ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಸಂತತಿ ಪ್ರಯುಕ್ತ ಪ್ರಾರ್ಥನೆ) ಪರಮ ಪಾವನ ರೂಪ ಪಾಲಿಸು ಕುಲದೀಪ ಪರಿಹರಿಸಖಿಳತಾಪ ದುರಿತರಾಶಿಗಳೆಲ್ಲ ತರಿದು ತ್ವತ್ಪದ ಸೇವಾ- ದರವಿತ್ತು ಸಲಹುವ ಕರುಣಿ ವೆಂಕಟಭೂಪ ಪ. ಮಾತಾ ಪಿತರು ನೀನೆ ಮಹದೇವಿಯರಸನೆ ಪಾತಕ ಪರಿಹಾರನೆ ಭೂತ ಭಾವನ ಭುವನೈಕಾಧಿಪತಿ ಜಗ- ನ್ನಾಥದಾಸರು ತೋರ್ದ ರೀತಿಯ ತಿಳಿಸುವೆ 1 ನಿನ್ನ ಪಾದಾಂಬುಜ ಸೇರಿದ ದಾಸರ ಇನ್ನು ನೀ ಬಿಡಲಾರದೆ ಉನ್ನತ ಸುಖಗಳ ತನ್ನಂತೆ ಪಾಲಿಪ ಘನತೆ ತೋರ್ಪ ಪ್ರಸನ್ನ ವರದರಾಜ 2 ಮಾಧವ ಮನೆ ಮೊದಲಾದುದೆಲ್ಲವು ನಿನ್ನ ಪಾದಕರ್ಪಿಸಿದೆನಿಂದು ನೀ ದಯಾಂಬುಧಿಶೇಷ ಭೂಧರಪತಿ ಮಂಗ ಳೋದಯಕರ ಸಂಪದಾದಿ ಪೂರಣಗೈವ 3
--------------
ತುಪಾಕಿ ವೆಂಕಟರಮಣಾಚಾರ್ಯ
ವೇಂಕಟೇಶನೆ ಎನ್ನಾ ಪಾಲಿಪುದೊ ಹರಣ ಪ ಪಂಕಜೋದ್ಭವ ಹರ ವಂದ್ಯ ಪರಾತ್ಪರ ನಿಖಿಲಾಗಮೈಕವಿಜ್ಞೇಯ ಲೋಕೋದ್ಧಾರ ಅ.ಪ ವತ್ಸರ ಬ- ಹುಧಾನ್ಯ ಸಂದ ಶುಕ್ಲ ದ್ವಿತೀಯ ಸಂಧ್ಯಾಸವನ ಬಂದು ಕೀರ್ತನ ಸೇವಾ- ನಂತರದಿ ಎನ್ನಾ ಮಂದಿರದೊಳು ಸುಪ್ತಾವಸ್ಥೆ ಯಿಂದಿರಲಾಗ ಅಂದು ಕಡೆಯ ಯಾ- ಮದಿ ತೈಜಸನೆ ನೀ ಹಂಸರಿಂದೆನ್ನ ಮನಸಂಶಯ ಹರಿಸಿದೆ1 ಅರುಣೋದಯಲೆದ್ದು ಮುದದಿ ಕರಣಶುಧ್ದನಾಗಿ ತ್ವರಿತದಿ ಸ್ವಪನದ ವಿ- ವರಕಾಗಿ ಹರುಷದಿ ಹರಿಪೂಜಾಕಾಲದಿ ಅರುಹಿದ ಮರುತ ಮೂರುತಿಯಾ ಉರುತರ ಚರಿತೆಯ ನಿರುತಪೊಗಳಲಾಯತವಿತ್ತ ತಿರುಪತಿಶೈಲಾಧಿಪ ಮಮಕುಲಸ್ವಾಮಿ2 ಹರಿಗುರುಸೇವೆಯನು ಸರ್ವಸದ್ಯೋಗ್ಯಸಾಧನವನ್ನು ಪರಮಹಂಸರು ಇತ್ತವೇಂಕಟೇಶಾಂಕಿತ ಮೂರುತಿಯ ನುತಿಪಾ ನಿಜ ಹರಿಭಕುತರ ಚರಣಕಮಲಬಂಡುಣಿಯೆನಿಸಿ ಇವನನಿರುತ ರಕ್ಷಿಸೋ ಉರಗಾದ್ರಿವಾಸವಿಠಲಾ 3
--------------
ಉರಗಾದ್ರಿವಾಸವಿಠಲದಾಸರು