ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀಸಪದ್ಯ ಧರಣಿ ಮೊರೆಯನು ಕೇಳಿ ಸರಸಿಜಾಸನ ಸಕಲ ಸುರರ ಸಹಿತದಿ ಶರಧಿಶಯನಗÀರುಹೆ ವಸುದೇವ ದೇವಕಿ ಸುತನೆನಸಿ ಅಜನಯ್ಯ ವಸುಮತಿಯಲವತರಿಸಿ ಲೀಲೆಯಿಂದ ದುರುಳ ದೈತ್ಯರ ಸದೆದು ಪರಿಪಾಲಿಸಿದ ಸಾಧು ಸುಜನರನ್ನು ನಿಜಭಕ್ತ ಪಾಂಡವರ ನೆಂಟನೆಂದೆನಿಸಿ ಭೂ ಭುಜ ಸುಯೋಧನ ಮುಖ್ಯ ದುರುಳರನ್ನು ಸದೆಬಡಿಸಿದಾ ಬಳಿಕ ಮದದಿ ಕೊಬ್ಬಿದ ಯದು ಬಳಗವನು ವಿಪ್ರಶಾಪದಿಂದ ಕೊಲಿಸಿ ಪದುಮಸಂಭವಜನಕ ಕರಿಗಿರೀಶನು ತನ್ನ ಸದನಕ್ಕೈದಿದ ಸರ್ವವ್ಯಾಪ್ತ ಸರ್ವೇಶ
--------------
ವರಾವಾಣಿರಾಮರಾಯದಾಸರು
ಸೀಸಪದ್ಯ ಪ್ರಳಯ ರುದ್ರನ ಕೋಪಕ್ಕೆಮ್ಮಡಿಯ ಕೋಪದಿಂ ದ ಲಘು ಶಾಪವ ಮುನಿಯು ಕೊಟ್ಟರಂಜೆ ಕಡುಕಷ್ಟ ಕೋಟಲೆಯು ದುಃಖ ದಾರಿದ್ರಗಳು ಒಡನೊಡನೆ ಬಂದೊದಗೆ ನಡುಗೆ ನಾನು ಶರಭ ವೃಶ್ಚಿಕ ಸರ್ಪ ಮೊದಲಾದ ಬಲು ಕ್ರೂರ ಪ್ರಾಣಿಗಳ ಬಾಧೆಗಂಜೆ ಅಸಿಧಾರೆಗಂಜೆ ಇನ್ನಸು ಪೋಗುವುದಕಂಜೆ ವಸುಧೀಶರಾಗ್ರಹಕೆ ಲವಲೇಶವಂಜೆ ಉರಿಗಂಜೆ ಸೆರೆಗಂಜೆ ಹರಣದ ಭಯಕಂಜೆ ಕರಿಗಿರೀಶನ ಕರುಣವೊಂದಿರಲು ಎನಗೆ ಒರೆದ ವಚನಕೆ ಅನೃತ ಸಂಘಟಿಸಲದಕೆ ನೆರೆ ಅಂಜುವೆನು ನಾನು ಇನ್ನೊಂದಕಂಜೆ
--------------
ವರಾವಾಣಿರಾಮರಾಯದಾಸರು
ಸೀಸಪದ್ಯ ಮಕರ ಭಾದೆಗೆ ಸಿಲುಕಿ ಕರಿರಾಜ ತಾ ಕರೆಯೆ ಭರದಿ ನೀ ಬಂದೆ ತಂದೆ ಭಾಧಿಸುತಿರಲು ಕಂದ ಪ್ರಹ್ಲಾದನನು ಸಂದೇಹವಿಲ್ಲದೆಲೆ ಬಂದು ಕಾಯ್ದೆ ವಿಪಿನದಲಿ ಧ್ರುವರಾಯ ತಪವಗೈಯುತಲಿರಲು ಕೃಪೆಯಿಂದ ಮೈದೊರ್ದೆ ಕೃಪಣವತ್ಸಲನೇ ಮರಣ ಕಾಲದಿ ಮಗನ ಕರೆದಜಾಮಿಳನಂದು ಕರುಣದಿಂದಲಿ ಪೊರೆದೆ ಕರುಣ ಶರಧೆ ದುರುಳ ಸೆರಗ ಸೆಳೆಯುತಿರೆ ನೊಂದು ಚೀರಿಡಲಕ್ಷಯಾಂಬರವನಿತ್ತೆ ಇಂದು ನೀನಲ್ಲದೆಲೆ ಕಾಯ್ವರಿನ್ನಾರಿಹರು ತಂದೆ ನೀ ಮೈದೋರು ಶ್ರೀ ಕರಿಗಿರೀಶ
--------------
ವರಾವಾಣಿರಾಮರಾಯದಾಸರು
ಸೀಸಪದ್ಯ ಸುಂದರಾಂಗನ ಪಾದಕೊಂದಿಸುತ ಭಕ್ತಿಯಲಿ ಮಂದರೋದ್ಧಾರ ಮುಚುಕುಂದ ವರದ ನೆಂದು ಸ್ತುತಿಸುವ ಭಕ್ತವೃಂದವನು ರಕ್ಷಿಸುವ ಕುಂದನೆಣಿಸದಲೆ ನಾರಸಿಂಹ ಹರಿಯು 1 ಇಂದಿರಾರಮಣಗೆ ಜಯ ಗೋವಿಂದ ಗೋಪಕುಮಾರ- ನೆಂದವರ ಬಂಧನವ ಬಿಡಿಸಿ ಕಾಯ್ವ ಕಂದರ್ಪಜನಕ ಕಮಲಾಕ್ಷ ಹರಿ ಗತಿ ಎನುತ ಬಂದವನ ಕೈ ಬಿಡನು ಇಂದಿರೇಶ 2 ದುಂದುಭಿ ವತ್ಸರದಿ ಸುಜನರೆಲ್ಲ ತಂದೆ ಕಮಲನಾಭ ವಿಠ್ಠಲನೆನುತ ಒಂದೆ ಮನದಲಿ ಭಜಿಸಿ ಸ್ತುತಿಪ ಜನರ ಚಂದದಲಿ ಕಾಯ್ವ ನಾರಸಿಂಹ ಹರಿಯು3
--------------
ನಿಡಗುರುಕಿ ಜೀವೂಬಾಯಿ