ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾಲಿ ಪಾಡಿರೆ ಮುದ್ದು ಬಾಲಕಂದನಿಗೆ ಬಾಲಬ್ರಹ್ಮಚಾರಿಯಾದ ಕಪಿವರಗೆ ಪ. ಅಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಸಖನಿಗೆ ತುಡುಕಿ ವಜ್ರತನುವಾಗಿ ಸಂಜೀವ ತಂದು ಕಪಿಪುಂಜಗಳ ಸಲಹಿ ಮಂಜುಭಾಷಣ ರಾಮಪಾದ ದಾಸನಿಗೆ 1 ಪುಟ್ಟಿ ಕುಂತಿಯ ಉದರದಲಿ ಗಿರಿ ಒಡೆದು ದುಷ್ಟ ಕೀಚಕ ಬಕಾದಿಗಳ ಸಂಹರಿಸಿ ಕುಟ್ಟಿ ಕೌರವರ ಕುಲ ದ್ರೌಪದಿಯ ಕೂಡಿ ಪಟ್ಟವಾಳಿದ ಕೃಷ್ಣ ಪಾದಸೇವಕಗೆ 2 ಶ್ರೀಪತಿಯ ಆಜ್ಞೆಯಲಿ ವಿಪ್ರಸುತನಾಗಿ ಪಾಪಿ ದುರ್ಮತಗಳನು ತರಿದು ಮುರಿದೊಟ್ಟಿ ಸ್ಥಾಪಿಸುತ ಸಚ್ಛಾಸ್ತ್ರ ಯತಿಯಾಗಿ ಚರಿಸಿ ಗೋಪಾಲಕೃಷ್ಣವಿಠ್ಠಲನ ಮೆರೆಸಿದಗೆ 3
--------------
ಅಂಬಾಬಾಯಿ
ಸೇವಕಗೆ ದಯಮಾಡಲೊ ಹರಿ ದೇವ ನಿಮ್ಮ ಪಾವನಪಾದ ಭಾವದಿಂ ನಮಿಸಿ ಪಾವನನಾಗ್ವೆ ಪ ಕಲ್ಲನು ನಲ್ಲೆಯ ಮಾಡಿದ ಪಾದ ಕಳ್ಳನ ರಿಸಿಯೆಂದೆನಿಸಿದ ಪಾದ ನಲ್ಲೆಯ ಬೆಂಬಲ ನಿಂತಿರ್ದ ಪಾದ ಖುಲ್ಲ ಪೂತನಿಯ ಮೆಟ್ಟಿದ ಪಾದ1 ಮಂಕು ಕಾಳಿಂಗನ ತುಳಿದ ಪಾದ ಶಂಖಾಸುರನ ಒದೆದ ಪಾದ ಜಿಂಕೆಯನು ಹಿಂಬಾಲಿಸಿದ ಪಾದ ಪಾದ 2 ಭೂಮಿ ಓರಡಿ ಮಾಡಿದ ಪಾದ ಭಾಮೆ ದೃಢದಿ ಪೂಜಿಸಿದ ಪಾದ ಪ್ರೇಮದಿಂ ಭಕುತರನುದ್ಧರಿಪ ಪಾದ ಸ್ವಾಮಿ ಶ್ರೀರಾಮ ತವ ಕೋಮಲಪಾದ 3
--------------
ರಾಮದಾಸರು
ಹದ್ದೇಹಿ ಭಟರಿಂದ ಯಮನಾಜ್ಞೆಯಂತೆ ಪ ಶರಣಜನನಿಂದಕಗೆ ಪರಮಕುಂಭೀಪಾಕ ಪರಮಭೀಕರಜ್ವಾಲೆ ಕರುಣಶೂನ್ಯರಿಗೆ ಪರನಾರಿಗಳುಕುವಗೆ ಮೂತ್ರ ರಕ್ತಾಮೇಧ್ಯ ಉರುಬಾಧೆ ಕರ್ಮದುರ್ಗಾ ಪರಮ ನೀಚರಿಗೆ 1 ಮಾತಾಪಿತದೂಷಕಗೆ ಪ್ರೇತಕ್ರಿಮಿಕುಂತ ಭಯ ಪಾತಕಗೆ ರಾಕ್ಷಸರ ಭೂತಕ್ರಮಿದೀರ್ಘ ಘಾತಕಗೆ ಉಗ್ರತರ ವ್ಯಾಘ್ರಮುಖ ಭಟ ಶಿಕ್ಷೆ ರೋತು ಮಲತ ಮಜ್ಜ ನೀತಿಬಾಹಿರಗೆ 2 ಕಂಚಿನ್ವಾಯಸ ನರಕ ಕೇಳಾ ಕಪಟರಿಗೆ ಪಂಚಮಹಾಪಾತಕರಿಗುಳಿವಿನ ಉರುನರಕ ಕೂಪ 3 ಕಾದ ಉಕ್ಕಿನ ಪ್ರತಿಮೆ ಕಾಮಾಂಧ ಮೂಢರಿಗೆ ಕಾದು ಉರಿವರಗಿನೂಟ ಕಡುಲೋಭಿಗಳಿಗೆ ಕಾದ ಸೀಸದ ಮಡುವು ಮನೆಮುರುಕ ತುಂಟರಿಗೆ ಕಾದೆಣ್ಣೆಕೊಪ್ಪರಿಗೆ ಕುಟಿಲ ಕುಹಕರಿಗೆ 4 ಪರದ್ರವ್ಯಪಹಾರಿಗೆ ಭೇದಿ ಭೈರವಕೂಪ ನೆರೆನಂಬಿ ಕೊಲ್ಲವಗೆ ಮಸೆದಲಗುಕೊಡಲಿ ಪರರೊಗತನರಿದಗೆ ನರಕ ಚಂದ್ರಾರ್ಕಪರಿ ಗುರು ಹಿರಿಯರ್ಹಳಿದರಿಗೆ ಉರಿಸರಳ ಮಂಚ 5 ಕಾಲಯಮಪಾಶವು ತುಳಸಿದಳ ತುಳಿದವರಿಗೆ ಕಾಲಭೈರವ ಮೃತ್ಯು ಮಾಯಮೋಹಿಗಳಿಗೆ ಕಾಲಕರ ಶೂಲ ಕೊಂಡಿ ಚಾಂಡಾಲಗೆ ಸೂಳೆಯರ ಸೇವಕಗೆ ಕಾಲಯಮದಂಡ 6 ಸಂತ ಸಜ್ಜದಾನಸಂಗರಿಯದಧಮರಿಗೆ ಇಂತು ಎಂಬತ್ತು ಕೋಟಿ ನರಕಯಾತನವು ಅಂತಕಾರಿ ನಿನ್ನಾಜ್ಞೆಯಂತೆ ನಡೆಯುತಿವೆ ಎನ್ನ ಅಂತರದಿ ನಿಂತಿದನು ಗೆಲಿಸು ಶ್ರೀರಾಮ7
--------------
ರಾಮದಾಸರು
ವಾಯುಕುಮಾರಗೆ ಮಂಗಳ - ರಘು - |ರಾಯಸೇವಕಗೆ ಮಂಗಳ ಪ.ಅಂಜನಿಗರ್ಭಸಂಜಾತಗೆ ಮಂಗಳ |ರಂಜಿತ ದಿವ್ಯ ಮೂರ್ತಿಗೆ ಮಂಗಳ ||ಮಂಜುಳ ಕೀರ್ತಿ ಮಾಹತ್ಮ್ಯಗೆ ಮಂಗಳ |ಸಂಜೀವರಾಯಗೆ ಮಂಗಳ 1ದನುಜನಿಕರ ಸಂಹಾರಗೆ ಮಂಗಳ |ಜಾನಕಿಶೋಕ ವಿನಾಶಗೆ ಮಂಗಳ ||ವನಧಿ ವಿರೋಧಿಗೆ ಮಂಗಳ ಜಯ |ಹನುಮವಿಲಾಸಗೆ ಮಂಗಳ 2ಸೇತುವೆಗಟ್ಟಿದಾತಗೆ ಮಂಗಳ |ಸೀತೆಯ ತಂದ ಬಂಟಗೆ ಮಂಗಳ ||ಖ್ಯಾತ ಪುರಂದರವಿಠಲನ ಕರುಣೆಗೆ |ಪಾತ್ರನಾದ ಭಕುತೆಗೆ ಮಂಗಳ 3
--------------
ಪುರಂದರದಾಸರು