ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಜನಯ್ಯನ ಚಿಂತಿಸು ಮನವೇಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ಪ ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿಕಾಲಪಾಶದೊಳಿಟ್ಟು ಶೂಲದಿಂದಿರಿವಾಗಪಾಲಿಸುವರುಂಟೆ ಜಾಲವ ಮಾಡದೆ 1 ದಂಡಧರನ ಭಟರು ಚಂಡಕೋಪದಿ ಬಂದುಕೆಂಡದ ನದಿಯ ತಡಿಗೆ ಕೊಂಡೊಯ್ದುಖಂಡಖಂಡವ ಕಿತ್ತು ಕೆಂಡದೊಳಿಡುವಾಗಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ 2 ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡುಕಂಗಳಿಗೆ ಸೀಸವ ಕಾಸಿ ಪೊಯ್ಯಲುತಂಗಿ ಅಕ್ಕ ಬಂದು ಭಂಗವ ಬಿಡಿಸುವರೆಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ 3
--------------
ಶ್ರೀಪಾದರಾಜರು
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಮರೆಯದಿರೆಲೆ ಮನವಿಲ್ಲಿ - ಯಮಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.ಪರನಾರಿಯರ ಸಂಗವಿಲ್ಲಿ - ಉಕ್ಕುಎರೆದ ಸತಿಯರ ತಕ್ಕೈಸುವರಿಲ್ಲಿಗುರು - ಹಿರಿಯರ ನಿಂದೆಯಿಲ್ಲಿ - ಬಾಯೊಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1ಉಂಡ ಮನೆಯ ಕೊಂಬುದಿಲ್ಲಿ - ಎದೆಗುಂಡಿಗೆಯನು ಸೀಳಿ ಕೊಲುತಿಹರಲ್ಲಿಗಂಡನ ದಣಿಸುವುದಿಲ್ಲಿ - ಯಮಕುಂಡದೊಳಗೆ ಹಾಕಿ ಕುದಿಸುವರಲ್ಲಿ 2ಚಾಡಿಯ ಹೇಳುಸುದಿಲ್ಲಿ - ನುಡಿದಾಡುವ ನಾಲಿಗೆ ಕೇಳುವರಲ್ಲಿಬೇಡಿದರಿಗೆ ಧರ್ಮವಿಲ್ಲಿ - ಇದನೀಡದಿರಲು ಒದ್ದು ನೂಕುವರಲ್ಲಿ 3ಪುಸಿ - ಠಕ್ಕು - ಠವುಳಿಗಳಲ್ಲಿ -ಕಟ್ಟಿಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿಅಶನಪ್ರಭದಿಗಳಲ್ಲಿ - ಮಾಡೆಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4ಸಿರಿಮದದೊಳಗಿಹುದಿಲ್ಲಿ - ಸೊಕ್ಕಮುರಿದು ಹಲ್ಲುಗಳ ಕಳಚುವರಲ್ಲಿಪುರಂದರವಿಠಲನ ಇಲ್ಲಿ - ನೆನೆಯಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5
--------------
ಪುರಂದರದಾಸರು
ಯಮ ತನ್ನ ಪುರದಿ ಸಾರಿದನು ನಮ್ಮಕಮಲನಾಭನ ದಾಸರ ಮುಟ್ಟದಿರಿ ಎಂದು ಪ.ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತನಿಜ ದ್ವಾದಶನಾಮ ಧರಿಸಿಪ್ಪರ ||ತ್ರಿಜಗವಂದಿತಳಾದ ತುಳಸೀ ಮಾಲಿಕೆಯುಳ್ಳಸುಜನರ ಕೆಣಕದೆ ಸುಮ್ಮನೆ ಬನ್ನಿರೊ ಎಂದು 1ತಾಳದಂಡಿಗೆ ಗೀತವಾದ್ಯ ಸಮ್ಮೇಳದಿಊಳಿಗವನು ಮಾಳ್ಪ ಹರಿದಾಸರ ||ಕೇಳಿದೊಡನೆ ಕರವೆತ್ತಿ ಮುಗಿದು ಯಮನಾಳುಗಳೆಂದು ಹೇಳದೆ ಬನ್ನಿರೊ ಎಂದು 2ಹೆಮ್ಮೆಯ ಸಿಡಿಯೇರಿ ಬೇವಿನುಡುಗೆಯುಟ್ಟುಚಿಮ್ಮುತ ಚೀರುತ ಬೊಬ್ಬೆಯಿಟ್ಟುಕರ್ಮಕೆ ಗುರಿಯಾಗಿ ಪ್ರಾಣಹಿಂಸೆಯ ಮಾಳ್ಪಬ್ರಹ್ಮೇತಿಕಾರನೆಳತನ್ನಿರೋ ಎಂದು 3ಮಾತಾಪಿತರ ದುರ್ಮತಿಯಿಂದ ಬೈವರಪಾತಕಿಗಳ ಪರದ್ರೋಹಿಗಳನೀತಿಯಿಲ್ಲದೆ ವಿಮೋಹಿಸಿದವರ ಬಾಯೊಳುಒತ್ತಿ ಸೀಸವ ಕಾಸಿ ಹೊಯ್ದು ಕೊಲ್ಲಿರಿ ಎಂದು 4ನರರ ಹಾಡಿ ಪಾಡಿ ನರರ ಕೊಂಡಾಡುವನರಕಿಗಳ ಕೀಳುನಾಯ್ಗಳ ಮನ್ನಿಸುವದುರುಳ ಜಾÕನಿಜನರನೆಳೆತಂದು ಬಾಯೊಳುಅರಗನೆ ಕಾಯಿಸಿ ಹೊಯ್ದು ಕೊಲ್ಲಿರಿ ಎಂದು 5ಕೇಶವಹರಿ ಎಂಬ ದಾಸರ ಹೃದಯದಿವಾಸವಾಗಿಹಸಿರಿ ತಿರುಮಲೇಶದಾಸರ ದಾಸರ ದಾಸನೆನಿಪಹರಿದಾಸರನ್ನು ಕೆಣಕದೆ ಬನ್ನಿರೋ ಎಂದು 6ಅನ್ಯಮಂತ್ರವ ಬಿಟ್ಟು ದೈವಮಂತ್ರವ ಭಜಿಸಿಪನ್ನಗಶಯನನೆ ಗತಿಯೆನ್ನುತತನ್ನ ಭಕ್ತರ ಕಾಯ್ವ ಪುರಂದರವಿಠಲನಉನ್ನತದಲಿ ನಮಸ್ಕರಿಸಿ ಬನ್ನಿರೊ ಎಂದು 7
--------------
ಪುರಂದರದಾಸರು