ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತ ಗುಣ ಪೂರ್ಣ | ವಿಠಲ ಪೊರೆ ಇವನಾ ಪ ವಿನಯದಲಿ ತವದಾಸ್ಯ | ವನು ಕಾಂಕ್ಷಿಸುವನಾ ಅ.ಪ. ಸ್ವಪ್ನದಲಿ ದೇವ ಗೃಹ | ಒಪ್ಪವೋ ಹರಿರೂಪಅಪ್ಪ ಸಮ್ಮುಖದಿ ಸ್ತುತಿ | ವಪ್ಪಿಸುತ್ತಿರುವಾ |ನೆಪ್ಪಿನ ಗುರೂ ರೂಪ | ತಪ್ಪದಲೆ ತಾ ಕಂಡುಸೊಪ್ಪಿನಾ ಭಾವದಲಿ | ಅಪ್ಪಿದನು ನೆಲವಾ 1 ವಿತತ ಮಹಿಮನ ಗುಣನ | ತುತಿಸುತಿಹ ಗುರುವಿನೆಂಹಿತದಿ ಅಂಕಿತಯುಕ್ತ | ತುತಿಯ ಉಪದೇಶಾಕೃತವಾಯ್ತು ಭಾವುಕಗೆ | ಅತಿ ಚಿತ್ರ ಪೇಳಿಲ್ಕೆಮತಿಗೆ ಸಿಲುಕದೆ ಹೋಯ್ತು | ಮತ್ತೆ ಎಚ್ಚರದೀ 2 ಸುಪ್ರೀಶ ಚರ್ಯವನು | ಅಪ್ಪಿ ಇವಗಂಕಿತವಗೊಪ್ಪದಲಿ ಇತ್ತಿದೆನೊ | ಅಪ್ಪ ಹಯವದನಾ |ಅಪ್ರಮೇಯಾ ನಂತ | ಸ್ವ ಪ್ರಕಾಶಕ ಹರಿಯೆಕೃಪೆಯಿಂದಲಿ ಇವನ | ಒಪ್ಪಿ ಕೈ ಪಿಡಿಯೋ 3 ನಿದ್ರೆಯಲ್ಲಿಹನ ಪ್ರ | ಬುದ್ಧನನ ಗೈಯ್ಯುತ್ತಮಧ್ವಮತ ದೀಕ್ಷೆಯನು | ತಿದ್ದಿ ಇವನಲ್ಲೀಶ್ರದ್ಧಾಳು ಎಂದೆನಿಸೊ | ಸಿದ್ಧಾಂತ ಪಂಥದಲಿಅಢ್ವದೇಡ್ಯನೆ ಹರಿಯೆ | ಮುದ್ದು ನರಹರಿಯೇ 4 ಕೈವಲ್ಯ ಪ್ರದ ಹರಿಯೆಆವ ತವನಾಮ ಸ್ಮøತಿ | ಸಾರ್ವ ಕಾಲದಲೀತಾವಕಗೆ ನೀನಿತ್ತು ಕಾವುದೆಂಬೆನೊ ಗುರೂಗೋವಿಂದ ವಿಠಲಯ್ಯ | ಗೋವುಗಳ ಪಾಲಾ 5
--------------
ಗುರುಗೋವಿಂದವಿಠಲರು
ಮೃತ್ಯುಂಜಯನೇ ಶರಣು ಶಂಕರನೆ ಶರಣು ಶರಣು ಪ ವಾಸವೇ ಕೈಲಾಸ ವಸನವೇ ದಿಕ್ಕುಗಳು ಪೂಸಿಹುದು ಸರ್ವಾಂಗವೆಲ್ಲ ಭಸ್ಮ ನೇಸರಿನ ತೇಜ ಶಶಿಜೂಟ ಗಂಗಾಧರನ ಪಾಸಟಿಯು ನಿನಗೊಬ್ಬರಿಲ್ಲ ಗೌರೀಶ 1 ಪಂಚ ವಿಂಶತಿ ತತ್ವದೂರ ವಿಶ್ವಾಧಾರ ಪಂಚ ಶರಹರ ವಿರಂಚ್ಯಾದಿ ಸಂಸ್ತುತಾ ನಿತ್ಯ ಪ್ರ ಪಂಚ ಮಯನಾದ ಗಿರಿಜೇಶ ವಿಶ್ವೇಶ 2 ಪರಮ ಪುರುಷ ಪರೇಶ ಪರಮ ಗುಣಗಣ ನಿಲಯ ಶರಣ ಜನ ಸುರಧೇನು ವಿಶ್ವವಂದ್ಯಾ ಭವ ಪೂಜ್ಯಸೂರ್ಯ ಕೋಟಿಪ್ರಕಾಶ ಉರಗ ಭೂಷಣ ವೃಷಭಾರೂಢ ಗೌರೀಶ 3 ಭೂತಪತಿ ಭುವನೇಶ ಪ್ರೇತ ನಿಲಯ ನಿವಾಸ ನೂತನದ ಗಜಚರ್ಮ ನಿನಗೆ ವಿಖ್ಯಾತ ಗೀತ ನೃತ್ಯ ವಿಲಾಸ ಮಾತುಳಾಧ್ವರನಾಶ ಭಾತಿ ಕಂಠದಿ ವಿಷವು ಗೌರೀಶ 4 ಧರೆಯೊಳಧಿಕತರ ವರದ ಮೂಲನಿವಾಸ ಕರಿವದನ ನಂದೀಶ ಶಕ್ತಿ ಉಮೆ ಸಹಿತ ಭರದಿಂದ ನೆಲಸಿ ಸೊಪ್ಪಿನ ಸುಬ್ಬಗೆವರವಿತ್ತೆ ದುರಿತವನು ಪರಿಹರಿಸೋ ಶಂಭುಲಿಂಗೇಶ 5
--------------
ಕವಿ ಪರಮದೇವದಾಸರು