ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಾಲ ಬಾಲಾ ತ್ರಿಭುವನ ಪಾಲಾ ಕರುಣಾಲವಾಲ ಗೋಪಾಲ ಬಾಲಾ ಗೋಪೀ ಬಾಲಾ ಭಕುತಾನುಕೂಲ ಪ ಪಾಪಕುಲಾನಲ ತಾಪಸ ಸಂಕುಲ ಶ್ರೀಪತೆ ಮಾಂಗಿರಿನಿಲಯ ಶುಭಾಕುಲ ತಾಪತ್ರಯ ಕುಲಜಾಲ ನಿರ್ಮೂಲ ಗೋಪಗೋಪಿಕಾನಂದದುಕೂಲಾಅ.ಪ ಮುರಳೀಧರ ಘನಸುಂದರ ಭಾವ ದೇವಾದಿದೇವ ಸರಸೀರುಹದಳನಯನ ಸ್ವಭಾವಾ ಜೀವಾದಿಜೀವ ವರದಾಯಕ ಶರಣರ ಸಂಜೀವಾ ಮೃದುಮಧುರಸ್ವಭಾವ ಸ್ವರನಾದದಿ ಘಲು ಘಲ್ಲೆನುತಿರುವಾ ವರನೂಪುರದುಂಗುರ ಝಣ ಝಣರವ ಹರುಷದೊಳೆಲ್ಲೆಡೆಯೊಳು ನಲಿನಲಿದಾಡುವ 1 ಮುದ್ದಾಡಿ ನಲಿಯಳೆ ನಿನ್ನ ಯಶೋದಾ ಅಘರೂಪವಾದ ಮುದ್ದೆ ಬೆಣ್ಣೆಯ ಮೆಲುವಾತುರದಿಂದ ಕರಯುಗಗಳಿಂದ ಕದ್ದು ನೀ ನೋಡುವುದೇ ಅತಿಚೆಂದ ಭಕ್ತರಾನಂದಾ ಮದ್ದುಣಿಸಿದಳ ಒದ್ದು ಸಂಹರಿಸಿದ ಮೆದ್ದು ಉದ್ಧರಿಸೊ ಗೋವಿಂದ ನಂದನಕಂದ 2 ಅಕ್ಕೋ ಬೃಂದಾವನದಾನಂದ ಹೊಂಗೊಳಲಿಂದಾ ಇಕ್ಕೋ ಚೆಂದದ ಗಾನಾನಂದ ಕಿರುನಗೆಯಿಂದ ಕಕ್ಕುಲತೆಯ ಮದದಿಕ್ಕೆಗೆ ಸಿಲುಕದ ಠಕ್ಕುಗಾರ ಸೊಬಗಿಂದ ರಾಧೆಗೆ ಮುದ ವಿಕ್ಕಿ ಮಡುವ ಧುಮ್ಮಿಕ್ಕಿ ನರ್ತನಗೈದ 3 ವೈರಿ ಕಂಸಾರಿ ಶೌರಿ ಬಾ ಬಾರೋ ಪಾಂಡವ ಪಕ್ಷ ವಿಹಾರೀ ಶಿಶುಪಾಲ ಸಂಹಾರೀ ಭವ ಬಂಧನ ಪರಿಹಾರಿ ಶರಣರಿಗುಪಕಾರೀ ಇಭಕುಲಕೇಸರಿ ಘನ ಗಿರಿಧಾರೀ ಅಭಯಪ್ರದ ಹರಿ ಗೂಢಸಂಚಾರಿ ನಭಚರಹರಿ ಮಾಂಗಿರಿ ಸುವಿಹಾರೀ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಮ್ಮಾ ನೀ ನೋಡಿದ್ಯಾ | ಒಮ್ಮನದಿಂದಬೊಮ್ಮ ಮೂರುತಿ ಶ್ರೀ | ವಲ್ಲಭ ರಂಗನಾ ಪ ಹಿಂಡು ದೈವರ ಗಂಡ | ಚಂಡ ವಿಕ್ರಮ ನಮ್ಮಕೊಂಡಜ್ಜಿ ಬಳಿಲಿರುವ | ಪುಂಡರೀಕಾಕ್ಷನ 1 ನೂಪುರ ಗೆಜ್ಜೆಪೆಂಡ್ಯ | ಆಪಾದ ಸೊಬಗಿಂದಶ್ರೀಪತಿ ಮೆರೆಯುವ | ಭೂಪತಿ ವರದನ 2 ಅಕ್ಷಯ ಫಲದವನವಕ್ಷದೋಳ್ ಧರಿಸೀಹ | ಲಕ್ಷ್ಮೀ ಉಳ್ಳವನ 3 ಕೌಸ್ತುಭ | ಕರ್ಣದಿ ಕುಂಡಲಶಿರದಲ್ಲಿ ಕಿರೀಟ | ಧರಿಸಿ ಮೆರೆವವನ4 ಪವನಾಂತರಂಗನ | ಪಾವನ ಚರಿತನಭುವನ ಮೋಹನ ಗುರು | ಗೋವಿಂದ ವಿಠಲನ 5
--------------
ಗುರುಗೋವಿಂದವಿಠಲರು