ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಸ್ತವನ ನೀ ದಯವಾಗು ಶುಭೋದಯ ಗಣಪತಿ ಕಾದುಕೊಂಡಿರು ಸಂತತಂ ಪ. ವಾದವಿರಲಿ ನಿಷುಸೀದ ಗಣಪನೆಂಬ ವೇದಾರ್ಥವ ಪರಿಶೋಧಿಸಿ ನಮಿಸುವೆ ಅ.ಪ. ಯದ್ಯದ್ವಿಭೂತಿಮದೆಂದು ಪೇಳಿದ ಪರಿಶುದ್ಧವಾದ ವಚನ ಶ್ರದ್ಧಾಪೂಜಿತ ಸಕಲ ದೇವರೊಳಗಿದ್ದು ಉಲಿವ ಕಥನ ಮಧ್ವಾಗಮ ಸಂಸಿದ್ಧವಾಗಿರೆ ವೃಥಾ ಪದ್ಧತಿ ತಿಳಿವದು ದುರಾಧ್ಯರಂತಿರಲಿ 1 ಸರ್ವದೇವ ನತಿಯೆಲ್ಲವು ಕೇಶವನಲ್ಲಿ ಸೇರುವದೆಂದು ಯಲ್ಲಾ ಕಡೆಯಲಿ ಚಲ್ಲದೆ ಜಲವ ಬೇರಲ್ಲಿ ಸುರಿಯಿರೆಂದು ಫುಲ್ಲನಾಭ ಶಿರಿವಲ್ಲಭ ವ್ಯಾಸರ ಸೊಲ್ಲ ತಿಳಿದು ನಿಂನಲ್ಲಿಗೆ ಸೇರಿದೆ 2 ವಿಘ್ನಮಹೌಘ ವಿದಾರಣ ಭವಸಂವಿಘ್ನಮನ:ಶರಣಾ ರುಗ್ಣಾತ್ವಾದಿ ನಿವಾರಣ ಸಂಗದ-ಭಗ್ನಸುರಾರಿ ಗಣಾ ನಗ್ನ ಚಿದಾತ್ಮಜ ನೀಲಾಭರಣ ಭ- ಯಾಗ್ನಿ ಶಮನ ನಿರ್ವಿಘ್ನದಿ ಕರುಣಿಸು 3 ಪುಂಡರೀಕ ನಯನ ಅಂಡಜಾಗಮನಾಖಂಡಲ ಸೈನಿಕ ಚಂಡವೈರಿ ಮಥನಾ ಪಂಡಿತ ಪಾಮರ ಸಮದೃಗಭೀಪ್ಸಿತ ಶುಭ ಮಂಡಲ ಮಧ್ಯಗ 4 ವಿಶ್ವಂಭರ ವಿಬುಧೇಶ ಗಣಾರ್ಚಿತ ವಿಶ್ವನಾಥವಿನುತಾ ವಿಶ್ವಜನಿಸ್ಥಿತಿ ಕಾರಣವಾರಣ ವಿಶ್ವಭೂತಿ - ಶರಣ ವಿಶ್ವಾಸಾನುಗುಣಾರ್ಥ ವಿಭಾವನ ವಿಶ್ವದೇವಗತ ವೆಂಕಟರಮಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪರಮಾತ್ಮನೆ ನೀ ಸರಿ ಎಂದು ಕರಗದ ತಮದಲ್ಲಿ ಸೇರುವದೆ ಪ ಜೀವ ಪರಮಾತ್ಮಗೆ ಭೇದವ ಆವಾವ ಕಾಲಕ್ಕೆಯಿಲ್ಲವೆಂದು ದೇವನ ಬಳಿಗೆ ನೀ ದೂರಾಗಿ ಈ ವಸುಧೆಯೊಳು ಬದುಕುವರೆ 1 ಭೇದ ಜೀವಕೆ ಜೀವ ಎಂದಿ ಗಾದರು ಇಲ್ಲವೆಂದು ನುಡಿದು ಈ ದುರಾಚಾರದಲ್ಲಿ ನಡೆದು ಮಾದಿಗನಂತೀಗ ಮಾರ್ಮಲಿದು2 ಜಡ ಪರಮಾತ್ಮ ಜಡ ಜಡಕೆ ಜಡ ಜೀವಕೆ ಅಭೇದವೆಂದು ಕಡುಗರ್ವದಿಂದಲಿ ಉಚ್ಚರಿಸಿ ಮಡಿದು ನರಕಕ್ಕೆ ಉರುಳುವರೆ 3 ಅರಸಿನ ಬಳಿಗೆ ತೋಟಿಗ ಬಂದು ಅರಸೆ ನೀನೆ ನಾನೆಂದಡೆ ಉರವಣಿಸಿ ಕೊಲ್ಲಿಸಿ ಅವನ ಶೆರಿಯ ಹಾಕದೆ ಮನ್ನಿಸುವನೆ 4 ದಾಸನ ದಾಸನು ಎಂದು ಏಸು ಜನ್ಮಕೆ ಅಹುದೆಂದು ದ್ವೇಷವು ತೊರೆದು ನೆನಿಸಿದರೆ ಮೀಸಲಾಗಿಡುವ ವಿಜಯವಿಠ್ಠಲಾ 5
--------------
ವಿಜಯದಾಸ
ಯಾಚಕ ಜನ್ಮಾ ಯಾಕೆ ಬರೆದನೊ ಬ್ರಹ್ಮಾ ನಾಚಿಕೆಯಾಗಿ ನಷ್ಟಾಗುವಂತೆ ಸ್ವಧರ್ಮಾ ಪ ಒಡಲಾಶೆಗಾಗಿ ಹೊಲೆಯನ ಹೊಗಳಬೇಕು ಕಡುಲೋಭಿಯಾದ ಅರಸನೋಲಗವೆ ಸಾಕು ಬಡತನವೆಂದು ಪರರ ಸೇರುವದೆ ಸಾಕು ಒಡಲು ಪರಾಕು 1 ತ್ಯಾಗದಿ ಕರ್ಣಾ ಭೋಗದಿ ದೇವೇಂಧ್ರನೆಂದು ಕೊಂಡಾಡಲು ಪೋಗಿ ಬಾ ನಾಳೆ ಎಂದು ಎನುತ ಪೇಳಲಾಗಿ ಬೈದಾಡುತ ಬಂದು ಬಳಲುತಿರಲಾಗ ಚಿತ್ತಕ್ಕೆ ತಂದು 2 ಪರ್ವತವನ್ನು ಕಂಡು ಕೈತಿಕ್ಕಿ ಕೋರಿದೆ ಬರಿದೆ ಇಂಥಾ ಗರ್ವದಿಂದುಕ್ಕಿ ಏರಿದೆ ಗುರುವಿಮಲಾನಂದ ಸರ್ವೋತ್ತಮನ ನೆನೆಯ ಬಾರದೇ 3
--------------
ಭಟಕಳ ಅಪ್ಪಯ್ಯ