ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕುಮಟಾದಲ್ಲಿಯ ಶಾಂತೇರಿ ಕಾಮಾಕ್ಷಿ) ಶಾಂತೇರಿ ಕಾಮಾಕ್ಷಿ ತಾಯೇ ಅ- ನಂತಪರಾಧವ ಕ್ಷಮಿಸು ಮಹಮಾಯೇ ಪ. ಸರ್ವಭೂತಹೃದಯಕಮಲ ನಿವಾಸಿನಿ ಶರ್ವರೀಶಭೂಷೆ ಸಲಹು ಜಗದೀಶೆ1 ಮೂಲ ಪ್ರಕೃತಿ ನೀನೆ ಮುನಿದು ನಿಂತರೆನ್ನ ಪಾಲಿಸುವವರ್ಯಾರು ಪರಮ ಪಾವನ್ನೆ2 ನಿನ್ನಾಧೀನವು ನಿಖಿಲ ಬ್ರಹ್ಮಾಂಡವು ಮನ್ನಿಸು ಮಹಾದೇವಿ ಭಕ್ತಸಂಜೀವಿ3 ಗೋವೆಯಿಂದ ಬಂದೆ ಗೋವಿಂದಭಗಿನಿ ಸೇವಕಜನರಿಂದ ಸೇವೆ ಕೈಕೊಂಬೆ4 ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿ ಕರ್ತ ಲಕ್ಷ್ಮೀನಾರಾಯಣೀಕಲ್ಯಾಣಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಈಶನೀನೆ ದಯಾಸಿಂಧು ದಾಸಜನರ ಪ್ರೇಮಬಂಧು ಪ ಹೇವವಿಲ್ಲದೆ ಕಾಸಾರಕೈದಿ ಬೋವನಾಗಿ ಬಂಡಿ ಹೊಡಿದಿ ಕೇವಲ ಮಾನಕಾಯ್ದಿ ಸತಿಯ ಸೇವಕಜನರ ಬೆಂಬಲನೆ 1 ನಿನ್ನ ಭಜಿಸಿ ಬೇಡುವವರ ಭಿನ್ನವಿಲ್ಲದೆ ದಯದಿ ಒದಗಿ ಸಾವುಹುಟ್ಟು ಬಂಧಗೆಲ್ಲಿಸಿ ಧನ್ಯರೆನಿಸಿ ಸಲಹುವಿ 2 ಕಾಮಿತಾರ್ಥಪೂರ್ಣ ಭಕ್ತ ಕಾಮಧೇನು ಕಲ್ಪತರು ಸ್ವಾಮಿ ಶ್ರೀರಾಮ ನಿಮ್ಮ ವಿಮಲ ನಾಮ ಎನ್ನ ಜಿಹ್ವೆಗೆ ನೀಡೊ 3
--------------
ರಾಮದಾಸರು
ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ನಿನ್ನ ನಂಬಿದೆನೊ ಬ್ರಹ್ಮಣ್ಯತೀರ್ಥಾರ್ಯಾ ಸನ್ನುತಚರಣಪಾವನ ಸುಚರ್ಯಾ ಪ ಘನ್ನ ಭವದ ಭಯವನ್ನು ಕಳೆದು ಯತಿ ರನ್ನ ಎನ್ನನು ಧನ್ಯನ ಮಾಡೋ ಅ.ಪ. ಪುರುಷೋತ್ತಮ ಸುತೀರ್ಥರ ಪ್ರಿಯ ಸುಕುಮಾರ ದುರಿತೌಘಜೀಮೂತ ಚಂಡ ಸಮೀರ ಸುರುಚಿರ ತುಳಸಿ ಪಂಕಜಮಣಿಹಾರ ಧರಿಸಿ ಮೆರೆವೊ ದಿನಕರನವತಾರ ಕರುಣದಿ ತವ ಶ್ರೀಕರಚರಣಾಂಬುಜ ದರುಶನವನು ಕೊಡು ಗುಣಗಣನಿಧಿಯೇ 1 ಸೇವಕಜನರಿಗೆ ದೇವತರುವೆನಿಪ ಶ್ರೀವಿಠಲನಪಾದತಾವರೆ ಮಧುಪ ಕೋವಿದ ಜನರು ಸಂಭಾವಿಸಿ ಸ್ತುತಿಪ ಪಾವನ್ನ ಪಾದಾರ್ಚಿತ ಭಾವಜ ಮುನಿಪ ಪಾವನ ಸುಮತರ ಜೀವರ ಚಂದ್ರನೆ ಪಾವನ ಮತಿ ಕೊಡು ನೀ ಒಲಿದೆನಗೆ 2 ಪರ ತತ್ವಜ್ಞಾನ ವರವ ಪಾಲಿಸು ಸರ್ವವಿದ್ಯಾಪ್ರವೀಣ ನರಸಿಂಹವಿಠಲ ಶ್ರೀಹರಿ ಸನ್ನಿಧಾನ ಕರುಣಾಪಾತ್ರನೆ ದಿವ್ಯವರಪೂರ್ಣಜ್ಞಾನ ಹರಿಗುರುಭಜನ ತ್ವತ್ಪದ ವ್ಯಾಸಾರ್ಯರ ಗುರುವೆಂದೆನಿಸಿದೆ ಧರೆಯೊಳು ಮೆರೆದೆ 3
--------------
ನರಸಿಂಹವಿಠಲರು
ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ ನೆರೆನಂಬಿದವ ಧನ್ಯನೊ ಪ ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ ಪುರದ ಕೋಟೆಯೊಳಿರಲು ಬಂದಿಹ ಅ.ಪ ಬಹುಭರದಿವಾರಿಧಿ ಲಂಘಿಸಿ ಹರಿಭಟನೆಂದು ತಿಳಿಸಿ ತ್ವರದಿ ರಾಮನಿಗರ್ಪಿಸಿ ಧೀರನೆ ಸುರವಿನುತ ತವ ಪರಿಮಳವಿರಚಿಸಿದ ಗುರುವರರ ನೋಡಿದೆ 1 ಗೋವಿಂದನಂಘ್ರಿಯ ಭಜಿಸಿ ಮನದಿ ಭಾವಿಸಿ ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ ಸಮರ್ಥ ತವಪದ ಕೊಂದಿಸುವೆ ಮನ ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2 ಪುಟ್ಟಿಯತಿರೂಪವನೆಧರಿಸಿ ಕ್ಷಿತಿಯೊಳಗಖಿಲ ದುರ್ಮತಗಳೆಂಬುವ ಮೇಘತತಿಗೆ ಮಾರುತನೆನಿಸಿ ಪ್ರತಿಪಾದ್ಯನೆಂದು ತಿಳಿಸಿ ಸುಖ ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ ಅತುಳ ಮಹಿಮನೆನುತಿಸುವೆನು ಸತತ ಪಾಲಿಸೋ 3 ತನುಮರೆಯಲು ಧುರದಿ ಜೀವನವಿತ್ತಕಾರಣದಿ ವನಜನಾಭನು ದಯದಿ ತನ್ಮೂರ್ತಿ ಸಹಿತದಿ ತಟಿತ್ಕೋಟಿ ಸೇವಕಜನರ ಸಲಹುವಿ ಕೊಳುತಲಿ ಮೆರೆವದೇವನೆ 4 ಶಿರದಿ ಮುಕುಟ ಮಂಡಿತ ಮೂರ್ತಿ ದರುಶನವನೆ ಕೊಳ್ಳುತ ವಿಸ್ತರ ಮಂಟಪದಿರಾಜಿತ ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ ಕರುಣವ ಪಡೆದ ಧೀರನೆ 5
--------------
ಕಾರ್ಪರ ನರಹರಿದಾಸರು
ಲೋಕ ಭರಿತನೊ ರಂಗಾನೇಕಚರಿತನೊ ಪ. ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ. ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ 1 ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ2 ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ 3 ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ4 ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ 5
--------------
ವಾದಿರಾಜ
ವಿಶ್ವಧಾರನೋ ಶ್ರೀಶ ವಿಶ್ವಕಾರನೋ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ ನಾದಭರಿತನೋ ಹರಿ ನಾದಾತೀತನೋ ವೇದಾಧರನೋ ರಂಗ ವೇದ ಗೋಚರನೋ ವೇದವೇದಾಂತ ಸ್ವಾದ ನಿಖಿಲ ಬೋಧರೂಪ ಭೇದರಹಿತ ಆದಿ ಅನಾದಿದಾತ ಸತತ ಸಾಧುಸಜ್ಜನವಿನುತ ಅಮಿತ1 ದೇವದೇವನೋ ಸ್ವಾಮಿ ದಿವ್ಯಚರಿತನೋ ಕಾವ ಕರುಣನೋ ಭಕ್ತಿ ಭಾವಪೂರ್ಣನೋ ಸಾವುಹುಟ್ಟು ಭಯವಿದೂರ ಮಾಯಗೆಲಿದ ಮಹಪ್ರಕಾಶ ಭಾವಜಜನಕ ಭವಭಂಗ ಸೇವಕಜನರ ಜೀವದಾಪ್ತ 2 ದೋಷನಾಶನೋ ಕೃಷ್ಣ ಮೀಸಲಾತ್ಮನೋ ಭಾಸುರಂಗನೋ ಜಗದೀಶ ಗಮ್ಯನೋ ವಾಸುಕಿಶಯನ ವಾಸುದೇವ ಸಾಸಿರನಾಮದೊಡೆಯ ಇಂದಿ ರೇಶ ಗೋವಿಂದ ಪೋಷಿಸೆನ್ನ ಶ್ರೀಶ ಶ್ರೀರಾಮದಾಸಪ್ರಿಯ 3
--------------
ರಾಮದಾಸರು
ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯಪ.ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
--------------
ಪ್ರಸನ್ನವೆಂಕಟದಾಸರು
ಶಾಂತೇರಿ ಕಾಮಾಕ್ಷಿ ತಾಯೇ ಅ-ನಂತಪರಾಧವ ಕ್ಷಮಿಸು ಮಹಮಾಯೇ ಪ.ಸರ್ವಭೂತಹೃದಯಕಮಲ ನಿವಾಸಿನಿಶರ್ವರೀಶಭೂಷೆ ಸಲಹು ಜಗದೀಶೆ 1ಮೂಲ ಪ್ರಕೃತಿನೀನೆ ಮುನಿದು ನಿಂತರೆನ್ನಪಾಲಿಸುವವರ್ಯಾರುಪರಮಪಾವನ್ನೆ2ನಿನ್ನಾಧೀನವು ನಿಖಿಲ ಬ್ರಹ್ಮಾಂಡವುಮನ್ನಿಸು ಮಹಾದೇವಿ ಭಕ್ತಸಂಜೀವಿ 3ಗೋವೆಯಿಂದ ಬಂದೆ ಗೋವಿಂದಭಗಿನಿಸೇವಕಜನರಿಂದ ಸೇವೆ ಕೈಕೊಂಬೆ 4ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿಕರ್ತಲಕ್ಷ್ಮೀನಾರಾಯಣೀಕಲ್ಯಾಣಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ