ಒಟ್ಟು 8 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ಕೈವಲ್ಯಪತಿ ವಿಠಲ | ಇವಳ ನೀ ಸಲಹೋ ಪ ದೇವದೇವೊತ್ಮತವ | ದಾಸ್ಯಕಾಂಕ್ಷಿಪಳಾ ಅ.ಪ. ಗುರುಗಳೊಂದಗೆ ಯಾತ್ರೆ | ಭರದಿ ಸ್ವಪ್ನದಿಗೈದು |ಮರಳಿ ಕೊಲ್ಹಾಪುರದ | ಶಿರಿರಮೆಯ ಕಂಡೂ |ಮರುತ ದರ್ಶನದಿಂದ | ವರಸು ಉಪದೇಶಕ್ಕೆತರುಣಿ ಶುದ್ಧಳು ಇಹಳು | ಉರಗಾದ್ರಿವಾಸಾ 1 ತೈಜಸನು ನೀನಾಗಿ ನೈಜದಂಕಿತ ಪ್ರಾಪ್ತಿಮಾಜದಲೆ ಸೂಚಿಸಿಹೆ | ಭ್ರಾಜಿಷ್ಣು ಮೂರ್ತೇ|ಯೋಜಿಸಿದೆ ಅದಕಾಗಿ | ತರಳೆಗಂಕಿತವನ್ನುರಾಜಿಸೋ ಮನದಿ ತವ | ನೈಜರೂಪವನೂ 2 ತರತಮದ ಸುಜ್ಞಾನ | ಹರಿಗುರೂ ಸದ್ಭಕ್ತಿಮರುತ ಮತ ದೀಕ್ಷೆಯನು | ಪರಮ ವೈರಾಗ್ಯಕರುಣಿಸುತ ಸಂಸಾರ ಶರಧಿಯನೆ ದಾಂಟಿಸೊಅರವಿದೂರನೆ ಹರಿಯೆ | ಪ್ರಾರ್ಥಿಸುವೆ ನಿನ್ನಾ 3 ಕರ್ಮ ನಿಷ್ಕಾಮದಲಿ | ಪೇರ್ಮೆಯಲಿ ಚರಿಪಂತೆಭರ್ಮಗರ್ಭನ ಪಿತನೆ | ಸನ್ಮನವನಿತ್ತೂ |ನಿರ್ಮಮತೆ ನೀಡಿ | ಕರ್ಮನಿರ್ಲೇಪದಲಿಹಮ್ರ್ಯ ವೈಕುಂಠವನು | ಗಮಿಪ ತೆರಮಾಡೋ 4 ಭಾವುಕರ ಪರಿಪಾಲ | ಭೂವೈಕುಂಠಲೋಲದೇವದೇವೋತ್ತಮನೆ | ಗೋವಿಂದ ಮೂರ್ತೇ |ನೀ ವೊಲಿಯದಿಲ್ಲ ಗುರು | ಗೋವಿಂದ ವಿಠ್ಠಲನೆಸೇವಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಮಾಧವ ವಿಠಲ ನೀದಯದಿ ಕಾಪಾಡೊ ಇವಳ ಪ ಯಾದವೇಶನೆ ಸ್ವಾಮಿ | ಹೇಸದಾಗತಿವಂದ್ಯಪಾದ ಸೇವಕಳ ಮನದಾಶೆ ಸಲಿಸುತ್ತ ಅ.ಪ. ತೂಲ | ರಾಶಿಗಳನ ಪರಿಯಗೈಸಿ ನೀನಾಗಿ ತವ | ದಾಸಿ ಎಂದೆನಿಸೋ 1 ನೀಚೋಚ್ಚ ತರತಮದಿ | ಯೋಚನೆಯ ನೆಲೆಗೊಳಿಸಿಪ್ರಾಚೀನ ಕರ್ಮಾಳಿ | ಮೋಚನೆಯ ಗೈಯ್ಯೇ |ಖೇಚರೊತ್ತಮ ವಾಹ | ಕೀಚಕಾರಿ ಪ್ರಿಯನೆಯಾಚಿಸುವೆನೋ ಸವ್ಯ | ಸಾಚಿ ಸಖ ಕೃಷ್ಣ 2 ಜ್ಞಾನಗಮ್ಯನೆ ದೇವ | ಜ್ಞಾನಿಜನ ಸುಪ್ರೀಯಆನಂದ ತೀರ್ಥ ಮತ | ದಾನಂದ ಉಣಿಸೀಗಾನಲೋಲನೆ ಇವಳ | ಗಾನಕೊಲಿಯುತ ನೀನುಧ್ಯಾನ ಗೋಚರನಾಗೊ | ಹೃತ್ಕಂಜದೊಳಗೇ 3 ಸುಸ್ವತಂತ್ರನೆ ದೇವ | ಅಸ್ವತಂತ್ರಳ ಕಾವಸರ್ವ ಭಾರವು ನಿಂದೆ | ಶರ್ವವಂದ್ಯಾಸರ್ವವ್ಯಾಪಕನಾಗಿ | ಸರ್ವಜ್ಞ ನೀನಿರಲುಅಶ್ವಮೊಗನೇ ಕಾಯೊ | ವಿಶ್ವಸೃಜಿ ದೇವ 4 ತೈಜಸನೆ ನೀನಾಗಿ | ಯೋಜಿಸಿದ ಪರಿಯಂತೆಭ್ರಾಜಿಸುವ ಅಂಕಿತವ | ನೈಜ ಭಕ್ತಳಿಗೇಯೋಜಿಸಿಹೆ ಮರುತನಿಂ | ಪೂಜ್ಯನೇ ಪರಿಪೂರ್ಣತೇಜಾತ್ಮನಾದ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ರಘುಕುಲ ತಿಲಕ ವಿಠಲ ಇವಳ ಘಾವಳಿಗಳನುಬಗೆಹರಿಸಿ ಕಾಪಾಡ ಬೇಕೋ ಹರಿಯೇ ಪ ಭೃಗುವರದ ನಿನ್ನಂಘ್ರಿ ಸೇವೆಯಲಿ ಮಹಭಕ್ತಿಮಿಗೆ ಜ್ಞಾನ ಕೊಟ್ಟಿವಳ ಕಾಪಾಡ ಬೇಕೋ ಅ.ಪ. ಶಬರಿ ಎಂಜಲನುಂಡ | ಕಾರುಣ್ಯ ಮೂರುತಿಯೆಅಭಯದನು ನೀನಾಗಿ ವಂಶ ಉದ್ಧರಿಸೋ |ಕುಭವ ಪರಿಹರಕಾಗಿ ಸಾಧನವು ಎಂದೆನಿಪಶುಭ ಸದಾಗತಿ ಮತದಿ ದೀಕ್ಷೆಯನೆ ಈಯೋ 1 ಪಾದ ಸೇವಕಳೀಗೆಭೇದ ಪಂಚಕ ತಿಳಿಸಿ ಸಾಧನವಗೈಸೋ 2 ಸರ್ವಜ್ಞ ಸರ್ವೇಶ ಹಯಮೊಗಾತ್ಮಕನಾದಸರ್ವ ಸುಂದರ ಗುರುಗೋವಿಂದ ವಿಠಲ |ಸರ್ವದಾ ಸರ್ವತ್ರ ನಿನ್ನ ಸ್ಮøತಿಯನೆ ಕೊಟ್ಟುದರ್ವಿಜೀವಿಯ ಸಲಹೆ ಬಿನ್ನವಿಪೆ ನಿನಗೇ 3
--------------
ಗುರುಗೋವಿಂದವಿಠಲರು
ವೆಂಕಟ ಗಿರಿ ವಿಠಲ | ಲೆಂಕಳನ ಪೊರೆಯೋ ಪಪಂಕಜಾಸನ ವಂದ್ಯ | ಆಕಳಂಕ ಮಹಿಮಾ ಅ.ಪ. ಸಾಧ್ವಿಮಣಿ ತವದಾಸ್ಯ | ಬುದ್ದಿಯಲಿ ಮೊರೆಯಿಟ್ಟುಉದ್ಧರಕೆ ಕಾದಿಹಳೊ | ಅಧ್ವರೇಡ್ಯ ಹರೀ |ಮಧ್ವಮತ ಪೊತ್ತಿರುವ | ಶುದ್ಧಕಾರಣದಿಂದಉದ್ಧಾರ ಗೈಯ್ಯುವುದೊ | ಶ್ರದ್ಧ ಪತಿನುತನೇ 1 ಖೇಚರೋತ್ತಮ ದೇವ | ವಾಚಾಮ ಗೋಚರನೆಪ್ರಾಚೀನದುಷ್ಕರ್ಮ | ಮೋಚನವಗೈಸೇಯಾಚಿಸುವೆ ನಿನ್ನಲ್ಲಿ | ಕೀಚಕಾರಿ ಪ್ರಿಯನೇಮೋಚಕೇಚ್ಛೆಯ ಮಾಡಿ | ಸೂಚಿಸೋ ಕರುಣಾ 2 ಕರ್ಮ ಪಥಸವೆಸೋ 3 ಹರಿನಾಮ ಸ್ಮøತಿಗಿಂತ | ಪರಮ ಸಾಧನ ಕಾಣೆವರಕಲೀಯಲಿಯೆಂದು | ಸಾರತಿವೆ ಶಾಸ್ತ್ರಾತುಣಿಗಂತೆಯೆ ಮತ್ತೆ | ವರ ಸ್ವಪ್ನವನುಸರಿಸಿಬರೆದಿಹೆನೊ ಅಂಕಿತವ | ಕರುಣ ರಸ ಪೂರ್ಣಾ 4 ಕೈವಲ್ಯ ಫಲದಾತಸೇವಕಳ ಕೈಪಿಡಿಯೆ | ಓವಿ ಪ್ರಾರ್ಥಿಸುವೇ |ಭಾವುಕರ ಪಾಲ ಸಂ | ಭಾವಿಸೀಕೆಯ ಕಾಯೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೆಂಕಟ ನರಹರಿ ವಿಠಲ | ಪಂಕಕಳೆದಿವಳಾ ಪ ಸಂಕಟವ ಪರಿಹರಿಸಿ | ಕಾಪಾಡ ಬೇಕೋ ಅ.ಪ. ಸಾರ ಶರಧಿಯು ಎಂಬವೀರವೈರಾಗ್ಯ ಕಂ | ಸಾರಿ ಕೊಡುತಿವಳಾಪಾರುಗೈ ಭವದಕೂ | ಸಾರವನು ಎಂದೆನುತಮಾರಾರಿಸ್ವದ್ವಿನುತ | ಪ್ರಾರ್ಥಿಪೆನೊ ಹರಿಯೆ 1 ಪತಿಸುತರು ಭ್ರಾತೃ ಶ್ರೀ | ಪತಿಯೆ ನೀನಾಗಿ ಹರಿಮತಿ ಮತಾಂವರರಂಘ್ರಿ | ಹಿತಸೇವಕಳೆನಿಸಿಪಥವು ಸಾಗಲಿ ದೇಹ | ಯಾತ್ರೆಯ ಸುಮಾರ್ಗದಲಿಗತಿಗೋತ್ರ ನೀನೆಂಬ | ಮತ್ತಿಯಿತ್ತು ಪೊರೆಯೊ 2 ಪಾದ ಕಮಲನೇಮ ಸೇವೆಯನಿತ್ತು | ಉದ್ದರಿಸೊ ಹರಿಯೇ 3
--------------
ಗುರುಗೋವಿಂದವಿಠಲರು