ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಹೋಗುವೆ ಮನದಿ ನಿಲ್ಲೊಂದು ಘಳಿಗೆ ಸೊಲ್ಲ ಲಾಲಿಸು ಲಕ್ಷ್ಮೀವಲ್ಲಭನೆ ನೀನು ಪ ನಡುನೀರೊಳಾಡುವೆಯೊ ಅನಿಮಿಷನು ನೀನಾಗಿ ಕಡುಭಾರದಿಂದಿಳಿವ ಗಿರಿಯನೆತ್ತುವೆಯೊ ಅಡವಿಯೊಳು ಚರಿಸುವೆಯೊ ಬಗೆದು ಬೇರನು ತಿನ್ನ ಲೊಡೆಯುವೆಯೊ ಕಂಭವನು ಘನ ಮಹಿಮೆಯಿಂದ 1 ಬೇಡಿ ದೈತ್ಯನ ನೀನು ಮೂರಡಿಯ ಭೂಮಿಯನು ಕಡು ಚೆಲ್ವ ಪಾದದಿಂದದಳೆಯ ಪೋಗುವೆಯೊ ಕೊಡಲಿಯೊಳು ಭೂಭುಜರ ಸಂತತಿಯ ಕೋಪದಿಂ ಕಡಿಕೊಂಬೆ ನೀನೆಂದು ಜಗವೆಲ್ಲ ಹೊಗಳುತಿದೆ 2 ವಾರಿಧಿಯ ಕಟ್ಟುವೆಯೊ ಬೆಟ್ಟವನು ತಂದಿಕ್ಕಿ ನಾರಿಯರ ಸೇರುವೆಯೊ ಕಡು ಮಮತೆಯಿಂದ ಶ- ರೀರದೊಳು ನಾಚಿಕೆಯ ಹೊರಗಿಡುವೆಯೊ ನೀನು ವಾರುವನನೇರುವೆಯೊ ಈರೈದ ತೋರುವೆಯೊ3 ಬೆಟ್ಟದೊಳು ನಿಲ್ಲುವೆಯೊ ಕಟ್ಟುವೆಯೊ ರೊಕ್ಕವನು ಶೆಟ್ಟಗಾರನುಯೆಂದು ಪೆಸರಿಟ್ಟೆಯೊ ವರಾಹ ತಿಮ್ಮಪ್ಪನೆಂಬುದನು ದೃಷ್ಟಿಯಲಿ ನೋಡಿ ಕಿವಿಗೊಟ್ಟು ಮಾತಾಡು 4
--------------
ವರಹತಿಮ್ಮಪ್ಪ
ಸಂಸಾರ ಶರಧಿಯೊಳು ಮುಳುಗಿ ಮುಳುಗಿ ಸಂಶಯವಿಲ್ಲದೆಬಳಲುತಿಹ ಮರುಗಿ ಮರುಗಿಪಅಜ್ಞಾನ ತಿಮಿರವೆಂಬ ವ್ಯಾಪಾರದೊಳೋಡಾಡಿಸುಜ್ಞಾನ ಜ್ಯೋತಿಯ ಬಿಡುಗಡೆಯ ಮಾಡಿಭಗ್ನ ಮಾಡಿಯೆ ಶಾಂತ ಬುದ್ಧಿಗಳನೇ ನೋಡಿಪ್ರಾಜÕನಾಗದೆ ಕೆಡುವೆ ನರಕವನು ಕೂಡಿ1ಕಾಲವಿಪರೀತದಿಂದ ಕೇಡುಬರೆ ನೀನದನುಕಾಲಲೊದೆಯದೆ ಬಹಳ ಚಿಂತೆಯನು ಮಾಡಿಓಲಗಿಸಿ ಮನದೊಳಗೆ ತಾ ಕೆಟ್ಟೆಯೆನ್ನುವನುಪಾಲಿಸುವರಿಲ್ಲೆಂದು ಸೇರುವೆಯ ನರಕವನು2ಬೇಡ ಮನದೆ ಇನ್ನುಖುಲ್ಲಗುಣಗಳ ಬಿಟ್ಟುಖೋಡಿಸಂಸಾರವೆಂಬುದನು ಸುಟ್ಟುಗೂಢ ಚಿದಾನಂದಾವಧೂತನೊಳು ಅಳವಟ್ಟುಕೂಡು ಕೆಲಸಾರದಲೆ ದೃಷ್ಟಿ ಆತ್ಮನಲಿಟ್ಟು3
--------------
ಚಿದಾನಂದ ಅವಧೂತರು