ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗ್ರ ನರಸಿಂಹ ಜ್ವಾಲಾ ಉಗ್ರನರಸಿಂಹಶೀಘ್ರದಿ ಬಂದು ಪ್ರಹ್ಲಾದನ ಮೊರೆಯನುಕೇಳ್ವ ಅಸುರನ ಸೀಳ್ವಾ ಪ ಫಳ ಫಳಯೆನುತಾರ್ಭಟಿಸುತ ಕುಂಭದ ಲೊಡೆದು ಕೋಪವ ಝಡಿದು ಛಿಳಿ ಛಿಳಿಛಿಳಿರನೆ ಕಣ್ಣಲಿ ಕೆಂಗಿಡಿಯುಗುಳೇ ದಿವಿಜರು ಪೊಗಳೇಭಳಿ ಭಳಿ ಭಳಿರೆಂದಬ್ಬರಿಸುತ ದುಂದುಭಿ-ಯೊದರೇ ಅಸುರರು ಬೆದರೇಝಳಪಿಸಿ ಖಡುಗದಿ ರಕ್ಕಸ ಬಲವನು ತರಿದಾ ಶಿಶುವನು ಪೊರೆದಾ 1 ಭುಗು ಭುಗಲೆನೆ ನಾಸಿಕದಿ ಉಸುರ್ಹೊಗೆ ಹೊರಟು ಖಳನುದ್ದುರುಟುಜಿಗಿ ಜಿಗಿದವನನು ಕೆಡಹಿ ತೊಡೆಯೊಳಗಿಟ್ಟು ರೋಷವ ತೊಟ್ಟುಬಗೆದುದರವ ರಕ್ತವ ನೊಕ್ಕುಡಿತೆಯಲಿ ಸುರಿದು ತಾ ಚಪ್ಪರಿದುಸೊಗಸು ಉರಕೆ ಕರುಳ ಮಾಲೆಯ ಹಾಕಿದ ದೇವ ಭಕ್ತರಕಾಯ್ವ2 ಹಿರಣ್ಯಕಶಿಪನ ಹತ ಮಾಡಿದ ಭಕ್ತ ಪ್ರಹ್ಲಾದನಿಗೆ ಆಹ್ಲಾದದವರವನು ಪಾಲಿಸಿ ಸುರರನು ಪೊರೆದುಕರುಣದಿ ಸುರಿದು ಧರಣಿಯೊಳಗೆ ಪೆ-ಸರಾಗಿಹ ಅಹೋಬಲ ಸ್ಥಳದಿ ನೀನಾ ನೆಲದಿಗುರು ಚಿದಾನಂದ ಅವಧೂತರೆನಿಪ ದಾತಾ ಸಜ್ಜನ ಪ್ರೀತಾ 3
--------------
ಚಿದಾನಂದ ಅವಧೂತರು
ಇಂದಿರಾರಾಧ್ಯನೆ ಬಂದು ನಿಲ್ಲೊ ಪ ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ- ನೆಂದು ಕರೆಯಲೋ ಗೊವಿಂದ ಅ.ಪ ಜಲದೊಳಾಡುವ-ಕಲ್ಲಹೊರುವ ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ ವನಳಿವಗೋವನೆ ಕಾಯ್ದ ಮರೆವ ನಿನ್ನಯ ರೂಪವಾ ಸಲಿಲ ಹೊಕ್ಕು ಅಸುರನ ಸಂಹರಿಸಿ ಕಲಕಿಶರಧಿಯ ಸುಧೆಯನು ತರಿಸಿ ನೆಲಗಳ್ಳನ ಮದವನೆ ಮರ್ದಿಸಿ ಚೆಲುವಚೆಳ್ಳುಗುರಿನಿಂದುದರವ ಛೇದಿಸಿ ಸುಲಭದಿಂದ ಶುಕ್ರನ ಕಣ್ಮರಿಸಿ ಬಲುಕೊಬ್ಬಿದ ಕ್ಷತ್ರಿಯರನೊರೆಸಿ ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ ಲೀಲೆಯಿಂದ ವ್ರಜನಾರಿಯರೊಲಿಸಿ ಸಲೆದಿಗಂಬರರೂಪವ ಧರಿಸಿ ಮಾಧವ 1 ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ ಎಲ್ಲವೇದವನುದ್ಧರಿಸಿ ವಾರಿಧಿಯಲಿ ತಳೆದು ಅಮೃತಮಥನಕೆ ಶಿಲೆಯ ಝಲಿಸಿ ನಿಲಸಿದೆ ನಿಜಕೆ ಧರಣಿಯ ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ ಬಿಲ್ಲನೆತ್ತಿ ವರಿಸಿದೆ ಸೀತೆಯ ಮಲ್ಲರ ಮಡುಹಿ ತೋರಿದೆ ಚರಿಯ ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ 2 ನಿಗಮತಂದಿತ್ತೆ ನಗವಾನೆ ನೆಗವಾ ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ ಎಂದೆನಿಸಿ ಮೆರೆವ ನಿನ್ನಯ ರೂಪವಾ ಪೊಗಲಳವೇ ಭೂಧವ ನಿಗಮಕಾಗಿ ನೀ ತಮನ ಮರ್ದಿಸಿ ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ ಹಗೆಯ ಹಿರಣ್ಯನ ಅಸುವನೆ ಹರಿಸಿ ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ ಆ ಗರ್ವಿಸಿದರಸರ ಪರಶುವಿಂದ ವರೆಸಿ ಯಾಗರಕ್ಷಣೆಗೆ ನೀ ರಕ್ಷಕನೆನಿಸಿ ನೀಗಲು ಕುರುಕುಲ ಕಲಹವೆಬ್ಬಿಸಿ ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ ಬೇಗ ಬಂದು ಹಯವೇರಿ ಮೆರೆವ- ಬೇಗದಿ ತೋರೋ ಶ್ರೀಪಾದವಾ 3
--------------
ಉರಗಾದ್ರಿವಾಸವಿಠಲದಾಸರು
ಭಗವಂತನ ಸಂಕೀರ್ತನೆ ಏನಿದು ರೂಪ ಶ್ರೀ ನರಹರೆ ಪ ಏನಿದು ರೂಪವೋ ಮನಸಿಜನಯ್ಯನೇ ನೆನಿಸಿದವರ ಹೃದ್ವನಜದೊಳ್ ಮೆರೆವುದೂ ಅ.ಪ ಮಾರನ ಪಿತನೆಂದು ಕರೆಸಿ ಕೊಂಬುವನಿಗೆ ಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು 1 ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳು ಕ್ರೂರ ರೂಪದಿಂದ ನರರಿಗೆ ತೋರ್ಪುದು 2 ವರ ವೈಜಯಂತಿಯ ಕೊರಳೊಳ್ ಧರಿಸುವಗೆ ಕರುಳ ಹಾರವ ಧರಿಸಿ ವರ ಶಬ್ದ ಮಾಳ್ವೊದು 3 ನಾನೇ ದೇವರು ಮತ್ತು ಅನ್ಯರಿಲ್ಲೆಂಬುವ ಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು 4 ತರಳ ಕರದಾಕ್ಷಣದಿ ವರ ವೈಕುಂಠವ ಬಿಟ್ಟು ನರಹರಿ ಎನಿಸಿ ನೀ ಭರದಿ ಬಂದಿರುವುದು 5
--------------
ಪ್ರದ್ಯುಮ್ನತೀರ್ಥರು
ಭಾಗವತ 342 ಆಗಮದಸಾರ ಶಾಸ್ತ್ರವಿಚಾರ ಪೌರಾಣ ಯೋಗತತ್ವಗಳ ಶೃಂಗಾರವೆನಿಸುತಿಹ ಶ್ರೀ ಭಾಗವತಮಂ ಪೇಳ್ವೆಸಂಕ್ಷೇಪದಿಂದ ಹನ್ನೆರಡು ಪದ್ಯಂಗಳಾಗಿ ಗುರುಸುತನ ಬಾಣದುಪಹತಿಗೆ ಮೊರೆಯಿಡುವಉ ತ್ತರೆಯ ಗರ್ಭವ ಶೌರಿರಕ್ಷಿಸಲ್ ಬಳಿಕಧರೆ ರಾಜ್ಯವಾಳುತಿರೆವಿಷ್ಣುರಾತಂ ವರಶಮೀಕಾತ್ಮಜನ ಶಾಪಬರೆತಾಕೇಳಿ ಪರಮವೈರಾಗ್ಯದಿ ಕುಶಾಸ್ತರಣದೊಳಿರಲ್ ಪ್ರಥಮಸ್ಕಂಧದೋಳ್ ತಿಳಿವುದು 1 ಸಾರವಾಗಿಹ ಭಕ್ತಿಯೋಗಮಂ ಪೂರ್ವದೋಳ್ ನಾರದಗೆ ವಿಧಿವೇಳ್ದ ಸೃಷ್ಟಿಯಕ್ರಮಂ ಪ್ರಳಯ ತನ್ನಪುರಮಂ ತೋರಿಸಿ ಚಾರುಭಾಗವತ ತತ್ವೋಪದೇಶದಿ ಸೃಷ್ಟಿ ಗಾರಂಭ ಮಾಡಿಸಿದನೆಂದು ಶುಕಮುನಿವರಂ ತಿಳಿವುದು 2 ವಿದುರ ಮೈತ್ರೇಯ ಸಂವಾದಮಂ ಸೃಷ್ಟಿಯ ಭ್ಯುದಯವಂ ಸ್ವಾಯಂಭುವಿನಜ ನನವಹರೂ ಪದ ಹರಿಯಚರಿತ ಸನಕಾದಿಗಳ್ ಜಯವಿಜಯರಿಗೆ ಕೊಟ್ಟ ಶಾಪತೆರನು ಉದಿಸಿದಂಹರಿಕರ್ದಮಂಗೆ ಕಪಿಲಾಖ್ಯದಿಂ ವಿದಿತವಾಗಲ್ ತಾಯಿಗರುಹಿದಂಸಾಖ್ಯಯೋ ತೃತೀಯಸ್ಕಂಧದೋಳ್ ತಿಳಿವದು 3 ಶಿವನ ವೈರದಿನಕ್ಷಯಾಗವಂ ಮಾಳ್ಪುದಂ ತವಕದಿಂ ಕೆಡಿಸಿ ಶಂಕರನು ಕರುಣಿಸುವದಂ ಧೃವಚರಿತಮಂಗವೇನರಚರಿತ್ರೆಗಳ್ ಪೃಥುಚಕ್ರವರ್ತಿ ಜನನ ಅವನಿಗೋರೂಪಿಯಾಗುತ ಸಕಲವಸ್ತುಸಾ ರವಕೊಡುವದುಂ ಪ್ರಚÉೀತಸರುಪಾಖ್ಯಾನಮಂ ತವೆಪುರಂಜನನುಪಾಖ್ಯಾನಮಂ ಯಿದುಚತುರ್ಥ ಸ್ಕಂಧದೋಳ್ ತಿಳಿವದು 4 ವರಪ್ರಿಯ ವ್ರತಚರಿತೆಯಾಗ್ನೀಧ್ರಚರಿತೆಯುಂ ಹರಿಯ ಋಷಭಾವತಾರದ ಮಹಾಮಹಿಮೆಯಂ ಭೂಗೋಳವಿಸ್ತಾರವು ಎರಡನೆ ಖಗೋಳದೋಳ್ ವಾಯ್ವಾದಿಮಂಡಲವಿ ವರಗಳುಂ ನರಕಾದಿ ವರ್ಣನೆಯ ಸಂಖ್ಯೆಯುಂ ಯಿದುಪಂಚಮಸ್ಕಂಧದೋಳ್ ತಿಳಿವದು 5 ಯರ ಜನನಮಂ ವಿಶ್ವರೂಪಾಖ್ಯಭೂಸುರಂ ವೃತ್ರಾಸುರನ ಕೊಲ್ವುದುಂ ಭರದಿ ಬೆನ್ಹತ್ತಿಬಹ ಬ್ರಹ್ಮಹತ್ಯವ ಸುರಪ ಧರಣಿಜಲ ವೃಕ್ಷಸ್ತ್ರೀಯರಿಗೆ ಭಾಗಿಸಿದುದಂ ತಿಳಿವದೂ 6 ವಿಧಿಯವರದಿ ಹಿರಣ್ಯಕಶ್ಯಪನು ಗರ್ವದಿವಿ ಬುಧರಂ ಜಯಿಸುವದುಂ ತರಳ ಪ್ರಹ್ಲಾದನ ನರಸಿಂಹನಾಗಿ ಹರಿಯು ಮದಮುಖನ ಸೀಳ್ವುದಂಪ್ರಹ್ಲಾದನೃಪನಜಗ ರದಮುಖದಿ ವರ್ಣಾಶ್ರಮದ ಧರ್ಮಕೇಳ್ವುದಂ ತಿಳಿವದು 7 ಮನುಗಳ ಚರಿತ್ರೆಗಳ್ ಗಜರಾಜ ಮೋಕ್ಷವಂ ದನುಜ ದಿವಿಜರು ಶರಧಿಯಂಮಥಿಸೆವಿಷವರು ಹರಿಸುರರಿಗೀಯ್ಯೆ ಅನಿಮಿಷರ ಗೆದ್ದು ಬಲಿ ಶತಕ್ರತುವಮಾಳ್ಪುದಂ ವನಜಾಕ್ಷ ವಟುವೇಷದಿಂ ದವಗೆಲ್ವುದಂ ತಿಳಿವದು 8 ಇನವಂಶ ರಾಜರಚರಿತ್ರೆಯೋಳಂಬರೀ ಷನ ಮಹಿಮೆ ಯಿಕ್ಷಾ ್ವಕುರಾಜನಚರಿತ್ರ ರಾ ಚಂದ್ರವಂಶಾನುಚರಿತಂ ವನಿತೆಯುಂ ಪುರುಷನಾಗಿದ್ದಿಳನ ಚರಿತಶು ಕ್ರನ ಮಗಳ ಶರ್ಮಿಷ್ಠೆಯರಚರಿತೆಯದುವೂರು ನವಮಸ್ಕಂಧದೋಳ್ ತಿಳಿವದು 9 ಹರಿ ದೇವಕೀ ಪುತ್ರನಾಗಿ ಗೋಕುಲದಿ ಪರಿ ಪರಿಲೀಲೆಗಳತೋರಿ ದುಷ್ಟರಂಸದೆದುತಾಂ ಪಿತೃಮಾತೃಗಳಸೆರೆಯಬಿಡಿಸಿ ವರವುಗ್ರಸೇನಂಗೆ ಪಟ್ಟಮಂಗಟ್ಟಿಸಾ ಗರದಿ ಪುರವಂರಚಿಸಿ ಬಲುತರುಣಿಯರ ಕೂಡಿ ತಿಳಿವದು 10 ನೆಸಗಿದಂ ಯದುಕುಲಕೆ ಹರಿಯಸಂಕಲ್ಪದಿಂ ಪರಮಾತ್ಮತತ್ವಬೋಧೆಯನರುಪಿದಂ ಮುಸಲದಿಂ ಯಾದವರಕ್ಷಯವೈದಲನ್ನೆಗಂ ಬಿಸಜನಾಭಂ ರಾಮನೊಡನೆ ತಾತೆರಳಿದಂ ಕರೆದೊಯಿದನೇಕಾದಶಸ್ಕಂಧದೊಳ್ 11 ಪರೀಕ್ಷಿತ ಮಹಿಪಾಲತಾಂ ಕೇಳಿದಂ ಶುಕನಿಂದಸಕಲಮುಂ ಕಲಿಕಾಲ ಸೂತಶೌನಕಾದಿಗಳಿಗಿದನು ಪೇಳಿದಂ ಬಾದರಾಯಣನ ಕೃಪೆಯಿಂದಲಿದ್ವಿ ಜಾಳಿ ಹರುಷದ ಕಡಲೊಳೀಜಾಡಿದುದುರಮಾ ಲೋಲನ ಮಹಾಲೀಲೆಯವತಾರಮದ್ಭುತಂ- -ದ್ವಾದಶಸ್ಕಂಧವಿದುವೆ 12 ಇಂತೀ ಪರಿಭಾಗವತ ಶಾಸ್ತ್ರಮಂ ಸಂತರಡಿಗಳಿಗೆರಗಿ ಪೇಳ್ದೆ ಸಂಕ್ಷೇಪದಿಂ ಕಂತುಪಿತಗÀುರುರಾಮವಿಠಲತಾಂಹೃದಯದೋಳ್- -ನಿಂತುನುಡಿಸಿದತರದೊಳು ಸ್ವಾಂತನಿರ್ಮಲರಾಗಿ ಪಠಿಸುವರಿಗನುದಿನಂ ಚಿಂತಿತಾರ್ಥಂಗಳಿಹಪರಸೌಖ್ಯವಿತ್ತುಶ್ರೀ ಕಾಂತ ಗುರುರಾಮವಿಠಲ ಪೊರೆವಜಯ- -ಜಯಮನಂತಮಹಿಮಂಗೆನಿರತಂ 13
--------------
ಗುರುರಾಮವಿಠಲ
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು