ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ರಾಗಿ ಬೆಳೆಯುವಾ ನಿರ್ಮ¯ರಾಗಿ ಬೆಳೆಯುವಾ ಪ ಸೇವಕರಾಗಿ ಬೆಳೆಯುವಾ ಭಾವುಕರಾಗಿ ಬೆಳ ಗೂವರಾಗಿಯಾದ ಮೇಲೆ ರಂಗನಪಾದವ ಪೂಜಿಪರಾಗಿ ಅ.ಪ ಪರರ ಹಳಿಯದಿರುವರಾಗಿ ಪರರಸುಖಕೆ ನಲಿವರಾಗಿ ಪರರ ಸೇವೆಗೈವರಾಗಿ ಪರಮಶಾಂತರಾಗಿ ಹಿರಿಯರೆಡೆಯ ಕಿರಿಯರಾಗಿ ಕಿರಿಯರೆಡೆಯ ಗೆಳೆಯರಾಗಿ ಹರಿಯನೆನೆವ ಮಾನಸರಾಗಿ ಪರಮಭಕ್ತಿಯಿಂದ ಜಾನಿಪರಾಗಿ1 ವಿತ್ತದಾಸೆಯ ಹಳಿವರಾಗಿ ಚಿತ್ತಪಿತ್ತವ ತೊಡೆವರಾಗಿ ನಿತ್ಯ ತೃಪ್ತರಾಗಿ ಹೊತ್ತಿಗೊದಗಿ ಬರುವರಾಗಿ ಮತ್ತು ಭ್ರಮೆಗಳಿಲ್ಲದರಾಗಿ ಪಾದಯುಗಳಕೆರಗುವರಾಗಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ