ ಚಿಂತೆ ಪ್ರತಿದಿನ ತುತ್ತಿನ ಚೀಲದ ಚಿಂತೆ ಮತ್ತೇನು ಅದಕಾಗಿ ಆಸ್ತಿಯ ಚಿಂತೆ 1 ಆಸ್ತಿಮಾಡಿದರೆ ಕಾಯುವ ಚಿಂತೆ ಜಾಸ್ತಿ ಸೇರಿದರೆ ಕನಲುವ ಚಿಂತೆ ಸುಸ್ತಿ ಬಡ್ಡಿಯಲಿ ಬೇಯುವ ಚಿಂತೆ ಸುಸ್ತಾಗಿ ಸೊರಗುವ ನೋವಿನ ಚಿಂತೆ 2 ಬದುಕಿದರೂ ಚಿಂತೆ ಬಾಳಿದರೂ ಚಿಂತೆ ಬದುಕ ಸಹಿಸದ ಮೂಢರಿಂದ ಚಿಂತೆ ಮುದದಿ ಕಾಯುವ ಮಾಧವನ ಚಿಂತೆ ಬಾಧಿಸದಲ್ಲೋ ಕೊಂಚವು ತಂದೆ 3 ಆ ಚಿಂತೆ ಈ ಚಿಂತೆ ಯಾಚಿಂತೆಯೊಳಗಿಂದ ಆಚೆಗೆ ಎಳೆತಂದು ಮತಿಯನು ನೀಡೋ ಅಚಿಂತ್ಯ ನಿನ್ನನೆ ಚಿಂತಿಸುವಂತೆನ್ನ ನಿಶ್ಚಿಂತನಾಗಿಸೊ ಜಾಜಿಪುರೀಶ 4
--------------
ನಾರಾಯಣಶರ್ಮರು
ಬಾರಯ್ಯ ಎನ್ನ ಮನ ಮಂದಿರಕೆ ಪ ಬೇರೊಂದು ಯೋಚನೆ ಮಾಡದೆ ಸಿರಿಪತಿಅ.ಪ ಸೋನೆ ಸೊರಗುವುದೆವಾರ ವಾರಕೆ ಮೇಘವಾರಿಯ ಕರೆದರೆಧಾರುಣಿಗೆ ಕ್ಷಾಮ ಬರುವುದೆ ಕೃಷ್ಣ1 ತಾಮಸ ಬುದ್ಧಿಯೆಂಬಿಯ ನಿನ್ನಶ್ರೀಮೂರ್ತಿ ಹೊಳೆದರೆ ತಮವಡಗದೆಶ್ರೀ ಮನೋಹರನೆ ಭಾನು ಉದಿಸಿದರೆತಾಮಸವಡಗದೆ ಜಗದೊಳು ಕೃಷ್ಣ 2 ನಾ ದೋಷಿ ಕಠಿಣನೆಂತೆಂಬೆಯ ನಿನ್ನಪಾದಪದುಮ ಪಾಪಹರವಲ್ಲವೆಆ ದುಷ್ಟ ಶಿಲೆ ಸೋಕೆ ಋಷಿಪತ್ನಿಯಾದಳುನೀ ದಯಮಾಡೆ ನಾ ನೀಚನೆ ಸಿರಿಕೃಷ್ಣ 3
--------------
ವ್ಯಾಸರಾಯರು
ಬೆರಗದಿರು ಮನವೇ ನೀ ತತ್ವವನು ತಿಳಿಯದೆ ಮರುಗಬೇಕಾಗುವುದು ಅವಿವೇಕಕೆ ಪ ಸಿರಿಯರಸ ನರಹರಿಯ ಮರೆತು ಬಾಳುವ ನರನು ನರಕಕ್ಕೆ ಗುರಿಯಾಗಿ ಸೊರಗುವನು ನಿಜದಿ ಅ.ಪ ಸುಲಭವಲ್ಲವೊ ನಿನಗೆ ಮನುಜ ಜನ್ಮದ ಲಾಭ ತನುಭೋಗವಲ್ಲವೊ ಅದರ ಫಲವು ವನಜನಾಭನ ಮನದಿ ನೆನೆನೆನೆದು ದಿವ್ಯ ಸ ನ್ಮಾನವ ಪಡೆಯುವತನಕ ಶುನಕಕ್ಕೆ ಸಮನೋ 1 ಭವಮೋಹದಿಂದ ನೀ ಘನ ಪಾಪಗಳ ಮಾಡಿ ಧನಿಕನೆಂದೆನಿಸಿದರೆ ಎಣಿಕೆ ಬಾರದೋ ದಿನದಲ್ಲಿ ಧನದಿಂದ ಪಡುವ ಭೋಗಗಳು ಬಂ ಧನದಲ್ಲಿ ಕೆಡಹುವುವು ನಿನ್ನನು ನಿಜದಿ 2 ಪ್ರೇಮಪಾಶಕೆ ಸಿಲುಕಿ ವಾಮಲೋಚನೆಯರ ಕಾಮಿತಕೆ ಬಿದ್ದು ನಿರ್ನಾಮವಾಗದಿರೊ ಹೇಮದಾಸೆಗೆ ನಿನ್ನ ಕಾಮನೆಂದ್ಹೊಗಳುವರೋ ರೋಮ ರೋಮದಿ ಸುಲಿದು ಕೊನೆಗೆ ಬಿಸುಡುವರೋ 3 ಮುನ್ನ ಏಸೇಸು ಜನ್ಮಗಳ ಪೊಂದಿದೆಯೊ ನೀ ನಿನ್ನವರು ಯಾರೆಂದು ಪೇಳಲಳವೇ ಘನ್ನ ಮಹಿಮನಲಿ ಸಂಪನ್ನಮತಿಯನೆ ಪೊಂದು ಪನ್ನಗಶಯನ ಪ್ರಸನ್ನನಾಗುವನು 4
--------------
ವಿದ್ಯಾಪ್ರಸನ್ನತೀರ್ಥರು